ETV Bharat / bharat

ಬಾಲಕಿಯ ಮೇಲೆ ಅಣ್ಣ - ತಮ್ಮಂದಿರಿಂದ ಅತ್ಯಾಚಾರ: ಆರೋಪಿಗಳ ಮನೆ ಮೇಲೆ ದಾಳಿ, ವಾಹನಗಳು ಧ್ವಂಸ - ಬಾಲಕಿಯ ಮೇಲೆ ಸಹೋದರರಿಂದ ಅತ್ಯಾಚಾರ

ಅಪ್ರಾಪ್ತ ಬಾಲಕಿಯ ಮೇಲೆ ಇಬ್ಬರು ಸಹೋದರರು ಅತ್ಯಾಚಾರ ಎಸಗಿದ ಘಟನೆ ತೆಲಂಗಾಣದಲ್ಲಿ ವರದಿಯಾಗಿದೆ. ಬಾಲಕಿಯ ನಗ್ನ ವಿಡಿಯೋ ಮತ್ತು ಪೋಟೋ ತೆಗೆದುಕೊಂಡು ಆಕೆಯನ್ನು ಬೆದರಿಸುತ್ತಿದ್ದ ಕಾಮುಕರು, ತಮ್ಮ ಕೃತ್ಯವನ್ನು ಒಬ್ಬರದ್ದು ಮತ್ತೊಬ್ಬರಿಗೆ ಗೊತ್ತಾಗದಂತೆ ಕೃತ್ಯ ಎಸಗುತ್ತಿದ್ದರು ಎನ್ನಲಾಗಿದೆ.

telangana-15-year-old-girl-raped-by-two-brothers
ಬಾಲಕಿಯ ಮೇಲೆ ಅಣ್ಣ - ತಮ್ಮಂದಿರಿಂದ ಅತ್ಯಾಚಾರ: ಆರೋಪಿಗಳ ಮನೆ ಮೇಲೆ ದಾಳಿ, ವಾಹನಗಳು ಧ್ವಂಸ
author img

By

Published : Jan 6, 2023, 5:13 PM IST

ವರಂಗಲ್ (ತೆಲಂಗಾಣ): ತೆಲಂಗಾಣದ ವರಂಗಲ್​ ಜಿಲ್ಲೆಯಲ್ಲಿ ಮಾನಗೇಡಿ ಕೃತ್ಯಯೊಂದು ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಇಬ್ಬರು ಸಹೋದರರು ಸೇರಿಕೊಂಡು ಅತ್ಯಾಚಾರ ಎಸಗಿದ್ದು, ಈಗಾಗಲೇ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಈ ದುಷ್ಕೃತ್ಯ ಎಸಗಿದ ಕಾಮುಕರ ಮನೆಗಳ ಮೇಲೆ ಸಂತ್ರಸ್ತೆಯ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ದಾಳಿ ಮಾಡಿ, ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡು: ಪ್ರೇಯಸಿಗೆ ಪೆಟ್ರೋಲ್​ ಸುರಿದು, ಬೆಂಕಿ ಹಚ್ಚಿದ ದುರುಳ ಪ್ರೇಮಿ

ವರಂಗಲ್​ ಪಟ್ಟಣದ ಆರೋಪಿಗಳಾದ ಅಜ್ಮದ್ ಅಲಿ (26) ಮತ್ತು ಅಬ್ಬು (22) ಎಂಬುವವರೇ ಬಂಧಿತರಾಗಿದ್ದಾರೆ. ಇದೇ ಪ್ರದೇಶದಲ್ಲಿ ವಾಸಿಸುತ್ತಿರುವ ಸಂತ್ರಸ್ತ ಬಾಲಕಿಯು ಹತ್ತನೇ ತರಗತಿಯವರೆಗೆ ಓದಿದ್ದು, ಸದ್ಯ ಮನೆಯಲ್ಲೇ ಇರುತ್ತಿದ್ದಳು. ಇದೇ ಸಂದರ್ಭವನ್ನು ಬಳಸಿಕೊಂಡು ಕಾಮುಕರು, ಇಲ್ಲಸಲ್ಲದನ್ನು ಹೇಳಿಕೊಂಡು ಆಕೆಯ ಸಂಪರ್ಕಕ್ಕೆ ಬಂದಿದ್ದರು ಎಂದು ಇಲ್ಲಿನ ಮಿಲ್ಸ್ ಕಾಲೋನಿ ಪೊಲೀಸ್​ ಠಾಣೆಯ ಸರ್ಕಲ್​ ಇನ್ಸ್​ಪೆಕ್ಟರ್​​ ಶ್ರೀನಿವಾಸ್ ತಿಳಿಸಿದ್ದಾರೆ.

ಒಬ್ಬರದ್ದು ಮತ್ತೊಬ್ಬರಿಗೆ ಗೊತ್ತಾಗದಂತೆ ಕೃತ್ಯ: ಅಜ್ಮದ್​ ಅಲಿ ಮತ್ತು ಅಬ್ಬು ಇಬ್ಬರೂ ಸಹ ಅಣ್ಣ - ತಮ್ಮಂದಿರಾಗಿದ್ದಾರೆ. ಇತ್ತ, ಮನೆಯಲ್ಲಿ ಬಾಲಕಿ ಒಬ್ಬಳೇ ಇರುವುದನ್ನು ಗಮನಿಸಿದ್ದ ಆರೋಪಿಗಳು, ಯಾರೂ ಇಲ್ಲದ ಸಮಯದಲ್ಲಿ ಆಕೆಯನ್ನು ತಮ್ಮ ಮನೆಗೆ ಕರೆಸಿಕೊಳ್ಳುತ್ತಿದ್ದರು. ಆದರೆ, ಒಬ್ಬರದ್ದು ಮತ್ತೊಬ್ಬರಿಗೆ ತಿಳಿಯದಂತೆ ಬಾಲಕಿಯನ್ನು ಮನೆಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂಬುವುದಾಗಿ ತನಿಖೆಯಲ್ಲಿ ಗೊತ್ತಾಗಿದೆ ಎಂದು ಸಿಐ ಹೇಳಿದ್ದಾರೆ.

ವಿಡಿಯೋ, ಪೋಟೋ ತೆಗೆದು ಬೆದರಿಕೆ: ಅಲ್ಲದೇ, ಅತ್ಯಾಚಾರದ ಸಮಯದಲ್ಲಿ ಕಾಮುಕರು ಬಾಲಕಿಯ ನಗ್ನ ಚಿತ್ರಗಳು ಮತ್ತು ವಿಡಿಯೋಗಳನ್ನೂ ತೆಗೆದುಕೊಂಡಿದ್ದರು. ತಮ್ಮ ಈ ಕೃತ್ಯವನ್ನು ಯಾರ ಮುಂದೆ ಏನಾದರೂ ಬಾಯ್ಬಿಟ್ಟರೆ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಬೇಕಾಗುತ್ತದೆ ಎಂದು ಬಾಲಕಿಗೆ ಬೆದರಿಕೆ ಹಾಕುತ್ತಿದ್ದರು. ಹೀಗೆ ಬೆದರಿಸಿಕೊಂಡೇ ಬಾಲಕಿ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದೂ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಒಂದು ದಿನ ಗಮನಿಸಿದ ಬಾಲಕಿಯ ತಾಯಿ: ಆದರೆ, ಒಂದು ದಿನ ಹೀಗೆ ಬಾಲಕಿಯನ್ನು ಪುಸಲಾಯಿಸಲು ಕಾಮುಕರು ಯತ್ನಿಸುತ್ತಿರುವುದನ್ನು ಆಕೆಯ ತಾಯಿ ಗಮನಿಸಿದ್ದಾರೆ. ಅಲ್ಲದೇ, ತಮ್ಮ ಮಗಳಿಗೆ ಬುದ್ಧಿವಾದ ಹೇಳಿದ್ದಾರೆ. ಆಗ ಆ ಬಾಲಕಿ ತನ್ನ ತಾಯಿಗೆ ಈ ಹಿಂದೆ ತನ್ನೊಂದಿಗೆ ಕಿಚಕರು ನಡೆಸಿದ ಘಟನೆಗಳು ಎಲ್ಲವನ್ನೂ ವಿವರಿಸಿದ್ದಾರೆ. ಹೀಗಾಗಿಯೇ ಬಾಲಕಿಯ ತಾಯಿ ಇದೇ ಗುರುವಾರ ಮಿಲ್ಸ್ ಕಾಲೋನಿ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಆರೋಪಿಗಳ ಮನೆ ಮೇಲೆ ದಾಳಿ: ಅಂತೆಯೇ, ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿಗಳಾದ ಅಜ್ಮದ್ ಅಲಿ ಮತ್ತು ಅಬ್ಬುನನ್ನು ವಶಕ್ಕೆ ಪಡೆದಿದ್ದಾರೆ. ಇತ್ತ, ಈ ದೃಷ್ಕೃತ್ಯದಿಂದ ಆಕ್ರೋಶಗೊಂಡ ಸಂತ್ರಸ್ತೆಯ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರೊಂದಿಗೆ ಬಿಜೆಪಿ ಮುಖಂಡರು ಸಹ ಆರೋಪಿಗಳ ಮನೆ ಮೇಲೆ ದಾಳಿ ಮಾಡಿ, ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಅನುಕಂಪದ ನೌಕರಿಯ ಆಸೆ.. ಪತಿಯನ್ನೇ ಮುಗಿಸಿದ ಪತ್ನಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.