ಪಶ್ಚಿಮ ಬಂಗಾಳ : ಬಿಜೆಪಿ ಮುಖಂಡ ಸುವೆಂದು ಅಧಿಕಾರಿ ಮತ್ತು ಪಕ್ಷದ ಕಾರ್ಯಕರ್ತರು ತೆಂಗಾದಿಂದ ಜನಕಿನಾಥ ದೇವಸ್ಥಾನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಪೂರ್ವ ಮಿಡ್ನಾಪೂರ್‌ನ ನಂದಿಗ್ರಾಮದಲ್ಲಿ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
2007ರಲ್ಲಿ ಪಶ್ಚಿಮ ಬಂಗಾಳದಲ್ಲಿ ಕೃಷಿಭೂಮಿ ವಿರೋಧಿ ಸ್ವಾಧೀನ ಚಳವಳಿಯ ಕೇಂದ್ರಬಿಂದುವಾದ ನಂದಿಗ್ರಾಮದಲ್ಲಿ ಅಧಿಕಾರಿಯನ್ನು ಸ್ವಾಗತಿಸಲು ಹಲವಾರು ಬೆಂಬಲಿಗರು ಸೇರಿದ್ದರು. ಈ ವೇಳೆ ದಾಳಿ ನಡೆದಿದ್ದು, ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ.
ಇದನ್ನು ಓದಿ: ಟಿಎಂಸಿ ಮುಖಂಡನ ಹತ್ಯೆ: ಹೊತ್ತಿ ಉರಿದ ಹೌರಾ.!
ಬಿಜೆಪಿಗೆ ಸೇರ್ಪಡೆಯಾದ ನಂತರ ನಂದಿಗ್ರಾಮದಲ್ಲಿ ತಮ್ಮ ಮೊದಲ ಸಾರ್ವಜನಿಕ ಸಭೆ ನಡೆಸಲು ಅಧಿಕಾರಿ ಮುಂದಾಗಿದ್ದರು. ದಾಳಿಯ ಸಂದರ್ಭದಲ್ಲಿ ಬಸ್ ಸಂಪೂರ್ಣ ಜಖಂ ಆಗಿದ್ದು, ಹೆಣ್ಣು ಮಗು ಸೇರಿ ಹಲವರು ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ನಂದಿಗ್ರಾಮ ಆಸ್ಪತ್ರೆಗೆ ದಾಖಲಿಸಲಾಗಿದೆ.