ETV Bharat / bharat

ಮಹಾರಾಷ್ಟ್ರದ ರಾಯಗಢದಲ್ಲಿ ಶಸ್ತ್ರಾಸ್ತ್ರ ತುಂಬಿದ್ದ ಬೋಟ್‌ ಪತ್ತೆ: ಪೊಲೀಸರಿಂದ ಕಟ್ಟೆಚ್ಚರ - ಈಟಿವಿ ಭಾರತ ಕರ್ನಾಟಕ

ಮಹಾರಾಷ್ಟ್ರದ ರಾಯಗಢ ಸಮುದ್ರ ಪ್ರದೇಶದಲ್ಲಿ ಅನುಮಾನಾಸ್ಪದ ದೋಣಿ ಪತ್ತೆಯಾಗಿದ್ದು, ಅದರೊಳಗೆ ಎಕೆ 47 ಸೇರಿದಂತೆ ಹಲವು ಶಸ್ತ್ರಾಸ್ತ್ರಗಳಿದ್ದವು.

Suspicious boat with weapons found
Suspicious boat with weapons found
author img

By

Published : Aug 18, 2022, 2:56 PM IST

Updated : Aug 18, 2022, 4:49 PM IST

ರಾಯಗಢ(ಮಹಾರಾಷ್ಟ್ರ): ರಾಯಗಢ ಜಿಲ್ಲೆಯ ಪ್ರವಾಸಿ ತಾಣ ಹರಿಹರೇಶ್ವರ ಸಮುದ್ರದಲ್ಲಿ ಅನುಮಾನಾಸ್ಪದ ದೋಣಿ ಪತ್ತೆಯಾಗಿದ್ದು, ಅದರಲ್ಲಿ ಎಕೆ 47 ಬಂದೂಕುಗಳು ಹಾಗೂ ಶಸ್ತ್ರಾಸ್ತ್ರಗಳಿದ್ದವು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಜಿಲ್ಲೆಯಲ್ಲಿ ಹೈ ಅಲರ್ಟ್​ ಘೋಷಿಸಿದ್ದಾರೆ. ಈ ಕುರಿತು ತನಿಖೆ ಪ್ರಗತಿಯಲ್ಲಿದೆ.

ಮಹಾರಾಷ್ಟ್ರದ ರಾಯಗಢದಲ್ಲಿ ಶಸ್ತ್ರಾಸ್ತ್ರ ತುಂಬಿದ್ದ ಬೋಟ್‌ ಪತ್ತೆ

ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳೀಯರು ಹಾಗೂ ಮೀನುಗಾರರ ವಿಚಾರಣೆ ಆರಂಭಿಸಿದ್ದಾರೆ. 2008ರಲ್ಲಿ ಮುಂಬೈನಲ್ಲಿ ದಾಳಿ ನಡೆಯುವುದಕ್ಕೂ ಮುಂಚಿತವಾಗಿ ಗುಜರಾತ್​ನ ಪೋರ್​ ಬಂದರ್​​ನಲ್ಲಿ ಇದೇ ರೀತಿಯ ದೋಣಿ ಕಂಡುಬಂದಿತ್ತು.

  • An unidentified boat found at Harihareshwar Beach and a lifeboat found at Bharadkhol in Raigad district. Nobody is present on either of them. Coast Guard and Maharashtra Maritime Board have been informed of the same. Police Department is taking the necessary action: Local Police pic.twitter.com/gaDoFWPPvL

    — ANI (@ANI) August 18, 2022 " class="align-text-top noRightClick twitterSection" data=" ">

ದೋಣಿ ಪತ್ತೆಯಾಗಿರುವ ಪ್ರದೇಶ ಮುಂಬೈನಿಂದ 200 ಕಿಲೋ ಮೀಟರ್​ ಹಾಗೂ ಪುಣೆಯಿಂದ 170 ಕಿಲೋ ಮೀಟರ್ ದೂರದಲ್ಲಿದೆ. ಮಹಾರಾಷ್ಟ್ರದಲ್ಲಿ ಮುಂದಿನ ಕೆಲವು ದಿನಗಳಲ್ಲಿ ನಿರಂತರವಾಗಿ ಹಬ್ಬಗಳು ಬರಲಿದ್ದು ಇದರ ಬೆನ್ನಲ್ಲೇ ಘಟನೆ ನಡೆದಿರುವುದು ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

  • Maharashtra | As per primary info, some boats containing weapons & documents found in Harihareshwar & Bharadkhol of Shrivardhan in Raigad. Local Police is probing, I've demanded CM-Dy CM to urgently appoint spl team of ATS or State Agency: Aditi Tatkare, Shrivardhan (Raigad) MLA pic.twitter.com/ndl9LSP5Zj

ರಾಯಗಢ ಶಾಸಕಿ ಅದಿತಿ ತಾಟಕರ್ ಪ್ರತಿಕ್ರಿಯಿಸಿ, ಸ್ಥಳೀಯ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ. ಪ್ರಕರಣವನ್ನು ಎಟಿಎಸ್​ ಮೂಲಕ ತನಿಖೆ ನಡೆಸಲು ಸಿಎಂ ಹಾಗೂ ಡೆಪ್ಯುಟಿ ಸಿಎಂ ಬಳಿ ಮನವಿ ಮಾಡುವುದಾಗಿ ತಿಳಿಸಿದರು.

Last Updated : Aug 18, 2022, 4:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.