ಚೆನ್ನೈ, ತಮಿಳುನಾಡು: ಮದ್ಯ ಮಾರಾಟ ವಿಚಾರದಲ್ಲಿ ತಮಿಳುನಾಡು ಹೊಸ ದಾಖಲೆ ಸೃಷ್ಟಿಸಿದೆ. ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್ (ಟ್ಯಾಸ್ಮಾಕ್) ಕೇವಲ ಒಂದು ದಿನದಲ್ಲಿ ರಾಜ್ಯದಲ್ಲಿ 164 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟ ಮಾಡಿ ದಾಖಲೆ ಬರೆದಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಎಲ್ಲಾ ಮದ್ಯದಂಗಡಿಗಳು ಮತ್ತು ಬಾರ್‌ಗಳನ್ನು ಸೋಮವಾರ ತೆರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಮಧುರೈ ವಲಯದಲ್ಲಿ ಗರಿಷ್ಠ 49.54 ಕೋಟಿ ರೂಪಾಯಿ, ಚೆನ್ನೈ ವಲಯದಲ್ಲಿ 42.96 ಕೋಟಿ ರೂಪಾಯಿ, ಸೇಲಂ ವಲಯದಲ್ಲಿ 38.72 ಕೋಟಿ ರೂಪಾಯಿ ಮತ್ತು ತಿರುಚ್ಚಿ ವಲಯದಲ್ಲಿ 33.65 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಟಾಸ್ಮಾಕ್‌ನ ವರದಿ ಹೇಳಿದೆ.
ಇದನ್ನೂ ಓದಿ: ಲ್ಯಾಂಡಿಂಗ್ ವೇಳೆ ಇಂಡಿಗೋ ವಿಮಾನದ ಟೈರ್ ಸ್ಫೋಟ; ಅನಾಹುತ ತಪ್ಪಿಸಿದ ಪೈಲೆಟ್
ಕೊಯಮತ್ತೂರು ವಲಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿದ್ದ ಕಾರಣಕ್ಕೆ ಈ ಪ್ರದೇಶದಲ್ಲಿ ಯಾವುದೇ ಮಾರಾಟ ನಡೆದಿಲ್ಲ. ನೀಲಗಿರಿ, ಈರೋಡ್, ತಿರುಪ್ಪೂರು, ಕರುರು, ನಮಕ್ಕಲ್, ತಂಜಾವೂರು, ತಿರುವಾವೂರ್, ನಾಗಪಟ್ಟಣಂ, ಮತ್ತು ಮೈಲಾದುತುರೈನಲ್ಲಿನ ಮದ್ಯದಂಗಡಿಗಳು ಮುಚ್ಚಲ್ಪಟ್ಟಿವೆ. ಸದ್ಯಕ್ಕೆ ತಮಿಳುನಾಡಿನ 5,338 ಅಂಗಡಿಗಳಲ್ಲಿ 2,900 ಅಂಗಡಿಗಳನ್ನು ಸೋಮವಾರ ತೆರೆಯಲಾಗಿದೆ.
ಮದ್ಯಪಾನ ಬ್ಯಾನ್ ಮಾಡಲು ಒತ್ತಾಯ..
ಪಟ್ಟಾಲಿ ಮಕ್ಕಲ್ ಕಚ್ಚಿ (ಪಿಎಂಕೆ) ಪಕ್ಷದ ಸಂಸ್ಥಾಪಕ ಅಧ್ಯಕ್ಷ ಡಾ. ಎಸ್.ರಾಮದಾಸ್ ರಾಜ್ಯದಲ್ಲಿ ಮದ್ಯಪಾನ ಸಂಪೂರ್ಣವಾಗಿ ನಿಷೇಧ ಮಾಡಲು ಒತ್ತಾಯಿಸುತ್ತಿದ್ದಾರೆ. ಸಿಎಂ ಸ್ಟಾಲಿನ್ ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯದ ದೃಷ್ಟಿಯಿಂದ ತಮಿಳುನಾಡು ರಾಜ್ಯದಲ್ಲಿ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧ ಮಾಡಲು ಪ್ರಯತ್ನಿಸಬೇಕೆಂದು ಮನವಿ ಮಾಡಿದ್ದಾರೆ.