ಜಮ್ಶೆಡ್‌ಪುರ: ಖಾಸಗಿ ಉಕ್ಕಿನ ಪ್ರಮುಖ ಟಾಟಾ ಸ್ಟೀಲ್ ಕಂಪನಿಯ ಎಲ್ಲ ಅರ್ಹ ಉದ್ಯೋಗಿಗಳಿಗೆ 2020-2021 ರ ವಾರ್ಷಿಕ ಬೋನಸ್‌ನಂತೆ ಒಟ್ಟು 270.28 ಕೋಟಿ ರೂಪಾಯಿಗಳನ್ನು ಪಾವತಿಸಲಿದೆ ಎಂದು ತಿಳಿಸಿದೆ.
ಆರ್ಥಿಕ ವರ್ಷ 2020-2021ಕ್ಕೆ ವಾರ್ಷಿಕ ಬೋನಸ್ ಪಾವತಿಗಾಗಿ ಟಾಟಾ ಸ್ಟೀಲ್ ಮತ್ತು ಟಾಟಾ ವರ್ಕರ್ಸ್ ಯೂನಿಯನ್ ನಡುವೆ ಬುಧವಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಕಂಪನಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಮೂಲಕ ಕಂಪನಿಯ ಎಲ್ಲಾ ಅನ್ವಯವಾಗುವ ವಿಭಾಗಗಳು/ ಘಟಕಗಳ ಅರ್ಹ ಉದ್ಯೋಗಿಗಳಿಗೆ ಒಟ್ಟು 270.28 ಕೋಟಿ ರೂ ಪಾವತಿಸಲಾಗುತ್ತದೆ. ಈ ಪೈಕಿ ಜಮ್‌ಶೆಡ್‌ಪುರದ ವಿವಿಧ ವಿಭಾಗಗಳಿಗೂ 158.31 ಕೋಟಿ ರೂ. ನೀಡಲಾಗುತ್ತದೆ.
ಕನಿಷ್ಠ ಮತ್ತು ಗರಿಷ್ಠ ವಾರ್ಷಿಕ ಬೋನಸ್ ಕ್ರಮವಾಗಿ ರೂ 34,920 ಮತ್ತು ರೂ 3,59,029 ಆಗಿದೆ.