ETV Bharat / bharat

ಭೀಕರ ವಿಡಿಯೋ: ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಅಪಾರ್ಟ್​​ಮೆಂಟ್​ ಗೋಡೆಗೆ ಗುದ್ದಿಸಿದ ಯುವಕರು! - ಕುಡಿದು ಕಾರು ಚಲಾಯಿಸಿದ ಯುವಕರು

Telangana car accident: ಹೊಸ ವರ್ಷದ ತಡರಾತ್ರಿ ಕುಡಿದ ಮತ್ತಿನಲ್ಲಿ ಕಾರು ಚಲಾವಣೆ ಮಾಡಿರುವ ಯುವಕನೋರ್ವ ಅಪಾರ್ಟ್​ಮೆಂಟ್​ ಗೋಡೆಗೆ ಗುದ್ದಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಅದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Telangana car accident
Telangana car accident
author img

By

Published : Jan 1, 2022, 4:08 PM IST

ಹೈದರಾಬಾದ್​(ತೆಲಂಗಾಣ): ಹೊಸ ವರ್ಷ ಬರಮಾಡಿಕೊಳ್ಳುವ ತವಕದಲ್ಲಿ ಅನೇಕರು ಅನಾಹುತ ಮಾಡಿಕೊಂಡಿದ್ದು, ಕುಡಿದ ಅಮಲಿನಲ್ಲಿ ವಾಹನ ಚಲಾವಣೆ ಮಾಡುವಾಗ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾರೆ. ಅಂತಹ ಘಟನೆವೊಂದು ಡಿಸೆಂಬರ್​ 31ರ ರಾತ್ರಿ ಹೈದರಾಬಾದ್​​ನಲ್ಲಿ ನಡೆದಿದ್ದು, ಪ್ರಕರಣದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಪಾರ್ಟ್​​ಮೆಂಟ್​ ಗೋಡೆಗೆ ಕಾರು ಗುದ್ದಿಸಿದ ಯುವಕರು

ರಂಗಾರೆಡ್ಡಿ ಜಿಲ್ಲೆಯ ವನಸ್ಥಲಿಪುರಂನ ಆಂಧ್ರ ಕೇಸರಿ ನಗರದಲ್ಲಿ ಈ ಅವಘಡ ಸಮಭವಿಸಿದೆ. ಮದ್ಯದ ಅಮಲಿನಲ್ಲಿ ಕಾರು ಚಲಾವಣೆ ಮಾಡ್ತಿದ್ದ ಯುವಕನೋರ್ವ ಅಪಾರ್ಟ್​ಮೆಂಟ್​ನ ಗೋಡೆಗೆ ಗುದ್ದಿಸಿದ್ದಾನೆ. ಇದರ ವಿಡಿಯೋ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿರಿ: ಮಾನವೀಯತೆ ನೆರವು: ಅಫ್ಘಾನಿಸ್ತಾನಕ್ಕೆ ಭಾರತದಿಂದ 5 ಲಕ್ಷ ಕೋವಿಡ್​​ ಲಸಿಕೆ ಪೂರೈಕೆ

ತಪ್ಪಿದ ದೊಡ್ಡ ಅನಾಹುತ: ಕಾರು ಅಪಾರ್ಟ್​ಮೆಂಟ್​ ಗೋಡೆಗೆ ಡಿಕ್ಕಿ ಹೊಡೆಯುವುದಕ್ಕೂ ಸ್ವಲ್ಪ ಸಮಯದ ಹಿಂದೆ ಮಹಿಳೆಯರು ಹಾಗೂ ಮಕ್ಕಳು ಇದೇ ಜಾಗದಲ್ಲಿ ಸಂಭ್ರಮಾಚರಣೆ ಮಾಡಿ, ಒಳಗೆ ಹೋಗಿದ್ದರು ಎಂದು ತಿಳಿದುಬಂದಿದೆ.

ಡಿಸೆಂಬರ್​​ 31ರಂದು ವನಸ್ಥಲಿಪುರಂನ ಕೆಲ ಯುವಕರು ಸೇರಿಕೊಂಡು ಮದ್ಯ ಹಾಗೂ ಗಾಂಜಾ ಸೇವನೆ ಮಾಡಿದ್ದು, ಕಾರು ಚಲಾವಣೆ ಮಾಡಿಕೊಂಡು ಹೋಗಲು ಮುಂದಾಗಿ ಈ ಅವಘಡಕ್ಕೆ ಕಾರಣವಾಗಿದ್ದಾರೆ. ಅನಾಹುತದ ವೇಳೆ ಇನ್ನೋವಾ ಕಾರು ಪಲ್ಟಿಯಾಗಿದ್ದು, ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅದರೊಳಗೆ ಇದ್ದ ಯುವಕರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇವರೆಲ್ಲರೂ ಮದ್ಯ ಸೇವನೆ ಮಾಡಿದ್ದರು ಎಂಬ ಮಾಹಿತಿ ಸಹ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.