ETV Bharat / bharat

ಮಗ, ಪತ್ನಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ ಪತಿ.. ಬೆಚ್ಚಿಬಿದ್ದ ಸೊಲ್ಲಾಪುರ ಮಂದಿ - ​ ETV Bharat Karnataka

ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಪ್ರಕರಣ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿದೆ.

ಸೊಲ್ಲಾಪುರದಲ್ಲಿ ಮೂವರ ಸಾವು
ಸೊಲ್ಲಾಪುರದಲ್ಲಿ ಮೂವರ ಸಾವು
author img

By ETV Bharat Karnataka Team

Published : Nov 28, 2023, 6:52 PM IST

ಸೊಲ್ಲಾಪುರ (ಮಹಾರಾಷ್ಟ್ರ): ಇಲ್ಲಿಯ ಬಾರ್ಶಿ ಪಟ್ಟಣದ ಉಪ್ಲೈ ರಸ್ತೆಯಲ್ಲಿರುವ ನಾಯ್ಕವಾಡಿ ಪ್ಲಾಟ್‌ನಲ್ಲಿ ತನ್ನ ಪತ್ನಿ ಮತ್ತು ಮಗನ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿದ ಶಿಕ್ಷಕ ಪತಿ ಬಳಿಕ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಘಟನೆಯಿಂದ ಮೃತರ ಕುಟುಂಬಸ್ಥರು ಹಾಗೂ ಅಲ್ಲಿನ ಜನರು ಬೆಚ್ಚಿ ಬಿದ್ದಿದ್ದಾರೆ.

ಮೃತರನ್ನು ಅತುಲ್ ಸುಮಂತ್ ಮುಂಡೆ (40), ತೃಪ್ತಿ ಅತುಲ್ ಮುಂಡೆ (35) ಹಾಗು 5 ವರ್ಷದ ಮಗ ಎಂದು ಗುರುತಿಸಲಾಗಿದೆ. ಪತಿ ಅತುಲ್ ಮುಂಡೆ ಕರ್ಮಲಾ ತಾಲೂಕಿನ ಜಿಲ್ಲಾ ಪರಿಷತ್ ಶಾಲೆಯಲ್ಲಿ ಶಿಕ್ಷಕರಾಗಿದ್ದು, ಪತ್ನಿ ತೃಪ್ತಿ ಮುಂಡೆ ಬಾರ್ಶಿಯ ಅಭಿನವ್ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದ ಅತುಲ್ ಮುಂಡೆ ದಂಪತಿ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದರು, ಕೆಳಗೆ ಅತುಲ್​ ಪೋಷಕರು ವಾಸ ಮಾಡುತ್ತಿದ್ದರು.

ಎಂದಿನಂತೆ ಯಾರೂ ಕೆಳಗಿಳಿಯದ ಕಾರಣ ಮಂಗಳವಾರ ಬೆಳಗ್ಗೆ ಪೋಷಕರು ಮೇಲಿನ ಮಹಡಿಗೆ ತೆರಳಿ ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಬಾರ್ಶಿ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಯಾವ ಕಾರಣಕ್ಕೆ ಕೃತ್ಯ ನಡೆದಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ ಎಂದು ಬಾರ್ಶಿ ಪೊಲೀಸರು ನೀಡಿದ ಪ್ರಾಥಮಿಕ ಮಾಹಿತಿಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಪತ್ನಿಗೆ ಪತಿಯಿಂದ ಚಾಕು ಇರಿತ : ಕೆಲವು ತಿಂಗಳ ಹಿಂದೆ, ಪತ್ನಿ ಮೊಬೈಲ್ ಫೋನ್‌ನಲ್ಲಿ ಹೆಚ್ಚು ಮಾತನಾಡುತ್ತಿರುತ್ತಾಳೆ ಎಂದು ಅನುಮಾನಪಟ್ಟ ಪತಿ ಆಕೆಗೆ ಚಾಕುವಿನಿಂದ ಇರಿದಿದ್ದ ಘಟನೆ ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಜಾರ್ ಸ್ಟ್ರೀಟ್​ನಲ್ಲಿ ಪ್ರಕರಣ ನಡೆದಿತ್ತು. ಗಂಡ ದಯಾನಂದ್ ಅಲಿಯಾಸ್ ನಂದನ ಕ್ರೌರ್ಯಕ್ಕೆ ಹೆಂಡತಿ‌ ಪ್ರಿಯಾಂಕಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಆರೋಪಿ ದಯಾನಂದ್ ಹಾಗೂ ಪ್ರಿಯಾಂಕಾ ಮದುವೆಯಾಗಿ ನೀಲಸಂದ್ರದ ಬಜಾರ್ ಸ್ಟ್ರೀಟ್​ನಲ್ಲಿ ವಾಸವಿದ್ದರು. ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದರು. ಸದಾ ಕುಡಿದು ಬರುತ್ತಿದ್ದ ದಯಾನಂದ್ ಪತ್ನಿ ಮೇಲೆ ಅನುಮಾನ ಪಟ್ಟು ಗಲಾಟೆ ಮಾಡುತ್ತಿದ್ದ. ಘಟನೆ ದಿನದಂದು ಕೂಡ ಕಂಠಪೂರ್ತಿ ಕುಡಿದು ಬಂದಿದ್ದ ದಯಾನಂದ್ ಮಲಗಿದ್ದ ಪತ್ನಿ ಜೊತೆ ಜಗಳ ಆರಂಭಿಸಿದ್ದ. ನೋಡ ನೋಡುತ್ತಿದ್ದಂತೆ ಮಕ್ಕಳ ಮುಂದೆಯೇ ಅಡುಗೆ ಕೋಣೆಯಲ್ಲಿದ್ದ ಚಾಕು ತೆಗೆದುಕೊಂಡು ಪತ್ನಿಯ ಹೊಟ್ಟೆಯ ಕೆಳಭಾಗಕ್ಕೆ ಇರಿದಿದ್ದ. ತೀವ್ರ ರಕ್ತಸ್ರಾವದಿಂದ ಪತ್ನಿ ಕಿರುಚಾಡುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದ.

ಇದನ್ನೂ ಓದಿ : ಕಾಲೇಜಿಗೆ ಹೋಗೋದು ಬೇಡ ಎಂದ ತಾಯಿ: ಮನನೊಂದು 20 ವರ್ಷದ ಯುವತಿ ಆತ್ಮಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.