ETV Bharat / bharat

ಸಿಂಡಿಕೇಟ್ ಬ್ಯಾಂಕ್ ವಂಚನೆ ಪ್ರಕರಣ: 56 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ED - ರಾಜಸ್ಥಾನದ ಉದಯಪುರ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಭರತ್ ಬಾಂಬ್ ಆಸ್ತಿ ಜಪ್ತಿ

ರಾಜಸ್ಥಾನದ ಉದಯಪುರ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಭರತ್ ಬಾಂಬ್, ಶಂಕರ್ ಲಾಲ್ ಖಂಡೇಲ್ವಾಲ್ ಮತ್ತು ಅವರ ಇತರ ಸಹಚರರಿಗೆ ಸೇರಿದ 56.81 ಕೋಟಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಜಾರಿ ನಿರ್ದೇಶನಾಲಯ ಸೋಮವಾರ ವಶಪಡಿಸಿಕೊಂಡಿದೆ.

ಇಡಿ
ಇಡಿ
author img

By

Published : Feb 14, 2022, 7:42 PM IST

ನವದೆಹಲಿ: ಸಿಂಡಿಕೇಟ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ರಾಜಸ್ಥಾನದ ಉದಯಪುರ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಭರತ್ ಬಾಂಬ್ ಮತ್ತು ಅವನ ಸಹಚರ ಶಂಕರ್ ಲಾಲ್ ಖಂಡೇಲ್ವಾಲ್ ಅವರಿಗೆ ಸೇರಿದ 56.81 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಮತ್ತು ಚರಾಸ್ಥಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ಜಪ್ತಿ ಮಾಡಿದೆ.

ಒಟ್ಟು 1,267.79 ಕೋಟಿ ರೂಪಾಯಿಯನ್ನು ಬ್ಯಾಂಕ್​ಗೆ ವಂಚಿಸಿದ್ದಾರೆ ಎಂದು ಸಂಸ್ಥೆ ಸೋಮವಾರ ತಿಳಿಸಿದೆ. ಕೃಷಿ ಭೂಮಿ, ಪ್ಲಾಟ್‌, ಅಂಗಡಿಗಳು, ಕಚೇರಿಗಳು, ಸ್ಥಿರ ಠೇವಣಿಗಳು ಮತ್ತು ಬ್ಯಾಂಕ್ ಖಾತೆಗಳ ರೂಪದಲ್ಲಿ ಜಪ್ತಿ ಮಾಡಲಾದ ಆಸ್ತಿಗಳಿವೆ. ಈ ಆಸ್ತಿಗಳನ್ನು 2002 ರ ಮನಿ ಲಾಂಡರಿಂಗ್ ತಡೆ ಕಾಯಿದೆ (PMLA) ಅಡಿ ಜಪ್ತಿ ಮಾಡಲಾಗಿದೆ. ಇಡಿಯು ಎಫ್‌ಐಆರ್ ಮತ್ತು ಕೇಂದ್ರೀಯ ತನಿಖಾ ದಳವು ಸಲ್ಲಿಸಿದ ಚಾರ್ಜ್ ಶೀಟ್ ಆಧಾರದ ಮೇಲೆ ಮನಿ ಲಾಂಡರಿಂಗ್ ತನಿಖೆ ಪ್ರಾರಂಭಿಸಲಾಗಿತ್ತು.

  • ED has provisionally attached immovable and movable properties valued at Rs. 56.81 Crore belonging to fraudster Bharat Bomb, Shankar Lal Khandelwal and their other associates under PMLA, 2002 in Syndicate Bank Fraud case.

    — ED (@dir_ed) February 14, 2022 " class="align-text-top noRightClick twitterSection" data=" ">

ಇದನ್ನೂ ಓದಿ: 2008ರಲ್ಲಿ ನಡೆದ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣ : ವಿಚಾರಣೆ ನಾಳೆಗೆ ಮುಂದೂಡಿಕೆ

ಪ್ರಮುಖ ವಂಚಕನಾದ ಭರತ್ ಬಾಂಬ್ 2011ರಿಂದ 2016ರವರೆಗೆ ಬ್ಯಾಂಕ್ ಅಧಿಕಾರಿಗಳ ಜತೆ ಶಾಮೀಲಾಗಿ, ಸಿಂಡಿಕೇಟ್ ಬ್ಯಾಂಕ್‌ಗೆ 1,267.79 ಕೋಟಿ ರೂಪಾಯಿ ವಂಚನೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಇಡಿ ತಿಳಿಸಿದೆ. ವಂಚಿಸಿದ ಹಣವನ್ನು ಭರತ್​​ ವಿವಿಧ ಬ್ಯಾಂಕ್​ ಖಾತೆಗಳಿಗೆ ವರ್ಗಾಯಿಸಿದ್ದಾನೆ. ಅಷ್ಟೇ ಅಲ್ಲದೇ ಈ ಹಣವನ್ನು ಆತನ ಕುಟುಂಬದ ಸದಸ್ಯರು, ಸಹವರ್ತಿಗಳು, ಉದ್ಯೋಗಿಗಳು, ಬುಡಕಟ್ಟು ವ್ಯಕ್ತಿಗಳು, ಕೆಲವು ಸಂಸ್ಥೆಗಳಲ್ಲಿ ಸ್ಥಿರಾಸ್ತಿಯಾಗಿ ಹೂಡಿಕೆ ಮಾಡಿದೆ ಎಂದು ಇಡಿ ಹೇಳಿದೆ.

ಈ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಇಡಿ ಇದುವರೆಗೆ 478.66 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಜಪ್ತಿಗೆ ನಾಲ್ಕು ತಾತ್ಕಾಲಿಕ ಜಪ್ತಿ ಆದೇಶಗಳನ್ನು ಹೊರಡಿಸಿತ್ತು. ಹೆಚ್ಚುವರಿಯಾಗಿ, ಡಿಮ್ಯಾಂಡ್ ಡ್ರಾಫ್ಟ್ ರೂಪದಲ್ಲಿ 2.25 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಸ್ತುತ ಲಗತ್ತಿಸುವಿಕೆಯೊಂದಿಗೆ ಪ್ರಕರಣದ ಒಟ್ಟು ಲಗತ್ತು ಸುಮಾರು 537.72 ಕೋಟಿ ರೂ.ಗಳಷ್ಟಿದೆ ಎಂದು ಇಡಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.