ETV Bharat / bharat

Thalapathy Vijay: ತಮಿಳುನಾಡು ರಾಜಕೀಯ ಪ್ರವೇಶಿಸುವರೇ ನಟ ದಳಪತಿ ವಿಜಯ್?

author img

By

Published : Jun 18, 2023, 9:26 AM IST

ತಮಿಳು ನಟ ದಳಪತಿ ವಿಜಯ್ ರಾಜಕೀಯಕ್ಕೆ ಪ್ರವೇಶಿಸುತ್ತಾರಾ? ಎಂಬುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

Tamil actor Thalapathy Vijay
ದಳಪತಿ ವಿಜಯ್

ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರು ರಾಜಕೀಯ ಅಖಾಡಕ್ಕೆ ಇಳಿಯಲು ಯೋಜಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ತಮಿಳು ರಾಜಕೀಯದ ಅಗ್ರಮಾನ್ಯ ನಾಯಕರ ನಿಧನದಿಂದ ಉಂಟಾದ ನಿರ್ವಾತವನ್ನು ತುಂಬುವ ಗುರಿಯನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ.

ಶನಿವಾರ ತಮಿಳುನಾಡಿನ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ 10ನೇ ತರಗತಿ ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ಮೊದಲ ಮೂರು ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ದಳಪತಿ ವಿಜಯ್ ಶಿಕ್ಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ವಿಜಯ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಬಿ.ಆರ್. ಅಂಬೇಡ್ಕರ್, ತಿರುವಳ್ಳೂರ್ ಹಾಗೂ ಕಾಮರಾಜ್ ಅತ್ಯಂತ ಗೌರವಾನ್ವಿತ ವ್ಯಕ್ತಿಗಳು. ವಿವಿಧ ರಾಜಕೀಯ ಪಕ್ಷಗಳಿಂದ ಹಣ ಪಡೆದು ತಮ್ಮ ಅಮೂಲ್ಯವಾದ ಮತಗಳನ್ನು ಚಲಾಯಿಸದಂತೆ ತಮ್ಮ ಪೋಷಕರಿಗೆ ಸಲಹೆ ನೀಡುವಂತೆ ಅವರು ಮಕ್ಕಳಿಗೆ ಕರೆ ನೀಡಿದರು.

ವಿಜಯ್ ಅವರ ಅಭಿಮಾನಿಗಳ ಸಂಘವಾಗಿರುವ ಟಿವಿಎಂಐ (ಥಲಪತಿ ವಿಜಯ್ ಮಕ್ಕಳ್ ಇಯ್ಯಕಂ) ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ. ಕಳೆದ ಕೆಲವು ವರ್ಷಗಳಿಂದ, ಟಿವಿಎಂಐ ರಾಜ್ಯಾದ್ಯಂತ ತನ್ನ ಸಾಮಾಜಿಕ ಮತ್ತು ಸಮುದಾಯದ ಪ್ರಭಾವದಲ್ಲಿ ಸಕ್ರಿಯವಾಗಿದೆ. ತಮಿಳು ರಾಜಕೀಯದ ಅಗ್ರಮಾನ್ಯ ನಾಯಕರಾದ ಎಂ. ಕರುಣಾನಿಧಿ ಮತ್ತು ಜೆ. ಜಯಲಲಿತಾ ಅವರ ನಿಧನದಿಂದ ಉಂಟಾದ ನಿರ್ವಾತವನ್ನು ತುಂಬುವ ಗುರಿಯನ್ನು ವಿಜಯ್ ಹೊಂದಿದ್ದಾರೆ ಎಂದು ನಟನ ಆಪ್ತ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಪ್ರತಿಷ್ಠಿತ ಸಂಸ್ಥೆಯನ್ನು ಬಳಸಿಕೊಂಡು ತಳಮಟ್ಟದಲ್ಲಿ ನಡೆಸಿದ ವಿವರವಾದ ಸಮೀಕ್ಷೆಯ ನಂತರ ಬಂದ ಮಾಹಿತಿಯ ಪ್ರಕಾರ, "ಸ್ಟಾಲಿನ್ ಹೊರತುಪಡಿಸಿ ಪ್ರಸ್ತುತ ತಮಿಳುನಾಡಿನಲ್ಲಿ ಯಾವುದೇ ಪ್ರಭಾವಿ ನಾಯಕ ಇಲ್ಲ. ಅಲ್ಲದೆ, ಎಐಎಡಿಎಂಕೆ 2019ರ ಲೋಕಸಭಾ ಚುನಾವಣೆಯಿಂದ ಸತತವಾಗಿ ಸೋಲುಗಳಿಂದ ಜರ್ಜರಿತವಾಗಿರುವ ಕಾರಣ, ತಮಿಳುನಾಡಿನಲ್ಲಿ ಸ್ಟಾಲಿನ್‌ಗೆ ಸರಿಯಾದ ಪ್ರತಿಸ್ಫರ್ಧಿಯಿಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಸ್ಟಾಲಿನ್‌ಗೆ ವಿರೋಧ ವ್ಯಕ್ತಪಡಿಸಲು ಸಾಕಷ್ಟು ಪ್ರಯತ್ನಿಸುತ್ತಿದ್ದರೂ, ರಾಜ್ಯಾದ್ಯಂತ ಬಿಜೆಪಿಗೆ ಬಲವಿಲ್ಲ. ಹೀಗಾಗಿ ಅವರು ವಿರೋಧ ಪಕ್ಷದ ನಾಯಕರಾಗಿ ಹೊರಹೊಮ್ಮಲು ಸಾಧ್ಯವಾಗುತ್ತಿಲ್ಲ.

2026ರ ವಿಧಾನಸಭಾ ಚುನಾವಣೆ ಮೇಲೆ ಕಣ್ಣು: ವಿಜಯ್ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಚರ್ಚಿಸಲು ಕೆಲವು ನಿವೃತ್ತ ಅಧಿಕಾರಿಗಳು, ಪತ್ರಕರ್ತರು ಮತ್ತು ಕೆಲವು ಪ್ರಭಾವಿ ಸಾಮಾಜಿಕ ಮತ್ತು ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದು ಟಿವಿಎಂಐ ಮೂಲಗಳು ತಿಳಿಸಿವೆ. 2024ರ ಲೋಕಸಭಾ ಚುನಾವಣೆಗೆ ಮುನ್ನ ನಡೆಯನ್ನು ಯೋಜಿಸದಿದ್ದರೂ, ಅವರು 2026ರ ವಿಧಾನಸಭಾ ಚುನಾವಣೆಯನ್ನು ಸ್ಪಷ್ಟವಾಗಿ ಗುರಿಯಾಗಿಸಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಸೇರಿದಂತೆ ಬಿಜೆಪಿ ನಾಯಕತ್ವದೊಂದಿಗೆ ಗಂಭೀರ ಚರ್ಚೆ ನಡೆಸಿದ ನಂತರ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶದಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದ ನಂತರ ವಿಜಯ್ ಅವರು ರಾಜಕೀಯ ಪ್ರವೇಶದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ವಿಜಯ್ ಅವರು ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ದ್ರಾವಿಡ ಪಕ್ಷಗಳ ಬೈಲಾಗಳನ್ನು ಅಧ್ಯಯನ ಮಾಡಿದ್ದಾರೆ ಮತ್ತು ಎರಡು ದ್ರಾವಿಡ ಪಕ್ಷಗಳ ಸಾರವನ್ನು ಮಿಶ್ರಣ ಮಾಡುವ ಮೂಲಕ ಹೊಸ ಪಕ್ಷದ ಬೈಲಾವನ್ನು ರಚಿಸುವಂತೆ ತಮ್ಮ ತಂತ್ರಜ್ಞರನ್ನು ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ವಿಜಯ್ ಅವರ ಅಭಿಮಾನಿಗಳು 2021ರ ಗ್ರಾಮೀಣ ಸಂಸ್ಥೆ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಚುನಾವಣೆಯಲ್ಲಿ ಸ್ಪರ್ಧಿಸಿದ್ದ 129 ಮಂದಿ ಗೆದ್ದಿದ್ದಾರೆ. ಪುದುಚೇರಿಯ ಮಾಜಿ ಕಾಂಗ್ರೆಸ್ ಶಾಸಕ ಬಸ್ಸಿ ಎನ್.ಆನಂದ್ ಈಗ ಟಿವಿಎಂಐ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ವಿಜಯ್ ಅವರ ಚಳವಳಿಯ ಹೆಜ್ಜೆಗಳನ್ನು ರಚಿಸುವ ಜವಾಬ್ದಾರಿ ಈಗ ಆನಂದ್ ಅವರ ಮೇಲಿದೆ.

ಎಂಜಿಆರ್ ಮತ್ತು ಜಯಲಲಿತಾ ಅವರನ್ನು ತಮಿಳಿನ ಮತೀಯ ಮೂರ್ತಿಗಳಿಂದ ರಾಜಕೀಯ ನಾಯಕರನ್ನಾಗಿ ಸ್ವೀಕರಿಸಿದ್ದ ತಮಿಳುನಾಡಿನ ಜನತೆ ರಾಜ್ಯ ರಾಜಕಾರಣಕ್ಕೆ ದಳಪತಿ ವಿಜಯ್ ಪ್ರವೇಶವನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟ ದಳಪತಿ ವಿಜಯ್: ಒಂದೇ ದಿನ 4 ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್‌!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.