ETV Bharat / bharat

ಮಹಿಳೆಯರಿಗೆ ಗೌರವವಿಲ್ಲ.. ಪಕ್ಷ ತೊರೆದ ತಮಿಳುನಾಡು ಬಿಜೆಪಿ ನಾಯಕಿ ಗಾಯತ್ರಿ ರಘುರಾಮ್

ತಮಿಳುನಾಡು ಬಿಜೆಪಿಯಲ್ಲಿ ಆಂತರಿಕ ಕಿತ್ತಾಟ - ಅಧ್ಯಕ್ಷರ ನಡೆಗೆ ಬೇಸತ್ತು ಬಿಜೆಪಿ ನಾಯಕಿ ಗಾಯತ್ರಿ ರಘುರಾಮ್ ರಾಜೀನಾಮೆ - ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ವಾಗ್ದಾಳಿ

bjp-leader-gayathri-raguram
ಪಕ್ಷ ತೊರೆದ ತಮಿಳುನಾಡು ಬಿಜೆಪಿ ನಾಯಕಿ ಗಾಯತ್ರಿ ರಘುರಾಮ್
author img

By

Published : Jan 3, 2023, 1:59 PM IST

ಚೆನ್ನೈ (ತಮಿಳುನಾಡು): ಪಕ್ಷದ ಆಂತರಿಕ ನಿಯಮಗಳನ್ನು ಮೀರಿ, ಮುಗುಗರ ಉಂಟು ಮಾಡುತ್ತಿದ್ದ ಆರೋಪದ ಮೇಲೆ 6 ತಿಂಗಳು ಅಮಾನತಾಗಿದ್ದ ತಮಿಳುನಾಡು ಬಿಜೆಪಿ ನಾಯಕಿ, ಇತರ ರಾಜ್ಯ ಮತ್ತು ಸಾಗರೋತ್ತರ ತಮಿಳು ಅಭಿವೃದ್ಧಿ ವಿಭಾಗದ ಮಾಜಿ ಅಧ್ಯಕ್ಷೆ ಗಾಯತ್ರಿ ರಘುರಾಮ್ ಅವರು ಬಿಜೆಪಿಗೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿದ್ದಾರೆ.

'ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಮಹಿಳೆಯರಿಗೆ ಗೌರವ, ಸಮಾನ ಅವಕಾಶಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿರುವ ಗಾಯತ್ರಿ ಅವರು, ಭಾರವಾದ ಹೃದಯದಿಂದ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಪಕ್ಷದಿಂದ ಹೊರಗಿದ್ದು ಟ್ರೋಲ್​ಗೆ ಒಳಗಾಗುವುದೇ ಇದಕ್ಕಿಂತ ಉತ್ತಮ ಆಯ್ಕೆಯಾಗಿದೆ' ಎಂದು ಅವರು ಟ್ವೀಟ್​ನಲ್ಲಿ ಹೇಳಿದ್ದಾರೆ.

ಅಣ್ಣಾಮಲೈ ವಿರುದ್ಧ ಗಂಭೀರ ಆರೋಪ: ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿರುವ ಮಾಜಿ ಪೊಲೀಸ್​ ಅಧಿಕಾರಿ ಕೆ. ಅಣ್ಣಾಮಲೈ ಅವರ ವಿರುದ್ಧ ಗಂಭೀರ ಆರೋಪ ಮಾಡಿರುವ ಗಾಯತ್ರಿ, 'ಅವರ ನಾಯಕತ್ವದಲ್ಲಿ ಪಕ್ಷದ ಮಹಿಳೆಯರು ಸುರಕ್ಷಿತವಾಗಿಲ್ಲ. ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದರು. 6 ತಿಂಗಳು ಅಮಾನತು ಮಾಡಿ ಪಕ್ಷದಿಂದ ದೂರವಿರಿಸಿದರು' ಎಂದು ಹೇಳಿದರು.

'ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಕ್ಷಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ನನ್ನೊಂದಿಗೆ ಹಂಚಿಕೊಳ್ಳದಂತೆ ತಡೆದರು. ನಿರಂತರವಾಗಿ ಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪ ನನ್ನ ಮೇಲೆ ಹಾಕಲಾಯಿತು' ಪಕ್ಷದ ಅಧ್ಯಕ್ಷರ ವಿರುದ್ಧ ದೂರಿದರು.

'ನನ್ನ ಹೃದಯ ಮತ್ತು ಆತ್ಮಸಾಕ್ಷಿಯಲ್ಲಿ ನಾನು ಹಿಂದೂ ಧರ್ಮವನ್ನು ಬಲವಾಗಿ ನಂಬುತ್ತೇನೆ. ಅದನ್ನು ರಾಜಕೀಯ ಪಕ್ಷವೊಂದರಿಂದ ಪಡೆಯಬೇಕಿಲ್ಲ. ದೈವ ಮತ್ತು ಧರ್ಮಾಚರಣೆಗೆ ದೇವಸ್ಥಾನಕ್ಕೆ ಹೋಗುತ್ತೇನೆ. ದೇವರು ಎಲ್ಲೆಲ್ಲೂ ಇದ್ದಾನೆ. ನನ್ನೊಳಗೂ ಇದ್ದಾನೆ' ಎಂದೆಲ್ಲಾ ಬರೆದು ಟ್ವೀಟ್​ ಮಾಡಿದ್ದಾರೆ.

ಓದಿ: ಪ್ರದೀಪ್ ಸಾವು ಆತ್ಮಹತ್ಯೆ ಅಲ್ಲ, ಅದೊಂದು ಕೊಲೆ: ಸುರ್ಜೇವಾಲಾ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.