ETV Bharat / bharat

'ಸಿಎಂ ಆಗಿದ್ದಾಗ ರಾಜ್ಯದ ಹಕ್ಕುಗಳ ಕುರಿತು ಭಾಷಣ.. ಪ್ರಧಾನಿಯಾದ ನಂತರ ಸ್ವಾಯತ್ತತೆಗೆ ವಿರೋಧ..': ಪ್ರಧಾನಿ ಪ್ರಶ್ನಿಸಿದ ಸಿಎಂ ಸ್ಟಾಲಿನ್ - ಪ್ರಧಾನಿ ನರೇಂದ್ರ ಮೋದಿ

ಆಡಿಯೋ ಸರಣಿ ಮೂಲಕ ಜನರೊಂದಿಗೆ ಮಾತನಾಡುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು, ಸ್ಪೀಕಿಂಗ್ ಫಾರ್ ಇಂಡಿಯಾ ಸರಣಿಯ ಮೂರನೇ ಆಡಿಯೋವನ್ನು ಬಿಡುಗಡೆಗೊಳಿಸಿದ್ದಾರೆ. ಈ ವಿಡಿಯೋ ಕನ್ನಡ ಅವತರಣಿಕೆಯೂ ಬಿಡುಗಡೆ ಆಗಿದೆ.

Speaking for India
ಸ್ಪೀಕಿಂಗ್ ಫಾರ್ ಇಂಡಿಯಾ ಆಡಿಯೋ ಸರಣಿಯಲ್ಲಿ ಸಿಎಂ ಸ್ಟಾಲಿನ್ ಪ್ರಶ್ನೆ
author img

By ETV Bharat Karnataka Team

Published : Oct 31, 2023, 10:25 AM IST

Updated : Oct 31, 2023, 10:42 AM IST

ಚೆನ್ನೈ (ತಮಿಳುನಾಡು): ಸ್ಪೀಕಿಂಗ್ ಫಾರ್ ಇಂಡಿಯಾ ಸರಣಿಯ ಮೂರನೇ ಧ್ವನಿ ಮುದ್ರಣವನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಬಿಡುಗಡೆ ಮಾಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕಳೆದ ಕೆಲವು ತಿಂಗಳುಗಳಿಂದ 'ನಿಮ್ಮಲ್ಲಿ ಒಬ್ಬರು' ಎಂಬ ವಿಷಯದ ಕುರಿತು ಪ್ರಶ್ನೋತ್ತರ ರೂಪದಲ್ಲಿ ವಿಡಿಯೋ ಮೂಲಕ ವಿವಿಧ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಆಗಸ್ಟ್ 31 ರಂದು ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ಆಡಿಯೋ ರೆಕಾರ್ಡಿಂಗ್ ಅನ್ನು ಪ್ರಕಟಿಸಿ, ಆಡಿಯೋ ಸರಣಿ (ಪಾಡ್‌ಕಾಸ್ಟ್) ಮೂಲಕ ಜನರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ.

ಮೊದಲ ಆಡಿಯೋ ಸೆಪ್ಟೆಂಬರ್ 4ಕ್ಕೆ ರಿಲೀಸ್​: ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸ್ಪೀಕಿಂಗ್ ಬಾರ್ ಇಂಡಿಯಾ ಸರಣಿಯ ಮೊದಲ ಆಡಿಯೋವನ್ನು ಸೆಪ್ಟೆಂಬರ್ 4 ರಂದು ಬಿಡುಗಡೆ ಮಾಡಿದ್ದರು. ಅದರಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ಅವರು ಗುಜರಾತ್ ಮಾದರಿ ಮತ್ತು 2024ರ ಸಾರ್ವತ್ರಿಕ ಚುನಾವಣೆಗಳ ಬಗ್ಗೆ ಮಾತನಾಡಿದ್ದರು.

ಆಡಿಯೋ ಸರಣಿಯ ಎರಡನೇ ಭಾಗ: ಇದರ ಬೆನ್ನಲ್ಲೇ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ‘ಸ್ಪೀಕಿಂಗ್ ಫಾರ್ ಇಂಡಿಯಾ’ ಆಡಿಯೋ ಸರಣಿಯ ಎರಡನೇ ಭಾಗವನ್ನು ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಿದ್ದರು. ಆ ಆಡಿಯೋ ಸರಣಿಯಲ್ಲಿ ಕೇಂದ್ರ ಸರ್ಕಾರದಲ್ಲಿ ಏಳೂವರೆ ಲಕ್ಷ ಕೋಟಿಗೂ ಹೆಚ್ಚು ರೂಪಾಯಿ ದುರ್ಬಳಕೆಯಾಗುತ್ತಿದೆ ಎಂದು ಸಿಎಜಿ ವರದಿ ನೀಡಿದೆ. ಬಿಜೆಪಿ ಸರ್ಕಾರ ಏಕೆ ಮೌನ ವಹಿಸುತ್ತಿದೆ ಎಂದು ಪ್ರಶ್ನಿಸಿದ್ದಾರೆ.

  • " class="align-text-top noRightClick twitterSection" data="">

ಆಡಿಯೋ ಸರಣಿಯ ಮೂರನೇ ಭಾಗ: ಈ ವೇಳೆ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ‘ಸ್ಪೀಕಿಂಗ್ ಫಾರ್ ಇಂಡಿಯಾ’ ಆಡಿಯೋ ಸರಣಿಯ ಮೂರನೇ ಭಾಗವನ್ನು ಬಿಡುಗಡೆ ಮಾಡಿದ್ದಾರೆ. ಆಡಿಯೋ ಸರಣಿಯಲ್ಲಿ ಅಕ್ಟೋಬರ್ ಎರಡನೇ ವಾರದಲ್ಲಿ ಸಿಎಜಿ ಅಧಿಕಾರಿಗಳ ತಂಡ ಕೇಂದ್ರ ಸರ್ಕಾರದಲ್ಲಿ ಅವ್ಯವಹಾರ ನಡೆದಿದೆ ಎಂದು ವರದಿ ನೀಡಿತ್ತು. ಏಳೂವರೆ ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಯೋಜನೆಗಳು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಲ್ಲದೇ, ಈ ಸಂಚಿಕೆಯಲ್ಲಿ ನಾವು ರಾಜ್ಯದ ಹಕ್ಕುಗಳ ಬಗ್ಗೆ ಮಾತನಾಡಲಿದ್ದೇವೆ ಮತ್ತು ಡಿಎಂಕೆ ತನ್ನದೇ ಆದ ವಿಶಿಷ್ಟ ನೀತಿಗಳೊಂದಿಗೆ 75 ವರ್ಷಗಳನ್ನು ಆಚರಿಸುತ್ತಿರುವ ಪಕ್ಷ ಮಾತ್ರವಲ್ಲದೇ, ಪ್ರಜಾಪ್ರಭುತ್ವವನ್ನು ಉಳಿಸಲು ಹೋರಾಡುತ್ತಿರುವ ಸಂಸತ್ತಿನಲ್ಲಿ ಮೂರನೇ ಅತಿದೊಡ್ಡ ಪಕ್ಷವಾಗಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ.

''ರಾಜ್ಯದ ಸ್ವಾಯತ್ತತೆ ಡಿಎಂಕೆಯ ವಿಶಿಷ್ಟ ಲಕ್ಷಣಗಳಲ್ಲಿ ಒಂದಾಗಿದೆ ಎಂದು ಅವರು, ದೇಶದ ಆಡಳಿತ ರಚನೆಯ ತಯಾರಕರು ಭಾರತವನ್ನು ಏಕೀಕೃತ ರಾಷ್ಟ್ರಕ್ಕಿಂತ ಹೆಚ್ಚಾಗಿ ಫೆಡರಲ್ ತತ್ವವನ್ನು ಹೊಂದಿರುವ ರಾಜ್ಯಗಳ ಒಕ್ಕೂಟವನ್ನಾಗಿ ಮಾಡಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ಹಕ್ಕುಗಳನ್ನು ಬೆಂಬಲಿಸಿ ಮೋದಿ ಅವರು ಮಾತನಾಡಿದ್ದರು. ಪ್ರಧಾನಿಯಾಗಿ ದೆಹಲಿಗೆ ಬಂದ ನಂತರ ಮೋದಿ ಅವರು ಸಂವಿಧಾನದ ಮೊದಲ ಸಾಲನ್ನೂ ಸಹ ಇಷ್ಟಪಡಲಿಲ್ಲ.

ಮೋದಿ ಇಮೇಜ್ ಮುರಿದಿದ ಇಂಡಿಯಾ ಅಲಯನ್ಸ್-ಸ್ಟಾಲಿನ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ರಾಜ್ಯಗಳನ್ನು ರದ್ದುಗೊಳಿಸಬೇಕು, ಇಲ್ಲದಿದ್ದರೆ ಅವುಗಳನ್ನು ಕೇವಲ ಮುನ್ಸಿಪಾಲಿಟಿಗಳಾಗಿ ಪರಿವರ್ತಿಸಬೇಕು. ಗೌರವಾನ್ವಿತ ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗಲೂ ಏನು ಮಾತನಾಡಿದ್ದರು, ಪ್ರಧಾನಿಯಾದ ನಂತರ ಅವರು ಏನು ಮಾಡುತ್ತಿದ್ದಾರೆ ಎಂಬುದಕ್ಕೆ ಭಿನ್ನಾಭಿಪ್ರಾಯಗಳಿವೆ'' ಎಂದು ಮುಖ್ಯಮಂತ್ರಿ ಸ್ಟಾಲಿನ್ ತಿಳಿಸಿದ್ದಾರೆ. ''ಇಂಡಿಯಾ ಅಲಯನ್ಸ್ ಪ್ರಧಾನಿ ಮೋದಿಯವರ ಇಮೇಜ್ ಅನ್ನು ಮುರಿದಿದ್ದು, 2024ರ ಸಂಸತ್ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ'' ಎಂದು ಸಿಎಂ ಎಂ.ಕೆ. ಸ್ಟಾಲಿನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿವಿಧ ಭಾಷೆಗಳಲ್ಲಿ ಆಡಿಯೋ ಬಿಡುಗಡೆ: ಯೂಟ್ಯೂಬ್, ಸ್ಪಾಟಿಫೈ, ಸೌಂಡ್‌ಕ್ಲೌಡ್, ಅಮೆಜಾನ್ ಇತ್ಯಾದಿಗಳಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ‘ಸ್ಪೀಕಿಂಗ್ ಫಾರ್ ಇಂಡಿಯಾ’ ಆಡಿಯೋ ಸರಣಿಯನ್ನು ಬಿಡುಗಡೆ ಮಾಡಲಾಗಿದೆ. ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಮತ್ತು ಇತರ ಭಾಷೆಗಳಲ್ಲಿ ಆಡಿಯೋವನ್ನು ಪ್ರಕಟಿಸಲಾಗಿದೆ.

ಇದನ್ನೂ ಓದಿ: ತೆಲಂಗಾಣ ಅಭಿವೃದ್ಧಿ ಮಾದರಿ: ಮೂರನೇ ಬಾರಿಗೂ ಬಿಆರ್​ಎಸ್​​ಗೆ ಬಹುಮತ : ಕೆ.ಕವಿತಾ ವಿಶ್ವಾಸ

Last Updated : Oct 31, 2023, 10:42 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.