ETV Bharat / bharat

ನಾಳೆ ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ನಿಶ್ಚಿತಾರ್ಥ - ನಾಳೆ ತೇಜಸ್ವಿ ಯಾದವ್ ನಿಶ್ಚಿತಾರ್ಥ

ನಾಳೆ ತೇಜಸ್ವಿ ಯಾದವ್ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ. ಮೂಲಗಳ ಪ್ರಕಾರ, ತಮ್ಮ ಹಲವು ವರ್ಷಗಳ ಗೆಳತಿಯೊಂದಿಗೆ ತೇಜಸ್ವಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ.

Tejashwi Yadav engagement
ತೇಜಸ್ವಿ ಯಾದವ್ ನಿಶ್ಚಿತಾರ್ಥ
author img

By

Published : Dec 8, 2021, 5:16 PM IST

ಪಾಟ್ನಾ(ಬಿಹಾರ): ಆರ್‌ಜೆಡಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ಅವರ ವಿವಾಹ ನಿಶ್ಚಯವಾಗಿದೆ. ನಾಳೆ ತೇಜಸ್ವಿ ಯಾದವ್ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ.

ಯಾದವ್ ಕುಟುಂಬಸ್ಥರು ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದು, ಸಂಭ್ರಮ ಮನೆ ಮಾಡಿದೆ. ಆದರೆ ಮದುಮಗಳು ಯಾರೆಂಬುದು ಮಾತ್ರ ಇನ್ನೂ ನಿಗೂಢ. ಮೂಲಗಳ ಪ್ರಕಾರ, ತಮ್ಮ ಹಲವು ವರ್ಷಗಳ ಗೆಳತಿಯೊಂದಿಗೆ ತೇಜಸ್ವಿ ಯಾದವ್ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಸರ್ಕಾರದ ವಿರುದ್ಧ ಸಂಸದ ವರುಣ್​ ಗಾಂಧಿ ಗರಂ.. ಸಣ್ಣ ವ್ಯಾಪಾರಸ್ಥರನ್ನು ಬೆಂಬಲಿಸುವಂತೆ ಮನವಿ..

ಕೋವಿಡ್​ ಹಿನ್ನೆಲೆ ನಿಶ್ಚಿತಾರ್ಥದಲ್ಲಿ 40-50 ಆಪ್ತ ಸಂಬಂಧಿಕರು ಮಾತ್ರ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಲಾಲು ಪ್ರಸಾದ್ ಯಾದವ್ ಅವರ ಮಕ್ಕಳಲ್ಲಿ ಕಿರಿಯ ಪುತ್ರ ತೇಜಸ್ವಿ ಯಾದವ್ ಮಾತ್ರ ವಿವಾಹವಾಗಲು ಬಾಕಿ ಉಳಿದಿದ್ದರು. ಹಾಗಾಗಿ, ನಾವು ಉತ್ಸುಕರಾಗಿದ್ದೇವೆ ಎಂದು ಪಕ್ಷದ ಶಾಸಕರೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.