ಹೈದರಾಬಾದ್ : ತೆಲಂಗಾಣದ ಕ್ಷೌರಿಕ ಸಮುದಾಯವು ಫೆ.20ರಿಂದ ಬಿಜೆಪಿ ನಾಯಕರಿಗೆ ಹೇರ್ ಕಟ್ ಮಾಡುವುದನ್ನು ನಿಲ್ಲಿಸುವ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರದ ನೀತಿಗಳಿಂದ ಜಾತಿ ಆಧಾರಿತ ಉದ್ಯೋಗಗಳಿಗೆ ಧಕ್ಕೆ ಉಂಟಾಗಿದೆ.
ಅಲ್ಲದೇ ಸುಧಾರಣೆ ಮಾಡುವ ನೆಪದಲ್ಲಿ ನಮ್ಮಿಂದ ಮೋದಿ ಸರ್ಕಾರ ನಮ್ಮ ಆಹಾರವನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ರಾಜ್ಯ ಅಗಸ ಮತ್ತು ಕ್ಷೌರಿಕ ಸಂಘಗಳ ಮುಖಂಡರು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ಧೋರಣೆಯಿಂದಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ 250 ಯೂನಿಟ್ ಉಚಿತ ವಿದ್ಯುತ್ ಯೋಜನೆ ರದ್ದಾಗುವ ಭೀತಿ ಎದುರಾಗಿದೆ ಎಂದು ಸಂಘಗಳು ಹೇಳಿವೆ. ಈ ತಿಂಗಳ 20ರಿಂದ ಕಪ್ಪು ಬ್ಯಾಡ್ಜ್ ಧರಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಫೆ.20ರಿಂದ ಬಿಜೆಪಿ ನಾಯಕರಿಗೆ ಹೇರ್ ಕಟ್ ಮಾಡುವುದಿಲ್ಲ ಎಂದು ಕ್ಷೌರಿಕ ಸಂಘದ ಮುಖಂಡರು ಹೇಳಿದ್ದಾರೆ.
ಇದನ್ನೂ ಓದಿ: ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ಗೆ ಬಿಗ್ ಶಾಕ್... ಕೇಂದ್ರ ಮಾಜಿ ಸಚಿವ ಅಶ್ವನಿಕುಮಾರ್ ಪಕ್ಷಕ್ಕೆ ಗುಡ್ಬೈ
ಸೋಮವಾರ ಎಂಎಲ್ಸಿ ಬಸವರಾಜು ಸಾರಯ್ಯ ನೇತೃತ್ವದಲ್ಲಿ ಅಗಸ ಕಾರ್ಮಿಕರ ಸಂಘದ ಮುಖಂಡರು ಸಭೆ ನಡೆಸಿದರು. ಕ್ಷೌರಿಕ ಸಂಘದ ರಾಜ್ಯಾಧ್ಯಕ್ಷ ರಸಮಲ್ಲ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ಷೌರಿಕ ಮುಖಂಡರು ಸಹ ಭಾಗವಹಿಸಿದ್ದರು.
ಹೊಸ ವಿದ್ಯುತ್ ಕಾಯ್ದೆಯಲ್ಲಿ ಸಬ್ಸಿಡಿ ಮತ್ತು ಉಚಿತ ವಿದ್ಯುತ್ ಯೋಜನೆಯನ್ನು ರದ್ದು ಪಡಿಸುವುದು ಇದೆ. ಈ ಕಾಯ್ದೆ ಜಾರಿಗೆ ಬಂದರೆ ಅಗಸ ಮತ್ತು ಕ್ಷೌರಿಕ ಸಮುದಾಯಗಳು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತೆಲಂಗಾಣ ರಾಜ್ಯ ವಾಷರ್‌ಮೆನ್ ಮತ್ತು ಬಾರ್ಬರ್ ಅಸೋಸಿಯೇಷನ್ಸ್ ಹೇಳಿದೆ.