ಚೆನ್ನೈ: ತಮಿಳುನಾಡಿನ ಸೇಲಂನ ಪೆರಿಯಾರ್ ವಿಶ್ವವಿದ್ಯಾಲಯದ ಮೊದಲ ವರ್ಷದ ಇತಿಹಾಸ ವಿಷಯದ ಪರೀಕ್ಷಾ ಪ್ರಶ್ನೆಪತ್ರಿಕೆಯಲ್ಲಿನ ಬಹು ಆಯ್ಕೆ ಮಾದರಿಯ ಜಾತಿಸೂಚಕ ಪ್ರಶ್ನೆಯೊಂದು ವಿವಾದಕ್ಕೀಡಾಗಿದೆ. ಪರೀಕ್ಷಾ ಪತ್ರಿಕೆಯ 11ನೇ ಪ್ರಶ್ನೆಯು ಜಾತಿ ಸೂಚಕವಾಗಿದ್ದು, "ತಮಿಳುನಾಡಿಗೆ ಸೇರಿದ ಅತಿ ಕೆಳಜಾತಿ ಯಾವುದು?" ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ಮಹರ್ಸ್, ನದರ್ಸ್, ಎಹ್ವಾಸ್, ಹರ್ಜನ್ಸ್ ಎಂಬ ನಾಲ್ಕು ಆಯ್ಕೆಗಳನ್ನೂ ನೀಡಲಾಗಿದೆ.
-
Tamil Nadu | 1st-year MA History students of Periyar University in Salem got asked in the exam, "Which one is the lower caste that belongs to Tamil Nadu?" with 4 options mentioning different castes pic.twitter.com/kdJxQrMo5R
— ANI (@ANI) July 15, 2022 " class="align-text-top noRightClick twitterSection" data="
">Tamil Nadu | 1st-year MA History students of Periyar University in Salem got asked in the exam, "Which one is the lower caste that belongs to Tamil Nadu?" with 4 options mentioning different castes pic.twitter.com/kdJxQrMo5R
— ANI (@ANI) July 15, 2022Tamil Nadu | 1st-year MA History students of Periyar University in Salem got asked in the exam, "Which one is the lower caste that belongs to Tamil Nadu?" with 4 options mentioning different castes pic.twitter.com/kdJxQrMo5R
— ANI (@ANI) July 15, 2022
ಇದು ಆ ಜಾತಿಗಳನ್ನು ಕೀಳಾಗಿ ಕಾಣಲಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಜಾತಿ ಸೂಚಕ ಪ್ರಶ್ನೆಯನ್ನು ನೀಡಿದ ಕ್ರಮವನ್ನು ವಿರೋಧಿಸಲಾಗಿದೆ. ಅಲ್ಲದೇ ಈ ಬಗ್ಗೆ ವಿವಿಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ವಿವಾದ ಭುಗಿಲೆದ್ದ ಬಳಿಕ ಸ್ಪಷ್ಟನೆ ನೀಡಿರುವ ಪೆರಿಯಾರ್ ವಿವಿ ಕುಲಪತಿ ಆರ್.ಜಗನ್ನಾಥ್, "ಪ್ರಶ್ನೆ ಪತ್ರಿಕೆಗಳನ್ನು ನಾವು ಸಿದ್ಧಪಡಿಸಿಲ್ಲ. ಇತರ ವಿಶ್ವವಿದ್ಯಾಲಯ ಮತ್ತು ಕಾಲೇಜು ಉಪನ್ಯಾಸಕರು ಇದನ್ನು ಸಿದ್ಧಪಡಿಸುತ್ತಾರೆ. ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಪ್ಪಿಸಲು ನಾವು ಪರೀಕ್ಷೆಯ ಮೊದಲು ಪರಿಶೀಲಿಸುವುದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಮತ್ತು ಮರುಪರೀಕ್ಷೆ ನಡೆಸುವ ಬಗ್ಗೆ ಪರಿಗಣಿಸಲಾಗುವುದು" ಎಂದು ಹೇಳಿದ್ದಾರೆ.
ಉನ್ನತ ಶಿಕ್ಷಣ ಇಲಾಖೆ ಉಪ ಕಾರ್ಯದರ್ಶಿ ಎಂ.ಇಳಂಗೋ ಹೆನ್ರಿ ದಾಸ್ ಅವರ ನೇತೃತ್ವದಲ್ಲಿ ವಿವಾದಾತ್ಮಕ ಪ್ರಶ್ನೆಯ ತನಿಖೆಗಾಗಿ ತಂಡವನ್ನು ರಚಿಸಲಾಗಿದೆ.
ಇದನ್ನೂ ಓದಿ: ವೈದ್ಯಕೀಯ ಚಿಕಿತ್ಸೆಗೆ PF ಹಿಂಪಡೆಯುವುದು ಹೇಗೆ? ಯಾವೆಲ್ಲ ಕಾರಣಗಳಿಗೆ PF ಹಿಂಪಡೆಯಬಹುದು?