ETV Bharat / bharat

ಬಾಸುಂಡೆ ಬರುವಂತೆ ದಲಿತ ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ.. ಗುರುವಿನ ಬಂಧನ, ಅಮಾನತು ಶಿಕ್ಷೆ - ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ ಅಮಾನತು

ಸರ್ಕಾರಿ ಶಾಲೆಯಲ್ಲಿ ದಲಿತ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿಸಿರುವ ಶಿಕ್ಷಕನನ್ನು ಶಿಕ್ಷಣ ಇಲಾಖೆ ಅಮಾನತು ಮಾಡಿರುವ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ.

Teacher brutally beats Dalit student  beats Dalit student in Rajasthan  education department suspended accused teacher  Teacher beating student news  ಬಾಸುಂಡೆ ಬರುವಂತೆ ದಲಿತ ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ  ದಲಿತ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿಸಿರುವ ಶಿಕ್ಷಕ  ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ ಅಮಾನತು  ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕ
ದಲಿತ ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ
author img

By

Published : Aug 27, 2022, 10:46 AM IST

ಪಾಲಿ, ರಾಜಸ್ಥಾನ: ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕನೊಬ್ಬ ದಲಿತ ವಿದ್ಯಾರ್ಥಿಗೆ ಅಮಾನುಷವಾಗಿ ಥಳಿಸಿದ ಘಟನೆ ಜಿಲ್ಲೆಯ ಸೋಜತ್ ಉಪವಿಭಾಗದ ಬಗ್ಡಿ ಗ್ರಾಮದಲ್ಲಿ ನಡೆದಿದೆ. ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ವಿರುದ್ಧ ಕುಟುಂಬಸ್ಥರು ದೂರು ನೀಡಿದ್ದು, ಕೂಡಲೇ ಆ ಶಿಕ್ಷಕನನ್ನು ಬಂಧಿಸಲಾಗಿದೆ.

ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ ಅಮಾನತು: ವಿದ್ಯಾರ್ಥಿ ತನ್ನ ಸಹಪಾಠಿಗಳೊಂದಿಗೆ ಮಾತನಾಡುತ್ತಿರುವುದನ್ನು ಕಂಡು ಶಿಕ್ಷಕ ಭನ್ವರ್ ಸಿಂಗ್ ಕೋಪಗೊಂಡು ವಿದ್ಯಾರ್ಥಿಯನ್ನು ಥಳಿಸಲು ಆರಂಭಿಸಿದ ಎಂದು ಮೂಲಗಳು ತಿಳಿಸಿವೆ. ಶಿಕ್ಷಕನು ವಿದ್ಯಾರ್ಥಿಗೆ ಬಹಳ ತೀವ್ರವಾಗಿ ಥಳಿಸಿದ್ದು, ಬಾಲಕ ದೇಹದಾದ್ಯಂತ ಬಾಸುಂಡೆಗಳು ಮೂಡಿವೆ. ಘಟನೆ ಕುರಿತು ಮಾಹಿತಿ ಪಡೆದ ವಿದ್ಯಾರ್ಥಿಯ ಕುಟುಂಬಸ್ಥರು ಸ್ಥಳಕ್ಕಾಗಮಿಸಿ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರು ಶಿಕ್ಷಕನನ್ನು ವಶಕ್ಕೆ ತೆಗೆದುಕೊಂಡರು. ಈ ಘಟನೆ ಕುರಿತು ಸಿಒ ಹೇಮಂತ್ ಜಾಖರ್ ಅವರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಮಾಹಿತಿ ತಿಳಿದ ಶಿಕ್ಷಣ ಇಲಾಖೆ ಶಿಕ್ಷಕನನ್ನು ಅಮಾನತುಗೊಳಿಸಿದೆ.

ಓದಿ: ಪೊಲೀಸ್ ಶಿಕ್ಷಕ ವರ್ಗಾವಣೆ: ಬಿಟ್ಟೋಗ್ಬೇಡಿ ಎಂದು ಅಳುತ್ತಾ ಬೀಳ್ಕೊಟ್ಟ ವಿದ್ಯಾರ್ಥಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.