ETV Bharat / bharat

ಹಸು ಕಳ್ಳತನ ಶಂಕೆ: ತ್ರಿಪುರಾದಲ್ಲಿ ಮೂವರು ಯುವಕರನ್ನು ಥಳಿಸಿ ಕೊಂದ ಜನರು

ಹಸುಗಳನ್ನು ಸಾಗಿಸುತ್ತಿದ್ದ ಮೂವರು ಯುವಕರನ್ನು ಅವರು ಸಾಯುವವರೆಗೂ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತ್ರಿಪುರದಲ್ಲಿ ನಡೆದಿದೆ.

author img

By

Published : Jun 21, 2021, 10:46 AM IST

Suspected cattle lifters lynched to death by mob
ಮೂವರು ಯುವಕರನ್ನು ಥಳಿಸಿ ಕೊಂದ ಜನರು

ಖೋವಾಯಿ (ತ್ರಿಪುರ): ಹಸುಗಳನ್ನು ಕಳ್ಳತನ ಮಾಡಿದ್ದಾರೆಂದು ಶಂಕಿಸಿ ಮೂವರು ಯುವಕರನ್ನು ಜನರು ಹಿಗ್ಗಾಮುಗ್ಗಾ ಥಳಿಸಿ ಕೊಂದಿರುವ ಘಟನೆ ತ್ರಿಪುರದ ಖೋವಾಯಿ ಜಿಲ್ಲೆಯ ಎಡಿಸಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಜಹೇದ್ ಹೊಸೈನ್ (28), ಬಿಲ್ಲಾಲ್ ಮಿಯಾ (30) ಮತ್ತು ಸೈಫುಲ್ ಇಸ್ಲಾಂ (18) ಎಂದು ಗುರುತಿಸಲಾಗಿದೆ.

ನಿನ್ನೆ ಬೆಳಗ್ಗೆ ಎಡಿಸಿ ಗ್ರಾಮದ ಸಮೀಪ ಮೂವರು ಅಪರಿಚಿತ ಯುವಕರು ಅನುಮಾನಾಸ್ಪದವಾಗಿ ಟ್ರಕ್​​ ಓಡಿಸುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಅವರನ್ನು ಅಡ್ಡಗಟ್ಟಿದ್ದಾರೆ. ಟ್ರಕ್​ನಲ್ಲಿ ಐದು ಹಸುಗಳಿರುವುದನ್ನು ನೋಡಿದ ಜನರು ಯುವಕರನ್ನು ಮನಬಂದಂತೆ ಥಳಿಸಿದ್ದಾರೆ.

ಇದನ್ನೂ ಓದಿ: ಬಿರಿಯಾನಿ ಚೆನ್ನಾಗಿಲ್ಲ ಎಂದಿದ್ದಕ್ಕೆ ಇಬ್ಬರಿಗೆ ಥಳಿಸಿದ ಹೋಟೆಲ್ ಸಿಬ್ಬಂದಿ

ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದ ಯುವಕರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇನ್ನೂ ಯಾರನ್ನೂ ಬಂಧಿಸಿಲ್ಲ. ಖೋವಾಯಿ ಜಿಲ್ಲೆಯಲ್ಲಿ ಜಾನುವಾರು ಕಳ್ಳತನದ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದ್ದು, ಇದು ಸ್ಥಳೀಯರನ್ನು ಕೆರಳಿಸಿದೆ ಎಂದು ಹೇಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.