ETV Bharat / bharat

ಅತ್ಯಾಚಾರಿಗೆ ಕೇವಲ 9 ದಿನದಲ್ಲಿ ಶಿಕ್ಷೆ ನೀಡಿದ ಕೋರ್ಟ್ - ಅತ್ಯಾಚಾರಿಗೆ ಕೇವಲ 9 ದಿನದಲ್ಲಿ ಶಿಕ್ಷೆ ನೀಡಿದ ಕೋರ್ಟ್

ರಾಜಸ್ಥಾನದ ಸುಮಾರು 150 ಪೊಲೀಸ್ ಸಿಬ್ಬಂದಿ ವಿವಿಧ ಟಾಸ್ಕ್​ಗಳಲ್ಲಿ ತೊಡಗಿಸಿಕೊಂಡು ಕೇವಲ 9 ದಿನದಲ್ಲೇ ಅತ್ಯಾಚಾರಿಗೆ ಶಿಕ್ಷೆಯಾಗುವಂತೆ ನೋಡಿಕೊಂಡಿದ್ದಾರೆ.

Rapist sentenced within 9 days after committing crime
ಅತ್ಯಾಚಾರಿಗೆ ಕೇವಲ 9 ದಿನದಲ್ಲಿ ಶಿಕ್ಷೆ ನೀಡಿದ ಕೋರ್ಟ್..!
author img

By

Published : Oct 6, 2021, 9:20 AM IST

ಜೈಪುರ(ರಾಜಸ್ಥಾನ): ದೇಶದಲ್ಲಿ ನ್ಯಾಯದಾನ ವಿಳಂಬ ಅತಿ ದೊಡ್ಡ ಗಂಭೀರ ಆರೋಪ. ಈ ವಿಳಂಬ ನ್ಯಾಯದಾನದಿಂದ ಅದೆಷ್ಟೋ ಮಂದಿ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ರಾಜಸ್ಥಾನದ ಜೈಪುರದಲ್ಲಿ ಮಹತ್ವದ ಘಟನೆ ಜರುಗಿದೆ.

9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿರುವ ಜೈಪುರ ಕೋರ್ಟ್ ನ್ಯಾಯ ವ್ಯವಸ್ಥೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಅಪರಾಧ ನಡೆದ ನಂತರ ಕೇವಲ 9 ದಿನಗಳಲ್ಲೇ ಅಪರಾಧಿಗೆ ಶಿಕ್ಷೆ ವಿಧಿಸಿ, ನ್ಯಾಯಾಂಗದ ಬಗ್ಗೆ ಜನರಲ್ಲಿ ಸಕಾರಾತ್ಮಕ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಏನಿದು ಕೇಸ್?

ರಾಜಸ್ತಾನದ ಕೋಟ್​​ಖವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 26ರಂದು 25 ವರ್ಷದ ಕಮಲೇಶ್ ಮೀನಾ ಎಂಬ ಯುವಕನೋರ್ವ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಪೋಷಕರು ಅಂದೇ ಪೊಲೀಸರಿಗೆ ದೂರು ನೀಡಿದ್ದರು. ಪೊಕ್ಸೊ ಕಾಯ್ದೆಯಡಿ ದೂರು ದಾಖಲಿಸಿಕೊಂಡ ಪೊಲೀಸರು ಮರುದಿನವೇ ಆರೋಪಿಯನ್ನು ಬಂಧಿಸಿದ್ದರು.

ಕೇವಲ 18 ಗಂಟೆಗಳಲ್ಲಿ ಚಾರ್ಜ್‌ಶೀಟ್ ಹಾಕಿ, ನ್ಯಾಯಾಲಯದಲ್ಲಿ ಐದು ದಿನಗಳಲ್ಲಿ ವಿಚಾರಣೆ ಮುಗಿಸಲಾಯಿತು. ಈ ಜೈಪುರ ನ್ಯಾಯಾಲಯ ಅಪರಾಧಿಗೆ 20 ವರ್ಷಗಳ ಕಾರಾಗೃಹ ಶಿಕ್ಷೆ, 2 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಈ ತ್ವರಿತ ನ್ಯಾಯ ಪ್ರಕ್ರಿಯೆಗೆ ಸುಮಾರು 150 ಪೊಲೀಸ್ ಸಿಬ್ಬಂದಿ ವಿವಿಧ ಟಾಸ್ಕ್​ಗಳಲ್ಲಿ ತೊಡಗಿಸಿಕೊಂಡಿದ್ದರು. ಅವರ ಅವಿರತ ಶ್ರಮದಿಂದಾಗಿ ಇಷ್ಟು ಬೇಗ ನ್ಯಾಯದಾನ ಸಿಕ್ಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಟಿವಿ 'ರಾಮಾಯಣ'ದ ರಾವಣ ಪಾತ್ರಧಾರಿ ಅರವಿಂದ ತ್ರಿವೇದಿ ನಿಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.