ETV Bharat / bharat

ತೆಲಂಗಾಣದಲ್ಲಿ ಲಾಕ್​ಡೌನ್ ಮುಂದುವರಿಕೆಯಾಗುತ್ತಾ?: ಇಂದು ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರ

ತೆಲಂಗಾಣ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಲಾಕ್​ಡೌನ್,​ ಕೃಷಿ ಸಂಬಂಧಿತ ವಿಚಾರಗಳು, ಗೋದಾವರಿ ನೀರಿನ ಬಳಕೆ, ಜಲ ವಿದ್ಯುತ್ ಉತ್ಪಾದನೆ ಮುಂತಾದ ವಿಚಾರಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ.

Telangana Cabinet to meet today, to take call on COVID lockdown
ತೆಲಂಗಾಣದಲ್ಲಿ ಲಾಕ್​ಡೌನ್ ಮುಂದುವರಿಕೆಯಾಗುತ್ತಾ..?: ಇಂದು ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರ
author img

By

Published : Jun 19, 2021, 8:10 AM IST

ಹೈದರಾಬಾದ್ (ತೆಲಂಗಾಣ): ಕೋವಿಡ್ ನಿಯಂತ್ರಣಕ್ಕೆ ಜಾರಿ ಮಾಡಲಾಗಿರುವ ಲಾಕ್​ಡೌನ್ ಮತ್ತು ಕೃಷಿ ವಿಚಾರಗಳಿಗೆ ಸಂಬಂಧಿಸಿದಂತೆ ಇಂದು ತೆಲಂಗಾಣ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಅನ್​ಲಾಕ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಹತ್ತರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಪ್ರಗತಿ ಭವನದಲ್ಲಿ ತುರ್ತು ರಾಜ್ಯ ಕ್ಯಾಬಿನೆಟ್ ಸಭೆ ನಡೆಯಲಿದೆ ಎಂದು ರಾಜ್ಯ ಸರ್ಕಾರದ ಪ್ರಕಟಣೆ ತಿಳಿಸಿದೆ. ಕೃಷಿ ಸಂಬಂಧಿತ ವಿಚಾರಗಳು, ಗೋದಾವರಿ ನೀರಿನ ಬಳಕೆ, ಜಲ ವಿದ್ಯುತ್ ಉತ್ಪಾದನೆ ಮುಂತಾದ ವಿಚಾರಗಳ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ತನ್ನ ಪಾಳು ಬಿದ್ದ ಮನೆಯಲ್ಲಿ 'ಚಿತೆ' ಮಾಡಿ ತಾನೇ ಕೊಳ್ಳಿ ಇಟ್ಟುಕೊಂಡ ರೈತ!

ಈಗ ಸದ್ಯಕ್ಕೆ ತೆಲಂಗಾಣದಲ್ಲಿ ಕೋವಿಡ್ ಲಾಕ್​ಡೌನ್ ಘೋಷಣೆಯಾಗಿದ್ದು, ಇಂದು ಕೊನೆಗೊಳ್ಳಲಿದೆ. ಲಾಕ್​​ಡೌನ್ ಸಮಯದಲ್ಲಿ ಬೆಳಗ್ಗೆ 6ರಿಂದ ಸಂಜೆ 5ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಈಗ ಕರ್ಫ್ಯೂ ಮುಂದುವರೆಯುತ್ತಯೇ ಅಥವಾ ಮತ್ತಷ್ಟು ಸಡಿಲಿಕೆ ಆಗಲಿದೆಯೇ ಎಂಬುದು ಕ್ಯಾಬಿನೆಟ್​ ಸಭೆಯ ನಂತರ ಗೊತ್ತಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.