ETV Bharat / bharat

Watch- ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್​ ಸೈಕಲ್ ಸವಾರಿ - MK Stalin cycling

ತಮಿಳುನಾಡು ಸಿಎಂ ಆದ ಮೇಲೂ ತಮ್ಮ ಫಿಟ್ನೆಸ್ ದಿನಚರಿ ಮುಂದುವರೆಸಿರುವ ಎಂಕೆ ಸ್ಟಾಲಿನ್, ಇಂದು ಬೆಳ್ಳಂಬೆಳಗ್ಗೆ ಚೆನ್ನೈನ ಪೂರ್ವ ಕರಾವಳಿ ರಸ್ತೆ (ಇಸಿಆರ್)ಯಲ್ಲಿ ಸೈಕಲ್ ಸವಾರಿ ಮಾಡಿದ್ದಾರೆ.

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್​ರ ಸೈಕಲ್ ಸವಾರಿ

author img

By

Published : Sep 25, 2021, 1:03 PM IST

Updated : Sep 25, 2021, 1:31 PM IST

ಚೆನ್ನೈ (ತಮಿಳುನಾಡು): ಇಂದು ಮುಂಜಾನೆ ವಾಕಿಂಗ್​ಗೆ ಬಂದವರಿಗೆ ಅಚ್ಚರಿಯೊಂದು ಕಾದಿತ್ತು. ಇವರೆಲ್ಲ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (68) ಅವರು ಸೈಕಲ್ ಸವಾರಿ ಮಾಡುವುದನ್ನು ಕಂಡು ಬೆರಗಾಗಿದ್ದಾರೆ.

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್​ ಸೈಕಲ್ ಸವಾರಿ

ಮೊದಲಿನಿಂದಲೂ ವಾರಾಂತ್ಯದಲ್ಲಿ ಸೈಕ್ಲಿಂಗ್​ ಮಾಡುತ್ತಿದ್ದ ಸ್ಟಾಲಿನ್, ಸಿಎಂ ಆದ ಮೇಲೂ ತಮ್ಮ ಫಿಟ್ನೆಸ್ ದಿನಚರಿಯನ್ನ ಮುಂದುವರೆಸಿದ್ದಾರೆ. ವಾರಾಂತ್ಯದಲ್ಲಿ ಆಗಾಗ್ಗ ಕಿಲೋ ಮೀಟರ್​ಗಟ್ಟಲೆ ಸೈಕಲ್ ಸವಾರಿ ಮಾಡುತ್ತಿರುತ್ತಾರೆ. ಬಿಡುವಿನ ವೇಳೆಯಲ್ಲಿ ಜಿಮ್​ ಸಹ ಮಾಡುತ್ತಿರುತ್ತಾರೆ.

ಇದನ್ನೂ ಓದಿ: Video Viral: ಜಿಮ್​​ನಲ್ಲಿ ಸಕತ್​ ವರ್ಕೌಟ್​ ಮಾಡಿದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್​

ಅದರಂತೆ ಇಂದು ಬೆಳ್ಳಂಬೆಳಗ್ಗೆ ಕೂಡ ಸ್ಟಾಲಿನ್, ಚೆನ್ನೈನ ಪೂರ್ವ ಕರಾವಳಿ ರಸ್ತೆ (ಇಸಿಆರ್)ಯಲ್ಲಿ ಸೈಕಲ್​ ಓಡಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್​ ಆಗಿದೆ.

Last Updated : Sep 25, 2021, 1:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.