ನಳಂದಾ, ಬಿಹಾರ: ಕೆಲವು ರಾಜ್ಯಗಳಲ್ಲಿ ಆಗಾಗ ವಿಷಪೂರಿತ ಮದ್ಯ ಸೇವನೆಯಿಂದ ಆಗಾಗ ಸಾವುಗಳು ಸಂಭವಿಸುತ್ತಲೇ ಇರುತ್ತವೆ. ಬಿಹಾರ ಇದಕ್ಕೆ ಹೊರತೇನಲ್ಲ. ಬಿಹಾರದ ನಳಂದಾದಲ್ಲಿ ವಿಷಪೂರಿತ ಮದ್ಯಸೇವನೆಯಿಂದ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸೊಹ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಛೋಟಿ ಪಹಾಡಿ ಮತ್ತು ಪಹಾಡ್ ತಲ್ಲಿ ಎಂಬ ಗ್ರಾಮಗಳಲ್ಲಿ ಘಟನೆ ನಡೆದಿದ್ದು, ನಾಲ್ವರು ಸಾವನ್ನಪ್ಪಿರುವುದು ಮಾತ್ರವಲ್ಲದೇ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಭಾಗೋ ಮಿಸ್ತ್ರಿ (55), ಮನ್ನಾ ಮಿಸ್ತ್ರಿ (55), ಧರ್ಮೇಂದ್ರ ಅಲಿಯಾಸ್ ನಾಗೇಶ್ವರ್ (50) ಮತ್ತು ಕಾಳಿಚರಣ್ ಮಿಸ್ತ್ರಿ(50) ಮೃತಪಟ್ಟವಾಗಿದ್ದಾರೆ.ಮದ್ಯ ಸೇವನೆ ಮಾಡಿ, ಆರೋಗ್ಯ ಹದಗೆಟ್ಟು ಸಾವನ್ನಪ್ಪಿರುವುದಾಗಿ ಸಂಬಂಧಿಗಳು ಸ್ಪಷ್ಟನೆ ನೀಡಿದ್ದಾರೆ. ಛೋಟಿ ಪಹಾಡಿ ಮತ್ತು ಪಹಾಡ್ತಲ್ಲಿ ಪ್ರದೇಶಗಳಿಗೆ ಆಗಮಿಸಿದ ಡಿಎಸ್‌ಪಿ ಮತ್ತು ಎಸ್‌ಎಚ್‌ಒ ತನಿಖೆ ಆರಂಭಿಸಿದ್ದಾರೆ.
ಅತ್ಯಂತ ಪ್ರಮುಖ ವಿಚಾರವೆಂದರೆ, ಬಿಹಾರ ಸರ್ಕಾರ ರಾಜ್ಯದಲ್ಲಿ ಮದ್ಯಸೇವನೆ, ಮಾರಾಟ ಮತ್ತು ಸಾಗಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಇದನ್ನೂ ಓದಿ: ವಿಷಾಹಾರ ಸೇವಿಸಿ ಇಂದಿರಾಗಾಂಧಿ ವಸತಿ ಶಾಲೆಯ 50 ಮಕ್ಕಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು