ಆಗ್ರಾ (ಉತ್ತರ ಪ್ರದೇಶ): ಹೊಸ ಶುಲ್ಕಗಳು ಜಾರಿ ಮಾಡಿ ದೇಶೀಯ ಹಾಗೂ ವಿದೇಶಿ ಪ್ರವಾಸಿಗರಿಗೆ ತಾಜ್ ಮಹಲ್ ಪ್ರವೇಶ ಟಿಕೆಟ್ ದರವನ್ನು ಹೆಚ್ಚಿಸಲು ಆಗ್ರಾ ಆಡಳಿತ ನಿರ್ಧರಿಸಿದೆ.
ಪ್ರಸ್ತುತ ಭಾರತೀಯ ಪ್ರವಾಸಿಗರು ಸ್ಮಾರಕ ವೀಕ್ಷಣೆಗೆ 250 ರೂ. ನೀಡುತ್ತಿದ್ದು, ಈ ದರ 480 ರೂ.ಗೆ ಹೆಚ್ಚಳವಾಗಲಿದೆ. ಇನ್ನು ವಿದೇಶಿ ಪ್ರವಾಸಿಗರಿಗೆ ಪ್ರಸ್ತುತ ಟಿಕೆಟ್ ದರ 1300 ರೂ. ಇದ್ದು ಇನ್ನು ಮುಂದೆ ಅವರು 1600 ರೂ. ಪಾವತಿಸಬೇಕಿದೆ.
ಇದನ್ನೂ ಓದಿ: 'ಒಂದು ರಾಷ್ಟ್ರ ಒಂದೇ ರೇಷನ್ ಕಾರ್ಡ್': 17 ರಾಜ್ಯಗಳಲ್ಲಿ ಯೋಜನೆ ಕಾರ್ಯಗತ.. ಕರ್ನಾಟಕವೂ ಜಾರಿ ಮಾಡಿದೆಯಾ?
ಟಿಕೆಟ್ ದರಗಳು ಏರಿಕೆಯಾದರೆ ಭಾರತೀಯ ಪ್ರವಾಸಿಗರಿಗೆ ತಮ್ಮದೇ ಆದ ಪಾರಂಪರಿಕ ಸ್ಥಳಗಳನ್ನು ನೋಡಲು ಅನಾನುಕೂಲವಾಗುತ್ತದೆ. ಪ್ರವಾಸಿಗರ ಸಂಖ್ಯೆ ಕೂಡ ಕಡಿಮೆಯಾಗಲಿದೆ ಎಂದು ಪ್ರವಾಸಿಗರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.