ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಎಸ್ಯುವಿ ಕಾರು ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಪೊಲೀಸ್ ಅಧಿಕಾರಿ ಸಚಿನ್ ವಝೆ ಅವರನ್ನು ಎನ್ಐಎ ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.
ಪ್ರಕರಣ ಸಂಬಂಧ ಎನ್ಐಎ ಶನಿವಾರ ಬೆಳಿಗ್ಗೆಯಿಂದ ಸತತ 12 ಗಂಟೆಗಳ ಕಾಲ ವಿಚಾರಣೆ ನಡೆಸಿ ತಡರಾತ್ರಿ ಸಚಿನ್ ವಝೆ ಅವರನ್ನು ಬಂಧಿಸಿತ್ತು. ಇಂದು ಕೂಡ ಮುಂಬೈ ಪೊಲೀಸರು ಸೇರಿದಂತೆ ಕೆಲ ಅಧಿಕಾರಿಗಳು ವಿಚಾರಣೆ ನಡೆಸಿ ರಿಮ್ಯಾಂಡ್ಗಾಗಿ ನ್ಯಾಯಾಲಯದ ಮುಂದೆ ಸಚಿನ್ ವಝೆ ಅವರನ್ನು ಹಾಜರು ಪಡಿಸಲಿದೆ.

ಹೆಚ್ಚಿನ ತನಿಖೆ ನಡೆಸುತ್ತಿರುವ ಎನ್ಐಎ, ಇನೋವಾ ಕಾರಿನ ಇಬ್ಬರು ಚಾಲಕರು ಮತ್ತು ಓರ್ವ ಉದ್ಯಮಿಯನ್ನು ಬಂಧಿಸುವ ಸಾಧ್ಯತೆಯಿದೆ. ಅದಕ್ಕಾಗಿ ಮೂರು ತಂಡಗಳು ಥಾಣೆಗೆ ತರಳಿವೆ ಎಂಬ ಮಾಹಿತಿ ಇದೆ.
ಈ ಹಿಂದೆ ಥಾಣೆ ನ್ಯಾಯಾಲಯವು ಸಚಿನ್ ವಝೆ ಅವರಿಗೆ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿತ್ತು.