ETV Bharat / bharat

725.7 ಕೋಟಿಗೆ ಸಾನಂದ್ ಉತ್ಪಾದನಾ ಘಟಕ ಸ್ವಾಧೀನಕ್ಕೆ ಪಡೆದ ಟಾಟಾ ಮೋಟಾರ್ಸ್‌ - Etv Bharat kannada news

ಟಾಟಾ ಮೋಟಾರ್ಸ್ ವಾಹನ ಉತ್ಪಾದನೆಗೆ ವೇಗ ದೊರೆತಿದೆ. ಭಾರತದಲ್ಲಿ ಸ್ಥಗಿತಗೊಂಡಿರುವ ಫೋರ್ಡ್ ಉತ್ಪಾದನಾ ಘಟಕವನ್ನು ಟಾಟಾ ಮೋಟಾರ್ಸ್ ಸ್ವಾಧೀನ ಪಡಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದು, ಇನ್ನು ಮುಂದೆ ಗುಜರಾತ್‌ನ ಸಾನಂದ್ ಉತ್ಪಾದನಾ ಘಟಕ ಟಾಟಾ ಮೋಟಾರ್ಸ್ ಆಡಳಿತದಲ್ಲಿ ಕಾರ್ಯನಿರ್ವಹಿಸಲಿದೆ.

ಟಾಟಾ ಮೋಟಾರ್ಸ್
tata motors
author img

By

Published : Aug 8, 2022, 11:16 AM IST

ನವದೆಹಲಿ: ಟಾಟಾ ಮೋಟಾರ್ಸ್ ತನ್ನ ಅಂಗಸಂಸ್ಥೆ ಫೋರ್ಡ್ ಇಂಡಿಯಾದ ಸಾನಂದ್ ಉತ್ಪಾದನಾ ಘಟಕವನ್ನು 725.7 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ ಎಂದು ಭಾನುವಾರ ತಿಳಿಸಿದೆ.

ಟಾಟಾ ಮೋಟಾರ್ಸ್ ಮತ್ತು ಫೋರ್ಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (FIPL) ನ ಅಂಗಸಂಸ್ಥೆಯಾದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (TPEML) ಗುಜರಾತ್ ಮೂಲದ ಸ್ಥಾವರವನ್ನು ಸ್ವಾಧೀನಪಡಿಸಿಕೊಳ್ಳಲು ಯುನಿಟ್ ಟ್ರಾನ್ಸ್‌ಫರ್ ಒಪ್ಪಂದಕ್ಕೆ (UTA) ಸಹಿ ಮಾಡಿದೆ.

ಒಪ್ಪಂದದ ಭಾಗವಾಗಿ, ಟಾಟಾ ಮೋಟಾರ್ಸ್ ಸಂಪೂರ್ಣ ಭೂಮಿ ಮತ್ತು ಕಟ್ಟಡಗಳು, ಯಂತ್ರೋಪಕರಣಗಳು ಮತ್ತು ಉಪಕರಣಗಳೊಂದಿಗೆ ವಾಹನ ತಯಾರಿಕಾ ಘಟಕವನ್ನು ಪಡೆಯಲಿದೆ ಎಂದು ಮುಂಬೈ ಮೂಲದ ಆಟೋ ಮೇಜರ್ ಹೇಳಿಕೆಯಲ್ಲಿ ತಿಳಿಸಿದೆ. ಜೊತೆಗೆ FIPL ಕಾರ್ಯಾಚರಣೆ ನಿಲ್ಲಿಸಿದ ಸಂದರ್ಭದಲ್ಲಿ ಸ್ಥಾವರದ ಅರ್ಹ ಉದ್ಯೋಗಿಗಳಿಗೆ ಕೆಲಸ ನೀಡಲು TPEML ಒಪ್ಪಿಕೊಂಡಿದೆ.

ಸನಂದ್ ಸ್ಥಾವರವು ವಾರ್ಷಿಕ 3 ಲಕ್ಷ ಯೂನಿಟ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಅಮೆರಿಕದ ಜನಪ್ರಿಯ ಕಾರು ತಯಾರಿಕಾ ಕಂಪನಿಗಳ ಪೈಕಿ ಒಂದಾದ ಫೋರ್ಡ್‌ ಮೋಟ​ರ್​​ ಭಾರತದಲ್ಲಿರುವ ತನ್ನ ಎರಡೂ ಘಟಕಗಳನ್ನು ಸ್ಥಗಿತಗೊಳಿಸಿದೆ.

ಕಾರು ಉತ್ಪಾದನಾ ಘಟಕ ನಷ್ಟದಲ್ಲಿ ಇರುವ ಕಾರಣ ಅದನ್ನು ಮುಚ್ಚುವ ತೀರ್ಮಾನ ಕೈಗೊಂಡಿತ್ತು. ಸುಮಾರು ಒಂದು ವರ್ಷದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಫೋರ್ಡ್‌ ಕಂಪನಿ ತಿಳಿಸಿತ್ತು, ಇದೀಗ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿವೆ.

ಇದನ್ನೂ ಓದಿ: Tata Motorsನ ಅಲ್ಟ್ರಾ ಟಿ-ಸೀರಿಸ್‌ ಟ್ರೇಡ್‌ ಮಾರ್ಕ್‌ ವಿರುದ್ಧ ಕೋರ್ಟ್‌ ಮೊರೆ ಹೋದ ಟಿ-ಸೀರಿಸ್‌ ಸಂಸ್ಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.