ಲಖನೌ: ಕೊರೊನಾ ಮಹಾಮಾರಿ ನಡುವೆ ಕೂಡ ಉತ್ತರ ಪ್ರದೇಶದಲ್ಲಿ ಪಂಚಾಯ್ತಿ ಚುನಾವಣೆ ನಡೆಯುತ್ತಿದ್ದು, ಈ ಸಮಯದಲ್ಲಿ ಕರ್ತವ್ಯ ನಿರ್ವಹಿಸಿರುವ 700ಕ್ಕೂ ಅಧಿಕ ಶಿಕ್ಷಕರು ಸಾವನ್ನಪ್ಪಿದ್ದಾರೆಂದು ಶಿಕ್ಷಕರ ಸಂಘ ಆರೋಪ ಮಾಡಿದೆ.
ಉತ್ತರ ಪ್ರದೇಶದ ಪ್ರಾಥಮಿಕ ಶಿಕ್ಷಕರ ಸಂಘ ಗುರುವಾರ ಈ ಪ್ರಕಟಣೆ ಬಿಡುಗಡೆ ಮಾಡಿದ್ದು, ಇದರಲ್ಲಿ ಶಿಕ್ಷಕರ ಹೆಸರು, ಹುದ್ದೆ ಹಾಗೂ ಶಾಲಾ ಹೆಸರು ಸಹ ಹೊರಹಾಕಿದೆ.
ಉತ್ತರ ಪ್ರದೇಶದಲ್ಲಿ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಕೋವಿಡ್ ಪ್ರೋಟೋಕಾಲ್ ಬ್ರೇಕ್ ಮಾಡಲಾಗಿದೆ ಎಂದು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ದಿನೇಶ್ ಚಂದ್ ಶರ್ಮಾ ಹೇಳಿದ್ದಾರೆ. ಇದರ ಪರಿಣಾಮ ರಾಜ್ಯದ ಶಿಕ್ಷಕರ ಮೇಲೆ ಬಿದ್ದಿದ್ದು, ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹೆಚ್ಚಾದ ಕೊರೊನಾ: ನಾಳೆ ಬೆಳಗ್ಗೆ ಮಹತ್ವದ ಕ್ಯಾಬಿನೆಟ್ ಸಭೆ ಕರೆದ ನಮೋ
ಶಿಕ್ಷಕರಲ್ಲಿ ಸಾವಿನ ಭಯವಿದೆ. ಇಂತಹ ಪರಿಸ್ಥಿತಿಯಲ್ಲಿ ಮೇ.2ರಂದು ನಿಗದಿಗೊಂಡಿರುವ ಮತ ಎಣಿಕೆ ಮುಂದೂಡಿಕೆ ಮಾಡಬೇಕು ಎಂದು ಅವರು ಇದೇ ವೇಳೆ ಬೇಡಿಕೆ ಇಟ್ಟಿದ್ದಾರೆ. ಇದರ ಜತೆಗೆ ಸಾವನ್ನಪ್ಪಿರುವ ಶಿಕ್ಷಕರ ಕುಟುಂಬಕ್ಕೆ 50 ಲಕ್ಷ ರೂ. ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿದ್ದಾರೆ.