ETV Bharat / bharat

ಮತ್ತೆ ಆನ್‌ಲೈನ್ ರಮ್ಮಿ ನಿಷೇಧ.. ಈ ಬಾರಿ ಸರ್ಕಾರಿ ಗೆಜೆಟ್ ಬ್ರಹ್ಮಾಸ್ತ್ರ ಬಳಕೆ

author img

By

Published : Oct 8, 2022, 1:07 PM IST

ನಿಷೇಧ ವಿಧಿಸಿದ್ದರ ವಿರುದ್ಧ ಕೋರ್ಟ್​ನಿಂದ ತೆರವು ಮಾಡಿಸಿದ ಆನ್​ಲೈನ್​ ಗೇಮ್​ ಕಂಪನಿಗಳಿಗೆ ತಮಿಳುನಾಡು ಸರ್ಕಾರ ಮತ್ತೆ ಬಿಸಿ ಮುಟ್ಟಿಸಿದೆ. ಈ ಬಾರಿ ಸರ್ಕಾರ ಅಧಿಸೂಚನೆ ಹೊರಡಿಸಿ ಗೇಮ್​ಗಳನ್ನು ಶಾಶ್ವತವಾಗಿ ನಿಷೇಧಿಸಿದೆ.

tn-govt-issued-a-gazette-on-banning-online-rummy
ತಮಿಳುನಾಡಿನಲ್ಲಿ ಮತ್ತೆ ಆನ್‌ಲೈನ್ ರಮ್ಮಿ ನಿಷೇಧ

ಚೆನ್ನೈ(ತಮಿಳುನಾಡು): ಆಸ್ತಿಪಾಸ್ತಿ, ಪ್ರಾಣ ಹಾನಿಗೆ ಕಾರಣವಾಗಿರುವ ಆನ್​ಲೈನ್​ ರಮ್ಮಿ, ಪೋಕರ್​ ಗೇಮ್​ಗಳನ್ನು ತಮಿಳುನಾಡಿನಲ್ಲಿ ಮತ್ತೆ ನಿಷೇಧಿಸಲಾಗಿದೆ. ಸ್ಟಾಲಿನ್ ಸರ್ಕಾರ ಅಧಿಸೂಚನೆ ಹೊರಡಿಸಿ ಗೇಮ್​ ಅನ್ನು ರಾಜ್ಯದಲ್ಲಿ ಬ್ಯಾನ್​ ಮಾಡಿದೆ.

ಈ ಹಿಂದೆಯೂ ಕೂಡ 2020 ರಲ್ಲಿ ಗೇಮ್​ ಅನ್ನು ನಿಷೇಧಿಸಲಾಗಿತ್ತು. ಇದರ ವಿರುದ್ಧ ಕಂಪನಿಗಳು ಕೋರ್ಟ್​ ಮೆಟ್ಟಿಲೇರಿದ್ದವು. ಕೋರ್ಟ್​ ಕೂಡ ನಿಷೇಧವನ್ನು ತೆರವು ಮಾಡಿತ್ತು. ಇದೀಗ ಸರ್ಕಾರ ಕಾನೂನುಬದ್ಧವಾಗಿಯೇ ಜನರ ಜೀವ, ಜೀವದ ಜೊತೆ ಆಟವಾಡುವ ಗೇಮ್​ಗಳನ್ನು ಶಾಶ್ವತವಾಗಿ ರದ್ದಿಗೆ ಮುಂದಾಗಿದೆ.

ಅಧಿಸೂಚನೆಯಲ್ಲಿ ಆನ್​ಲೈನ್​ ಬೆಟ್ಟಿಂಗ್​ಗಳನ್ನು ಹೊರತುಪಡಿಸಿ ಆನ್‌ಲೈನ್ ಗೇಮ್​ಗಳನ್ನು ಮಾತ್ರ ನಿಷೇಧಿಸಿದೆ. ಇವುಗಳ ನಿಯಂತ್ರಣಕ್ಕಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಆಯೋಗವನ್ನು ರಚಿಸಲು ಸರ್ಕಾರಿ ಯೋಜಿಸಿದ್ದು, ಇದರಲ್ಲಿ ಐಟಿ ತಜ್ಞರು, ಮಾನಸಿಕ ತಜ್ಞರು ಮತ್ತು ಆನ್‌ಲೈನ್ ಗೇಮರ್​ಗಳು ಸದಸ್ಯರಾಗಿರುತ್ತಾರೆ. ಮುಂಬರುವ ದಿನಗಳಲ್ಲಿ ಆನ್‌ಲೈನ್ ಆಟಗಳಿಗೆ ಅನುಮತಿ ನೀಡಬೇಕಾದರೆ, ಈ ಆಯೋಗ ಮೇಲ್ವಿಚಾರಣೆ ನಡೆಸುತ್ತದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಬೆಟ್ಟಿಂಗ್​ ಜಾಹೀರಾತೂ ಬಂದ್​: ಆನ್‌ಲೈನ್ ಬೆಟ್ಟಿಂಗ್​​ ಆಟಗಳ ಜಾಹೀರಾತುಗಳನ್ನೂ ಸರ್ಕಾರ ನಿಷೇಧಿಸಿದೆ. ಆನ್‌ಲೈನ್ ಗೇಮಿಂಗ್ ಕಂಪನಿಗೆ ಆರ್ಥಿಕ ಬೆಂಬಲ ನೀಡುವ ಬ್ಯಾಂಕುಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಆನ್‌ಲೈನ್ ಬೆಟ್ಟಿಂಗ್​ ವೇಳೆ ಸಿಕ್ಕಿಬಿದ್ದ ವ್ಯಕ್ತಿಗಳಿಗೆ 3 ತಿಂಗಳು ಜೈಲು ಶಿಕ್ಷೆ ಅಥವಾ 5000 ರೂಪಾಯಿ ದಂಡ ವಿಧಿಸಲಾಗುತ್ತದೆ.

ಆನ್‌ಲೈನ್ ಬೆಟ್ಟಿಂಗ್ ಆಟಗಳ ಜಾಹೀರಾತು ನೀಡುವ, ಪಸರಿಸುವ ವ್ಯಕ್ತಿಗಳಿಗೆ 5 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಲು ಸೂಚಿಸಲಾಗಿದೆ. ಈ ನಿರ್ಣಯಗಳನ್ನು ಕೋರ್ಟ್​ಗಳು ಅಮಾನ್ಯ ಮಾಡುವಂತಿಲ್ಲ ಎಂದು ಗೆಜೆಟ್‌ನಲ್ಲಿ ಹೇಳಲಾಗಿದೆ.

ಓದಿ: ಎರಡು ಸರ್ಕಾರಿ ಹುದ್ದೆ, ಎರಡೆರಡು ಸಂಬಳ: ಡಬಲ್ ಸ್ಯಾಲರಿ ವಂಚಕನ ಬಣ್ಣ ಬಯಲಾಗಿದ್ದು ಹೇಗೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.