ಜಲ್ಪೈಗುರಿ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಪೂರ್ವ ಗೈರ್‌ಕಟಾ ಹೆಚ್ಚುವರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಬದಲಿಗೆ ಸುಮಾರು ಏಳು ತಿಂಗಳಿ ಅವರ ಮಗ ಪ್ರೀತಮ್ ಬೋಸ್ ಅವರು ಕರ್ತವ್ಯ ನಿರ್ವಹಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾ ಪ್ರಾಥಮಿಕ ಶಾಲಾ ನಿರೀಕ್ಷಕರು, ಶಾಲೆಯ ಸಂಬಂಧ ಪಟ್ಟ ಮುಖ್ಯ ಶಿಕ್ಷಕರು ಹಾಗೂ ಅವರ ಮೇಲಾಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಶಾಲೆಯ ಶಿಕ್ಷಕ ಸುದೀಪ್ತ ಕುಮಾರ್ ಡೇ ಅವರು ಕಳೆದ ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಸ್ಥಾನದಲ್ಲಿ ಅವರ ಬದಲು ಸಹೋದರಿ ರೂಪಾ ಡೇ ಅವರು ಶಿಕ್ಷಕಿಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲ, ಅದೇ ಶಾಲೆಯ ಇನ್ನೋರ್ವ ಶಿಕ್ಷಕಿ ಮೊಲಿ ಪಾಲ್ ಬೋಸ್ ಅವರು ತಮ್ಮ ಬದಲಿಗೆ ತಮ್ಮ ಮಗನನ್ನು ಶಾಲೆಗೆ ಪಾಠ ಮಾಡಲು ಕಳುಹಿಸುತ್ತಿದ್ದಾರೆ. ಸುಮಾರು ಏಳು ತಿಂಗಳಿಂದ ಪ್ರೀತಮ್ ಬೋಸ್ ಶಾಲೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಶಿಕ್ಷಕ ಸಮುದಾಯದಲ್ಲಿ ಸಂಚಲನ : ಮೋಲಿ ಪಾಲ್ ಬೌಸ್ ಏಳು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದ್ದರಿಂದ ಅವರು ಮಿಲಿಟರಿ ಇಂಜಿನಿಯರಿಂಗ್ ಸೇವಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅವರ ಮಗ ರೂಪಮ್‌ಗೆ ಅವರ ಬೋಧನಾ ಕೆಲಸವನ್ನು ವಹಿಸಿಕೊಟ್ಟಿದ್ದರು. ಬಹಳ ದಿನಗಳಿಂದ ಈ ಇಬ್ಬರು ಶಿಕ್ಷಕರು ಶಾಲೆಗೆ ಹಾಜರಾಗಿರಲಿಲ್ಲ. ಮತ್ತು ಅವರ ಸ್ಥಾನದಲ್ಲಿ ಕುಟುಂಬದ ಸದಸ್ಯರು ಶಾಲೆಗೆ ಬಂದು ಕರ್ತವ್ಯನಿರ್ವಹಿಸುತ್ತಿದ್ದಾರೆ. ಈ ಘಟನೆ ಇಲ್ಲಿನ ಶಿಕ್ಷಕ ಸಮುದಾಯದಲ್ಲಿ ಸಂಚಲನ ಮೂಡಿಸಿದೆ.
ಶಾಲೆಯ ಬಗ್ಗೆ ಏನನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ: ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಈ ರೀತಿ ಬೇರೆ ವ್ಯಕ್ತಿಗಳು ಕೆಲಸ ನಿರ್ವಹಿಸಬಹುದೇ ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಶಿಕ್ಷಕರ ಕುಟುಂಬವು ಹೇಗೆ 'ಪ್ರಾಕ್ಸಿ' ನೀಡುತ್ತದೆ ? ಶಾಲಾ ಮುಖ್ಯೋಪಾಧ್ಯಾಯಿನಿ ಮತ್ತು ಎಸ್‌ಐ ಏಕೆ ಅವಕಾಶ ನೀಡಿದರು ? ಈ ಕುರಿತು ಶಾಲೆಯ ಮುಖ್ಯೋಪಾಧ್ಯಾಯಿನಿ ಸಂಚಾಲಿ ಗಂಗೂಲಿ ಮುಖರ್ಜಿ ಅವರನ್ನು ಕೇಳಿದಾಗ, ಶಾಲಾ ಇನ್ಸ್‌ಪೆಕ್ಟರ್ ಅನುಮತಿಯಿಲ್ಲದೇ ಶಾಲೆಯ ಬಗ್ಗೆ ಏನನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತನಿಖಾ ತಂಡ ಆ ಶಾಲೆಗೆ ಭೇಟಿ ನೀಡಿ ತನಿಖೆ ನಡೆಸಲಿದೆ: 'ಇದೊಂದು ಆಘಾತಕಾರಿ ಘಟನೆ, ನಾವು ತನಿಖೆ ನಡೆಸುತ್ತಿದ್ದೇವೆ. ತನಿಖಾ ವರದಿಯನ್ನು ನಾನು ಸರಿಯಾದ ಸಮಯದಲ್ಲಿ ನನ್ನ ಕಚೇರಿಗೆ ಕಳುಹಿಸುತ್ತೇನೆ. ಸ್ಥಳೀಯ ಶಾಲಾ ಇನ್ಸ್‌ಪೆಕ್ಟರ್ ರಾಜದೀಪ್ ಸರ್ಕಾರ್ ಮತ್ತು ಮುಖ್ಯ ಶಿಕ್ಷಕಿ ಸಂಚಾಲಿ ಹಾಗೂ ಗಂಗೂಲಿ ಮುಖರ್ಜಿ ಅವರಿಗೂ ತಿಳಿಸಲಾಗಿದೆ. ವರದಿ ಬಂದ ನಂತರ ತಿಳಿಸುತ್ತೇವೆ. ನಮ್ಮ ತನಿಖಾ ತಂಡ ಆ ಶಾಲೆಗೆ ಭೇಟಿ ನೀಡಿ ತನಿಖೆ ನಡೆಸಲಿದೆ' ಎಂದು ಜಲ್ಪೈಗುರಿ ಜಿಲ್ಲಾ ಪ್ರಾಥಮಿಕ ಶಾಲಾ ಇನ್ಸ್‌ಪೆಕ್ಟರ್ ಶ್ಯಾಮಲ್ ರಾಯ್ ಹೇಳಿದ್ದಾರೆ.
ಇದೇ ವೇಳೆ ತಮ್ಮ ಅಣ್ಣನ ಜಾಗದಲ್ಲಿ 'ಪ್ರಾಕ್ಸಿ' ಶಿಕ್ಷಕಿಯಾಗಿರುವ ರೂಪಂ ಅವರು ಮಾತನಾಡಿ, 'ನನ್ನ ಸಹೋದರ ಸುದೀಪ್ತ ಕುಮಾರ್ ಡೇ ಅವರು ಈ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಅವರು ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ನಾನು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ನಾನು ಎಸ್‌ಐ ಅನುಮತಿ ಪಡೆದಿದ್ದೇನೆ ಎಂದಿದ್ದಾರೆ.
ತನ್ನ ತಾಯಿಯ ಪರವಾಗಿ 'ಪ್ರಾಕ್ಸಿ' ನೀಡುತ್ತಿರುವ ಮೊಲಿ ಪಾಲ್ ಬೋಸ್ ಅವರ ಪುತ್ರ ಪ್ರೀತಮ್ ಅವರು ಮಾತನಾಡಿ, ನಾನು ಮಿಲಿಟರಿ ಇಂಜಿನಿಯರಿಂಗ್ ಸೇವಾ ವಿಭಾಗದ ಉದ್ಯೋಗಿ, ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಅವರು ಬರಲು ಸಾಧ್ಯವಿಲ್ಲ. ಹೀಗಾಗಿ ಶಾಲಾ ಪ್ರಾಧಿಕಾರ ಮತ್ತು ಎಸ್‌ಐ ಅವರ ಲಿಖಿತ ಅನುಮತಿ ಪಡೆದು ತರಗತಿ ತೆಗೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
ಈ ಬಗ್ಗೆ ಜಲಪೈಗುರಿ ಜಿಲ್ಲಾ ಪ್ರಾಥಮಿಕ ಶಾಲಾ ಕೌನ್ಸಿಲ್ ಅಧ್ಯಕ್ಷ ಲಕ್ಷಮೋಹನ್ ರಾಯ್ ಮಾತನಾಡಿ, 'ನನಗೆ ಈ ವಿಷಯದ ಬಗ್ಗೆ ಏನೂ ತಿಳಿದಿರಲಿಲ್ಲ. ವರದಿ ಇನ್ನೂ ಬಂದಿಲ್ಲ. ಅಂತಹ ಸಂದರ್ಭದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದು ಸೂಕ್ತವಲ್ಲ. ಇದನ್ನು ಮಾಡಲು ಸಾಧ್ಯವಿಲ್ಲ' ಎಂದರು.
ಇದನ್ನೂ ಓದಿ : ಕಿರುಕುಳಕ್ಕೆ ಹೆಡ್ಮಾಸ್ಟರ್ ಆತ್ಮಹತ್ಯೆ; ಶಿಕ್ಷಕರು ಸೇರಿ ನಾಲ್ವರು ಅಮಾನತು