ETV Bharat / bharat

ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್​ ಮಿಲಿಟರಿ ಸೇರಿದ ತಮಿಳುನಾಡು ವಿದ್ಯಾರ್ಥಿ! - ಉಕ್ರೇನ್​ ಮಿಲಿಟರಿ ಸೇರಿದ ತಮಿಳುನಾಡು ವಿದ್ಯಾರ್ಥಿ

ರಷ್ಯಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಲು ಇದೀಗ ಉಕ್ರೇನ್​ ನಾಗರಿಕರು ಕೂಡ ಮಿಲಿಟರಿ ಸೇರಿಕೊಳ್ಳುತ್ತಿದ್ದು, ಇದರ ಮಧ್ಯೆ ತಮಿಳುನಾಡಿನ ವಿದ್ಯಾರ್ಥಿಯೊಬ್ಬ ಉಕ್ರೇನ್​​ನ ಪ್ಯಾರಾಮಿಲಿಟರಿ ಪಡೆ ಸೇರಿಕೊಂಡಿದ್ದಾನೆ.

TAMILNADU STUDENT JOINS UKRAINIAN ARMY
TAMILNADU STUDENT JOINS UKRAINIAN ARMY
author img

By

Published : Mar 8, 2022, 11:47 AM IST

ಚೆನ್ನೈ(ತಮಿಳುನಾಡು): ಉಕ್ರೇನ್​ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆಸಲು ಶುರು ಮಾಡಿ 13ನೇ ದಿನ ಕಳೆಯುತ್ತಾ ಬಂದಿದೆ. ಉಕ್ರೇನ್​​ನ ರಾಜಧಾನಿ ಕೀವ್​, ಪ್ರಮುಖ ನಗರ ಖಾರ್ಕಿವ್​ ಸೇರಿದಂತೆ ಬಹುತೇಕ ಎಲ್ಲ ನಗರಗಳ ಮೇಲೆ ರಷ್ಯಾ ಯೋಧರು ಸೆಲ್​, ಬಾಂಬ್ ದಾಳಿ ನಡೆಸುತ್ತಿವೆ. ಹೀಗಾಗಿ ಸಾವಿರಾರು ನಾಗರಿಕರು, ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಹೊರತಾಗಿ ಕೂಡ ಉಕ್ರೇನ್​​ ಯೋಧರು ತಿರುಗೇಟು ನೀಡುತ್ತಿದ್ದು, ಇಲ್ಲಿಯವರೆಗೆ ಹೋರಾಟ ಮಾತ್ರ ಕೈಚೆಲ್ಲಿಲ್ಲ.

ಇದರ ಮಧ್ಯೆ ತಮಿಳುನಾಡಿನ ಕೊಯಮತ್ತೂರಿನ 21 ವರ್ಷದ ವಿದ್ಯಾರ್ಥಿಯೊಬ್ಬ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಮಿಲಿಟರಿ ಸೇರಿಕೊಂಡಿದ್ದಾನೆ. ರಷ್ಯಾ ವಿರುದ್ಧ ಹೋರಾಡಲು ಈ ನಿರ್ಧಾರ ಕೈಗೊಂಡಿದ್ದಾನೆ ಎಂದು ತಿಳಿದು ಬಂದಿದ್ದು, ಉಕ್ರೇನ್​ ಮಿಲಿಟರಿ ಪಡೆ ಸೇರ್ಪಡೆಯಾಗುವುದಕ್ಕೂ ಮುಂಚಿತವಾಗಿ ಈತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಅರ್ಜಿ ಸಲ್ಲಿಕೆ ಮಾಡಿದ್ದು, ಅದು ತಿರಸ್ಕೃತಗೊಂಡ ಬಳಿಕ ಆತ ಈ ನಿರ್ಧಾರ ಕೈಗೊಂಡಿದ್ದಾನೆಂದು ತಿಳಿದು ಬಂದಿದೆ.

TAMILNADU STUDENT JOINS UKRAINIAN ARMY
ಉಕ್ರೇನ್​​ನ ಪ್ಯಾರಾಮಿಲಿಟರಿ ಪಡೆ ಸೇರಿದ ಸೈನಿಕೇಶ್ ರವಿಚಂದ್ರನ್

ಇದನ್ನೂ ಓದಿರಿ: ನಾನು ಕೀವ್​ನಲ್ಲಿಯೇ ಇದ್ದೇನೆ, ಅವಿತುಕೊಂಡಿಲ್ಲ: ಮತ್ತೆ ಸ್ಪಷ್ಟಪಡಿಸಿದ ಉಕ್ರೇನ್ ಅಧ್ಯಕ್ಷ

ತಮಿಳುನಾಡಿನ ಕೊಯಮತ್ತೂರಿನ 21 ವರ್ಷದ ವಿದ್ಯಾರ್ಥಿ ಸೈನಿಕೇಶ್ ರವಿಚಂದ್ರನ್ ಉಕ್ರೇನ್​​ನ ಪ್ಯಾರಾಮಿಲಿಟರಿ ಪಡೆ ಸೇರಿಕೊಂಡಿದ್ದಾನೆ. ಇದರ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ಕೆಲ ಅಧಿಕಾರಿಗಳು ಅವರ ನಿವಾಸಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪೋಷಕರು ಮಾಹಿತಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

2018ರಲ್ಲಿ ಸೈನಿಕೇಶ್​ ಖಾರ್ಕಿವ್​​ನ ರಾಷ್ಟ್ರೀಯ ಎರೋಸ್ಪೇಸ್​​ ವಿಶ್ವವಿದ್ಯಾಲಯಕ್ಕೆ ವ್ಯಾಸಂಗಕ್ಕಾಗಿ ತೆರಳಿದ್ದರು. ಇದರ ಬೆನ್ನಲ್ಲೇ ಅವರು ಉಕ್ರೇನ್ ಮಿಲಿಟರಿ ಸೇರಿಕೊಂಡಿದ್ದಾರೆ. ಇನ್ನು ಉಕ್ರೇನ್​​-ರಷ್ಯಾ ನಡುವಿನ ಯುದ್ಧ ಆರಂಭಗೊಂಡಾಗಿನಿಂದಲೂ ಪೋಷಕರು ಆತನೊಂದಿಗೆ ಮಾತುಕತೆ ನಡೆಸಿಲ್ಲ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.