ETV Bharat / bharat

ಮೊದಲ ಬಾರಿಗೆ ₹50 ಸಾವಿರ ಕೋಟಿ ತಲುಪಿದ ಟಿಸಿಎಸ್ ಆದಾಯ!

author img

By

Published : Apr 11, 2022, 8:05 PM IST

ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಟಿಸಿಎಸ್ ಕಂಪನಿಯ ಆದಾಯವು 43,705 ಕೋಟಿ ರೂ. ಇತ್ತು. ಸೋಮವಾರ ಟಿಸಿಎಸ್ ವಾರ್ಷಿಕ ಆದಾಯವು ಶೇ.7.4ರಷ್ಟು ಹೆಚ್ಚಳ ಕಂಡಿದೆ.

TCS revenue
TCS revenue

ನವದೆಹಲಿ: ಭಾರತದ ಅತಿ ದೊಡ್ಡ ಐಟಿ ಕಂಪನಿಯಾದ ಟಿಸಿಎಸ್ ಇದೇ ಮೊದಲ ಬಾರಿಗೆ 50 ಸಾವಿರ ಕೋಟಿ ರೂ. ಆದಾಯವನ್ನು ತಲುಪಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಶೇ.15.75ರಷ್ಟು ಆದಾಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಒಟ್ಟಾರೆ ಆದಾಯವು 50,591 ಕೋಟಿ ರೂ. ಆಗಿದೆ. ಸೋಮವಾರ ಟಿಸಿಎಸ್ ವಾರ್ಷಿಕ (ವರ್ಷದಿಂದ ವರ್ಷ-YtoY) ಆದಾಯವು ಶೇ.7.4ರಷ್ಟು ಹೆಚ್ಚಳ ಕಂಡಿದೆ.

ಈ ಮೂಲಕ ನಿವ್ವಳ ಲಾಭವು 9,926 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷದ 9,246 ಕೋಟಿ ರೂ. ನಿವ್ವಳ ಲಾಭವನ್ನು ಕಂಪನಿಯು ಪಡೆದಿತ್ತು. ನಾಲ್ಕನೇ ತ್ರೈಮಾಸಿಕದಲ್ಲಿ ಶೇ.15.75ರಷ್ಟು ಆದಾಯ ಹೆಚ್ಚಾಗಿದ್ದು, ಒಟ್ಟು ಆದಾಯ 50,591 ಕೋಟಿ ರೂ. ಆಗಿದೆ. ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು 43,705 ಕೋಟಿ ರೂ. ಇತ್ತು. ಡಾಲರ್​ಗಳಲ್ಲಿ ಈ ಆದಾಯವು 6,696 ಮಿಲಿಯನ್​ ಡಾಲರ್​ ಆಗಿದೆ. ಜತೆಗೆ ಪ್ರತಿ ಷೇರಿಗೆ 22 ರೂ. ಲಾಭಾಂಶವನ್ನು ಪ್ರಸ್ತಾಪಿಸಿದೆ.

'2022ನೇ ವಾರ್ಷಿಕ ವರ್ಷವನ್ನು ದೊಡ್ಡ ಟಿಪ್ಪಣಿಯೊಂದಿಗೆ ಮುಗಿಸುತ್ತಿದ್ದೇವೆ. ಕಡಿಮೆ ಅವಧಿಯಲ್ಲೇ ಗರಿಷ್ಠ ಆದಾಯವನ್ನು ತಲುಪಿದ್ದೇವೆ. ಇದರಲ್ಲಿ ನಮ್ಮ ಗ್ರಾಹಕರ ಪಾತ್ರವೂ ಹೆಚ್ಚಾಗಿದೆ. ಈ ಸಾರ್ವಕಾಲಿಕ ದಾಖಲೆಯು ನಮ್ಮ ಕಂಪನಿಯ ಮುಂದಿನ ಬೆಳವಣಿಗೆಗೆ ಗಟ್ಟಿಯಾದ ಮತ್ತು ಸಮರ್ಥನೀಯ ಅಡಿಪಾಯ ಹಾಕಿದೆ' ಎಂದು ಸಿಇಓ ರಾಜೇಶ್​ ಗೋಪಿನಾಥನ್​ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.