ETV Bharat / bharat

ಅಸ್ಸಾಂ: ಅಲ್​ಖೈದಾ ಜೊತೆ ನಂಟು ಹೊಂದಿದ್ದ ಇಬ್ಬರು ಇಮಾಮ್​ಗಳ ಬಂಧನ - ಅಲ್​ಖೈದಾ ಜೊತೆ ನಂಟು

ನಿಷೇಧಿತ ಉಗ್ರ ಸಂಘಟನೆಗಳಾದ ಅಲ್ ಖೈದಾ ಇಂಡಿಯನ್​ ಸಬ್​ಕಾಂಟಿನೆಂಟ್​ ಮತ್ತು ಅನ್ಸರುಲ್ಲಾ ಬಾಂಗ್ಲಾ ಟೀಂ ಜೊತೆ ಗುರುತಿಸಿಕೊಂಡ ಮಸೀದಿಯ ಇಬ್ಬರು ಇಮಾಮ್​ಗಳನ್ನು ಅಸ್ಸಾಂನಲ್ಲಿ ಹೆಡೆಮುರಿಕಟ್ಟಲಾಗಿದೆ.

suspected-terrorists-with-al-qaeda-links
ಮಸೀದಿಯ ಇಬ್ಬರು ಇಮಾಮ್​ಗಳ ಬಂಧನ
author img

By

Published : Aug 21, 2022, 12:43 PM IST

ಗೋಲ್ಪಾರಾ (ಅಸ್ಸಾಂ): ಭಯೋತ್ಪಾದಕ ಸಂಘಟನೆಗಳಾದ ಅಲ್ ಖೈದಾ ಇಂಡಿಯನ್​ ಸಬ್​ಕಾಂಟಿನೆಂಟ್​ (ಎಕ್ಯೂಐಎಸ್) ಮತ್ತು ಅನ್ಸರುಲ್ಲಾ ಬಾಂಗ್ಲಾ ಟೀಂ (ಎಬಿಟಿ) ಜೊತೆ ನಂಟು ಹೊಂದಿರುವ ಇಬ್ಬರು ಶಂಕಿತ ಉಗ್ರರನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ.

ಟಿಂಕುನಿಯಾ ಶಾಂತಿಪುರ ಮಸೀದಿಯ ಇಮಾಮ್ ಆದ ಅಬ್ದುಸ್ ಸುಭಾನ್ ಮತ್ತು ತಿಲಪಾರಾ ನಾತುನ್ ಮಸೀದಿಯ ಇಮಾಮ್ ಜಲಾಲುದ್ದೀನ್ ಶೇಖ್ ಬಂಧಿತರು. ಈ ಇಬ್ಬರೂ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, 2 ಗಂಟೆಗಳ ಕಾಲ ವಿಚಾರಣೆ ನಡೆಸಿ ಬಳಿಕ ಅವರನ್ನು ಬಂಧಿಸಲಾಗಿದೆ.

ಶಂಕಿತ ಉಗ್ರರ ಬಂಧನ ಬಳಿಕ ಅವರ ಮನೆಗಳನ್ನು ಶೋಧ ನಡೆಸಿದಾಗ ಅಲ್ ಖೈದಾ, ಜಿಹಾದಿಗೆ ಸಂಬಂಧಿತ ವಸ್ತುಗಳು, ಪೋಸ್ಟರ್‌ಗಳು, ಪುಸ್ತಕಗಳು ಮತ್ತು ಇತರ ದಾಖಲೆಗಳ ಜೊತೆಗೆ ಮೊಬೈಲ್ ಫೋನ್‌ಗಳು, ವಿವಿಧ ಮೊಬೈಲ್​ ಸಿಮ್ ಮತ್ತು ಐಡಿ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ಭಯೋತ್ಪಾದಕರಿಗೆ ಬಾಹ್ಯ ನೆರವು ನೀಡಿರುವುದು ತನಿಖೆಯ ವೇಳೆ ತಿಳಿದು ಬಂದಿದೆ. ಇದಲ್ಲದೇ, ಅಕ್ರಮವಾಗಿ ದೇಶಕ್ಕೆ ಬಂದ ಬಾಂಗ್ಲಾ ಪ್ರಜೆಗಳಗೂ ಆಶ್ರಯ ನೀಡಿದ್ದಾರೆ. ಬಂಧಿತರು 2019 ರ ಡಿಸೆಂಬರ್‌ನಲ್ಲಿ ಮದರಸಾವೊಂದರಲ್ಲಿ ಧರ್ಮ ಸಭೆಯನ್ನು ಆಯೋಜಿಸಿದ್ದರು. ಅಲ್ಲಿಗೆ ಎಕ್ಯೂಐಎಸ್​ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಅನೇಕ ಬಾಂಗ್ಲಾ ಪ್ರಜೆಗಳನ್ನು ಆಹ್ವಾನಿಸಿ ಉಪನ್ಯಾಸ ಕೊಡಿಸಿದ್ದರು.

ಬಂಧಿತ ಇಬ್ಬರು ಇಮಾಮ್​ಗಳು ತಾವು ಎಕ್ಯೂಐಎಸ್​ ಉಗ್ರ ಸಂಘಟನೆಯ ಸದಸ್ಯರು ಎಂಬುದನ್ನು ತಾವೇ ಒಪ್ಪಿಕೊಂಡಿದ್ದಾರೆ. ಇದಲ್ಲದೇ ಇವರು ಸ್ಲೀಪರ್ ಸೆಲ್‌ಗಳನ್ನು ನೇಮಿಸಿಕೊಂಡಿದ್ದರು. ಬಾಂಗ್ಲಾದೇಶಿ ಭಯೋತ್ಪಾದಕರಿಂದ ನೇರವಾಗಿ ಹಣದ ನೆರವು ಪಡೆದುಕೊಂಡಿರುವುದನ್ನು ಬಾಯ್ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಇದನ್ನೂ ಓದಿ: ಕೆಲಸ ಕೇಳಿ ಬಂದ ಯುವತಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ದುರುಳರು, ಮೂವರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.