ETV Bharat / bharat

ಕನ್ನೌಜ್‌ನಲ್ಲಿ ಬೀದಿ ನಾಯಿಗಳ ಅಟ್ಟಹಾಸ.. ಬೀದಿ ಬದಿಯಲ್ಲಿ ಬಾಲಕನ ಮೃತದೇಹ ಪತ್ತೆ - ಕೊತ್ವಾಲಿ ಉಸ್ತುವಾರಿ

ಕನ್ನೌಜ್‌ನಲ್ಲಿ ಬಾಲಕನ ಮೇಲೆ ಬೀದಿನಾಯಿಗಳ ಹಿಂಡು ದಾಳಿ ನಡೆಸಿ ಕೊಂದು ಹಾಕಿವೆ.

ಮೃತ ಬಾಲಕನ ಕುಟುಂಬಸ್ಥರು
ಮೃತ ಬಾಲಕನ ಕುಟುಂಬಸ್ಥರು
author img

By

Published : Apr 26, 2023, 10:59 PM IST

ಕನೌಜ್ (ಉತ್ತರ ಪ್ರದೇಶ) : ಇಟ್ರಾನಗರಿಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಮಂಗಳವಾರ ಬೀದಿ ನಾಯಿಗಳ ದಂಡು ಯುವಕನ ಮೇಲೆ ದಾಳಿ ಮಾಡಿವೆ. ನಾಯಿಗಳು ಹದಿಹರೆಯದವನ ದೇಹವನ್ನು ಪರಚಿ ಗಾಯಗೊಳಿಸಿವೆ. ಅಲ್ಲದೇ ಬುಧವಾರ ಮಕರಂದ್‌ನಗರದಲ್ಲಿರುವ ಪವರ್‌ ಹೌಸ್‌ ಬಳಿ ಬಾಲಕನ ಮೃತದೇಹ ರಸ್ತೆಬದಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಹದಿಹರೆಯದ ಯುವಕನ ಸಾವಿನಿಂದ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.

ಘಟನೆಯ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮಂಗಳವಾರ ರಾತ್ರಿ ಬಾಲಕ ಕೋಪಗೊಂಡು ಮನೆ ಬಿಟ್ಟು ಹೋಗಿದ್ದ ಎಂದು ಹೇಳಲಾಗುತ್ತಿದೆ. ಹಿಂತಿರುಗಿ ಮನೆಗೆ ಬಾರದೆ ಇದ್ದಾಗ ಸಂಬಂಧಿಕರು ಹುಡುಕಾಡಿದ್ದಾರೆ.

ಇದನ್ನೂ ಓದಿ: ಒಂದೇ ದಿನ 16 ಜನರ ಮೇಲೆ ಬೀದಿ ನಾಯಿ ದಾಳಿ: ಭಯ ಭೀತರಾಗಿರುವ ಜನರು

ಮನೆಬಿಟ್ಟು ಹೊರಬಂದ ಯುವಕನ ಮೇಲೆ ನಾಯಿ ದಾಳಿ: ಓಂಕಾರ್ ಕುಶ್ವಾಹ ಅವರು ತಮ್ಮ ಕುಟುಂಬದೊಂದಿಗೆ ಸದರ್ ಕೊತ್ವಾಲಿ ಪ್ರದೇಶದ ಓಲ್ಡ್ ಪೊಲೀಸ್ ಲೈನ್‌ನಲ್ಲಿರುವ ಕಾನ್ಶಿ ರಾಮ್ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಮಂಗಳವಾರ ಅವರ ಮಗ ರಾಜಕುಮಾರ (13) ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಕುಟುಂಬ ಸದಸ್ಯರೊಂದಿಗೆ ಜಗಳವಾಡಿದ್ದಾನೆ. ನಂತರ ಅವನು ಕೋಪಗೊಂಡು ತನ್ನ ಕುಟುಂಬದ ಸದಸ್ಯರಿಗೆ ತಿಳಿಸದೆ ಸದ್ದಿಲ್ಲದೆ ಮನೆಯಿಂದ ಹೊರಬಂದಿದ್ದಾನೆ. ಅಷ್ಟರಲ್ಲಿ ಬೀದಿ ನಾಯಿಗಳ ದಂಡು ಹುಡುಗನ ಮೇಲೆ ದಾಳಿ ಮಾಡಿದೆ. ಅಲ್ಲದೇ ನಾಯಿಗಳು ಅವನನ್ನು ಕೊಂದುಹಾಕಿವೆ.

ಇದನ್ನೂ ಓದಿ: ಸಾಂಕ್ರಾಮಿಕದಂತೆ ಆಗಿರುವ ಬೀದಿ ನಾಯಿ ಹಾವಳಿ: ಇದಕ್ಕೆ ಹೊಣೆ ಯಾರು?

ಬುಧವಾರ ಬೆಳಗ್ಗೆ ನಗರದ ಮಕ್ರಂದನಗರ ಮೊಹಲ್ಲಾದಲ್ಲಿರುವ ಪವರ್ ಹೌಸ್ ಬಳಿಯ ರಸ್ತೆಬದಿಯಲ್ಲಿ ಅವರ ಮೃತದೇಹ ಪತ್ತೆಯಾದ ನಂತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಮಗನ ಮೃತದೇಹದ ಸುದ್ದಿ ತಿಳಿದ ತಕ್ಷಣ ಮನೆಯವರು ಸ್ಥಳಕ್ಕೆ ಧಾವಿಸಿದ್ದಾರೆ. ಅಸ್ವಸ್ಥ ಸ್ಥಿತಿಯಲ್ಲಿದ್ದ ಮೃತದೇಹ ನೋಡಿ ಕುಟುಂಬಸ್ಥರು ವಿಚಲಿತರಾಗಿದ್ದಾರೆ.

ಇದನ್ನೂ ಓದಿ : ಬೀದಿ ನಾಯಿ ಮೇಲೆ ಅತ್ಯಾಚಾರ: ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು

ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ: ರಾತ್ರಿ ಮನೆಯಲ್ಲಿ ಜಗಳ ನಡೆಯುತ್ತಿತ್ತು ಎಂದು ತಂದೆ ಓಂಕಾರ್ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಮಗ ಮನೆ ಬಿಟ್ಟು ಹೋಗಿದ್ದಾನೆ. ಬಹಳ ಹೊತ್ತಾದರೂ ವಾಪಸ್ ಬಾರದೆ ಇದ್ದಾಗ ಹುಡುಕಾಟ ನಡೆಸಲಾಯಿತು. ಸ್ಮಶಾನ ಸೇರಿದಂತೆ ರಾತ್ರಿ ಎರಡು ಗಂಟೆಯವರೆಗೂ ಹುಡುಕಾಟ ನಡೆದಿತ್ತು. ಮುಂಜಾನೆ ಮೂರು ಗಂಟೆಗೆ ಮಗನನ್ನು ನಾಯಿಗಳು ಕೊಚ್ಚಿ ಕೊಂದು ಹಾಕಿದ್ದು, ಶವ ರಸ್ತೆಬದಿ ಬಿದ್ದಿದೆ ಎಂಬ ಮಾಹಿತಿ ಲಭಿಸಿತು. ಅದೇ ಸಮಯದಲ್ಲಿ ಕೊತ್ವಾಲಿ ಉಸ್ತುವಾರಿಯೊಬ್ಬರು ಹುಡುಗನನ್ನು ನಾಯಿಗಳು ಕೊಂದು ಸಾಯಿಸಿವೆ ಎಂದು ಹೇಳಿದ್ದಾರೆ ಎಂದರು. ಈಗಾಗಲೇ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ : ಮನೆಯಲ್ಲಿ ಮಲಗಿದ್ದ ಮೂರು ತಿಂಗಳ ಮಗು ಬಲಿ ಪಡೆದ ಬೀದಿ ನಾಯಿಗಳು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.