ETV Bharat / bharat

ಯಾವುದೇ ರಂಗ ರಚನೆ ಇಲ್ಲ, ಟಿಆರ್​​ಎಸ್ ​​ ರಾಷ್ಟ್ರೀಯ ಪಕ್ಷವಾಗುವ ಸಮಯ ಬಂದಿದೆ: ಕೆಸಿಆರ್​

author img

By

Published : Apr 27, 2022, 5:53 PM IST

ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ 21ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮುಖ್ಯಮಂತ್ರಿ ಕೆಸಿಆರ್ ಮಾತನಾಡಿದರು.

Telangana CM KCR
Telangana CM KCR

ಹೈದರಾಬಾದ್​: 2024ರ ಲೋಸಕಭೆ ಚುನಾವಣೆ ವೇಳೆಗೆ ತೃತೀಯ ರಂಗ ರಚಿಸಿ, ಅದರ ಮುಂದಾಳತ್ವವನ್ನು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​ ವಹಿಸಿಕೊಳ್ಳಲಿದ್ದಾರೆಂಬ ಮಾತುಗಳು ಕೇಳಿ ಬಂದಿದ್ದವು. ಹೈದರಾಬಾದ್​​ನಲ್ಲಿ ಆಯೋಜನೆಗೊಂಡಿದ್ದ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ 21ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿರುವ ಕೆಸಿಆರ್​, ಆಡಳಿತಾರೂಢ ಟಿಆರ್​ಎಸ್​​ ಈಗಾಗಲೇ ಪ್ರೌಢಾವಸ್ಥೆಗೆ ಕಾಲಿಟ್ಟಿದ್ದು, ಇದೀಗ ಪ್ರಾದೇಶಿಕತೆಯಿಂದ ಹೊರಬಂದು ರಾಷ್ಟ್ರ ರಾಜಕೀಯಕ್ಕೆ ಕಾಲಿಡಲಿದೆ ಎಂದರು.

ಇದನ್ನೂ ಓದಿ: ಮೋದಿ ವರ್ಚುವಲ್‌ ಸಭೆ ವೇಳೆ ಕೇಜ್ರಿವಾಲ್​ 'ಆಲಸ್ಯತನ'ದ ಭಂಗಿ: ಬಿಜೆಪಿ ಹಿಗ್ಗಾಮುಗ್ಗಾ ತರಾಟೆ

ರಾಷ್ಟ್ರ ರಾಜಧಾನಿಯಲ್ಲಿ ನಾವು ಈಗಾಗಲೇ ಭೂಮಿ ಖರೀದಿ ಮಾಡಿದ್ದು, ದೊಡ್ಡ ಮಟ್ಟದ ಕಚೇರಿ ನಿರ್ಮಾಣ ಮಾಡಲಿದ್ದೇವೆ. ನಾವು ಯಾವುದೇ ರೀತಿಯ ರಾಜಕೀಯ ರಂಗ ರಚನೆ ಮಾಡ್ತಿಲ್ಲ. ಈಗಾಗಲೇ ದೇಶದಲ್ಲಿ ಅನೇಕ ರಾಜಕೀಯ ರಂಗಗಳಿದ್ದು, ಅವುಗಳು ಹೆಚ್ಚಿನ ಫಲ ನೀಡಿಲ್ಲ. ನಮಗೆ ಬೇಕಿರುವುದು ಜನರ ಅಭಿವೃದ್ಧಿಯ ಅಜೆಂಡಾ ಹೊರತು ಇಬ್ಬರು, ಮೂವರು ಸಿಎಂಗಳ ಸೇರಿಸಿಕೊಳ್ಳುವ ರಾಜಕೀಯ ರಂಗವಲ್ಲ. 21 ವರ್ಷಗಳ ಹಿಂದೆ ನಾವು ತೆಲಂಗಾಣದ ಬಗ್ಗೆ ಮಾತನಾಡುವಾಗ ಜನರು ನಮ್ಮ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದರು. ಅನೇಕ ಸಲ ಅಪಹಾಸ್ಯವನ್ನೂ ಮಾಡಿದ್ದರು. ಆದರೆ, ಇದೀಗ ಎಲ್ಲವೂ ಬದಲಾಗಿದೆ ಎಂದು ಹೇಳಿದರು.

ಕರ್ನಾಟಕದ ಬಗ್ಗೆ ಕೆಸಿಆರ್ ಮಾತು: ಬೆಂಗಳೂರಿನಲ್ಲಿ 30 ಲಕ್ಷ ಜನರು ಉನ್ನತ ಐಟಿ ಸಂಸ್ಥೆಗಳಲ್ಲಿ ಉದ್ಯೋಗ ಮಾಡ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ನೀವು ಏನು ಧರಿಸುತ್ತೀರಿ, ಏನು ತಿನ್ನುತ್ತೀರಿ ಎಂಬುದರ ಬಗ್ಗೆ ಪ್ರಶ್ನೆ ಮಾಡ್ತಾರೆ. ಇದು ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.