ಪಾಟ್ನಾ: ತೆಲಂಗಾಣ ಮುಖ್ಯಮಂತ್ರಿ, ಬಿಆರ್‌ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ತಮ್ಮ ರಾಜಕೀಯ ಲೆಕ್ಕಾಚಾರವನ್ನು ಬದಲಾಯಿಸಿದ್ದಾರೆ. ಹೌದು, ಫೆ.17ಕ್ಕೆ ತೆಲಂಗಾಣದ ಹೊಸ ಸಚಿವಾಲಯದ ಉದ್ಘಾಟನೆಗಾಗಿ ಬಿಹಾರದ ನಿತೀಶ್ ಕುಮಾರ್ ಅವರನ್ನು ಆಹ್ವಾನ ನೀಡಿದ್ದಾರೆ. ಹತ್ತು ದಿನಗಳ ಹಿಂದೆ ದೆಹಲಿ ಸಿಎಂ, ಎಎಪಿ ನಾಯಕ ಕೇಜ್ರಿವಾಲ್ ಹಾಗೂ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಖಮ್ಮಂ ಅವರನ್ನು ಆಹ್ವಾನಿಸಿದ್ದರು. ಆದರೆ, ಸಾರ್ವಜನಿಕ ಸಭೆಯಿಂದ ನಿತೀಶ್ ಅವರನ್ನು ಕೈಬಿಡಲಾಗಿತ್ತು ಎಂದು ಕೆಸಿಆರ್ ಸ್ಪಷ್ಟಪಡಿಸಿದ್ದರು.
ಬಿಹಾರ ಉಪಮುಖ್ಯಂತ್ರಿ ತೇಜಸ್ವಿ ಯಾದವ್ ಅವರಿಗೂ ಕೆಸಿಆರ್ ಆಹ್ವಾನ ನೀಡಿದ್ದರು. ಕಾರ್ಯಕ್ರಮದ ನಂತರ ತೆಲಂಗಾಣ ಮುಖ್ಯಮಂತ್ರಿ ಸಾಮಾನ್ಯ ಸಭೆಯನ್ನೂ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಎದುರಿಸಲು ಪರಿಣಾಮಕಾರಿಯಾದ ತೃತೀಯ ರಂಗ ರಚನೆಗೆ ಭರ್ಜರಿ ಸಿದ್ಧತೆಗಳು ಭರದಿಂದ ಸಾಗಿವೆ ಎಂಬ ಊಹಾಪೋಹಗಳು ದಟ್ಟವಾಗಿವೆ.
-
Tamil Nadu CM Sri @MKStalin, Jharkhand CM Sri @HemantSorenJMM, Bihar Deputy CM Sri @YadavTejashwi, JDU President Sri @LalanSingh_1 as the representative of Bihar CM @NitishKumar and Dr. B.R. Ambedkar's Grandson Sri @Prksh_Ambedkar will participate in the inauguration event.
— Telangana CMO (@TelanganaCMO) January 24, 2023 " class="align-text-top noRightClick twitterSection" data="
">Tamil Nadu CM Sri @MKStalin, Jharkhand CM Sri @HemantSorenJMM, Bihar Deputy CM Sri @YadavTejashwi, JDU President Sri @LalanSingh_1 as the representative of Bihar CM @NitishKumar and Dr. B.R. Ambedkar's Grandson Sri @Prksh_Ambedkar will participate in the inauguration event.
— Telangana CMO (@TelanganaCMO) January 24, 2023Tamil Nadu CM Sri @MKStalin, Jharkhand CM Sri @HemantSorenJMM, Bihar Deputy CM Sri @YadavTejashwi, JDU President Sri @LalanSingh_1 as the representative of Bihar CM @NitishKumar and Dr. B.R. Ambedkar's Grandson Sri @Prksh_Ambedkar will participate in the inauguration event.
— Telangana CMO (@TelanganaCMO) January 24, 2023
ಪ್ರತಿಪಕ್ಷಗಳ ಒಗ್ಗಟ್ಟು ಬಲಗೊಳಿಸಲು ಪ್ರಯತ್ನ: ಇತ್ತೀಚೆಗೆ ಬಿಹಾರ ಸಿಎಂಗೆ ಆಹ್ವಾನ ನೀಡಿದ ನಂತರ, ಕೆಸಿಆರ್ ಬಿಜೆಪಿಯೇತರ ಪಕ್ಷಗಳ ಮನಸ್ಥಿತಿ ಅರಿಯಲು ಪ್ರಯತ್ನಿಸುತ್ತಿದ್ದಾರೆಯೇ ಹಾಗೂ ಪ್ರತಿಪಕ್ಷಗಳ ಏಕತೆಯ ಬಲಗೊಳಿಸಲು ಭರ್ಜರಿಯಾಗಿ ಪ್ರಯತ್ನಿಸುತ್ತಿದ್ದಾರೆಯೇ ಎನ್ನುವ ಅನುಮಾನಗಳು ದಟ್ಟವಾಗಿವೆ. ನಿತೀಶ್ ಕುಮಾರ್ ಅವರು ಕೆಸಿಆರ್ ಅವರ ಆಹ್ವಾನವನ್ನು ಸ್ವೀಕರಿಸಲು ನಿರ್ಧರಿಸಿದ್ದಾರೆ. ಆದರೆ, ನಿತೀಶ ಅವರು ಉದ್ಘಾಟನೆಗೆ ಬರುವ ಸಾಧ್ಯತೆ ಕಡಿಮೆಯಿದೆ. ನಿತೀಶ್ ತಮ್ಮ ಪರವಾಗಿ ಕೆಸಿಆರ್ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಲಾಲನ್ ಸಿಂಗ್ ಅವರನ್ನು ಕಳುಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ಸೇತರ, ಬಿಜೆಪಿಯೇತರ ಪಕ್ಷಗಳಿಗೆ ಆಹ್ವಾನ: ತೆಲಂಗಾಣದ ಸಿಎಂ ಕಚೇರಿ ಕೂಡ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ತೆಲಂಗಾಣ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಭಾಗವಹಿಸಲಿದ್ದಾರೆ. ತೆಲಂಗಾಣ ಸಿಎಂ ಕೆಸಿಆರ್ ಇತ್ತೀಚೆಗೆ ಖಮ್ಮಂ ಬಿಆರ್‌ಎಸ್ ರ್‍ಯಾಲಿ ಕಾಂಗ್ರೆಸ್ಸೇತರ ಹಾಗೂ ಬಿಜೆಪಿಯೇತರ ಪಕ್ಷಗಳಿಗೆ ಆಹ್ವಾನ ನೀಡಿದ್ದರು. ಆದರೆ, ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಅವರನ್ನು ಕೆಸಿಆರ್ ಆಹ್ವಾನ ನೀಡಿರಲಿಲ್ಲ. ಈ ಬಗ್ಗೆ ಬಿಹಾರ ಸಿಎಂ ಅವರನ್ನು ಪ್ರಶ್ನಿಸಿದರೆ, ಕಾರ್ಯಕ್ರಮದ ಬಗ್ಗೆ ನಿರ್ಲಕ್ಷ್ಯ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಇದು ಪಕ್ಷದ ಕಾರ್ಯಕ್ರಮ ಎಂದು ಅವರು ಹೇಳಿದ್ದಾರೆ.
ಫೆಬ್ರವರಿ 15 ರವರೆಗೆ ಸಮಾಧಾನ್ ಯಾತ್ರೆ: ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಫೆಬ್ರವರಿ 15 ರವರೆಗೆ ಸಮಾಧಾನ್ ಯಾತ್ರೆ ಮುಂದುವರೆಯಲಿದೆ. ಕೆಸಿಆರ್ ತೆಲಂಗಾಣ ಕಾರ್ಯಕ್ರಮ ಫೆಬ್ರವರಿ 17 ರಂದು ಜರುಗಲಿದೆ. ಅದರ ಹೊರತಾಗಿಯೂ ಲಾಲನ್ ಸಿಂಗ್ ಅವರನ್ನು ಈ ಕಾರ್ಯಕ್ರಮಕ್ಕೆ ಕಳುಹಿಸಲು ನಿತೀಶ್ ಕುಮಾರ್ ನಿರ್ಧಾರ ಮಾಡಿದ್ದಾರೆ.
ಕೆಸಿಆರ್ ಕಳೆದ ವರ್ಷ ಬಿಹಾರಕ್ಕೆ ಬಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಭೇಟಿ ಮಾಡಿದ್ದರು. ತೆಲಂಗಾಣ ಸಿಎಂ ಕಾಂಗ್ರೆಸ್ಸೇತರ ಹಾಗೂ ಬಿಜೆಪಿ ವಿರುದ್ಧ ಯಾವುದೇ ರಂಗವು ಪರಿಣಾಮಕಾರಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ, ಕೆಸಿಆರ್ ಇನ್ನೂ ಕಾಂಗ್ರೆಸ್ಸೇತರ ಮತ್ತು ಬಿಜೆಪಿಯೇತರ ತೃತೀಯ ರಂಗದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಈ ವಿಚಾರ ಬಗ್ಗೆ ಜೆಡಿಯು ಒಪ್ಪುವುದಿಲ್ಲ.
ಕೆಸಿಆರ್ ಖಮ್ಮಂ ಸಭೆ ಭಾರಿ ವಿವಾದ: ಕೆಸಿಆರ್ ಅವರ ಖಮ್ಮಂ ಸಭೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಅಭಿಯಾನದ ಭಾಗವಾಗಿ ತೆಲಂಗಾಣದಲ್ಲಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ (ಕೆಸಿಆರ್) ಅವರ ರ‍್ಯಾಲಿಗೆ ಏಕೆ ಹಾಜರಾಗಲಿಲ್ಲ ಎಂದು ನಿತೀಶ್ ಕುಮಾರ್ ಅವರನ್ನು ಪಾಟ್ನಾದಲ್ಲಿ ಪ್ರಶ್ನಿಸಿದರೆ, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಬಿಹಾರ ಸಿಎಂ ಹೇಳಿದರು. ಆ ಸಮಯದಲ್ಲಿ ನಿತೀಶ್ ಅವರು ಬೇರೆ ಕೆಲಸದಲ್ಲಿ ನಿರತರಾಗಿದ್ದಾರೆ ಹಾಗೂ ಅವರು (ಕೆಸಿಆರ್) ತಮ್ಮ ಪಕ್ಷದ ಸಭೆ ನಡೆಸಿರಬೇಕು, ಯಾರನ್ನಾದರೂ ಕರೆದಿರಬೇಕು ಎಂದರು.
ಅದೆಲ್ಲವನ್ನೂ ಬಿಟ್ಟು ಸಿಎಂ ನಿತೀಶ್ ಈ ಬಾರಿ ಕೆಸಿಆರ್ ಆಹ್ವಾನಕ್ಕೆ ಆಸಕ್ತಿ ತೋರಿಸಿದ್ದಾರೆ ಎನ್ನುತ್ತಾರೆ ಪಕ್ಷದ ಮುಖಂಡರು. ಅದಕ್ಕಾಗಿಯೇ ಕೆಸಿಆರ್ ಅವರ ತೆಲಂಗಾಣದ ಹೊಸ ಸಚಿವಾಲಯದ ಉದ್ಘಾಟನೆಗೆ ಲಲನ್ ಸಿಂಗ್ ಅವರನ್ನು ಕಳುಹಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಗಣರಾಜ್ಯೋತ್ಸವದಂದೇ 17 ಪಾಕಿಸ್ತಾನಿ ಕೈದಿಗಳ ಬಿಡುಗಡೆ