ನವದೆಹಲಿ: ಬಿಜೆಪಿಯ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ರಾಜಕೀಯ ರಂಗ ಪ್ರವೇಶಿಸಿದ್ದಾರೆ. ದೆಹಲಿ ಬಿಜೆಪಿಯ ಕಾನೂನು ವಿಭಾಗದ ಸಹ ಸಂಚಾಲಕರಾಗಿ ಬಾನ್ಸುರಿ ಸ್ವರಾಜ್ ನೇಮಕಗೊಂಡಿದ್ದಾರೆ.
ಕಳೆದ ವರ್ಷ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿತ್ತು. ಇದಾದ ನಂತರ ಆಗಿನ ದೆಹಲಿ ಘಟಕದ ಅಧ್ಯಕ್ಷ ಆದೇಶ್ ಗುಪ್ತಾ ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಳೆದ ಎರಡು ದಿನಗಳ ಹಿಂದೆಯಷ್ಟೇ ದೆಹಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವೀರೇಂದ್ರ ಸಚ್‌ದೇವ್ ಅವರನ್ನು ಆಯ್ಕೆ ನೇಮಕ ಮಾಡಲಾಗಿದೆ.
ಇದನ್ನೂ ಓದಿ: ಎಂಸಿಡಿ ಚುನಾವಣೆ ಸೋಲು: ದೆಹಲಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಆದೇಶ್ ಗುಪ್ತಾ ರಾಜೀನಾಮೆ
ವೀರೇಂದ್ರ ಸಚ್‌ದೇವ್ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ನಂತರ ದೆಹಲಿ ಬಿಜೆಪಿಯಲ್ಲಿ ಮಾಡಿದ ಮೊದಲ ನೇಮಕಾತಿ ಇದಾಗಿದೆ. ಪಕ್ಷದ ನಿರೀಕ್ಷೆಗೆ ತಕ್ಕಂತೆ ನಡೆದುಕೊಂಡು ಸಂಘಟನೆಯನ್ನು ಮತ್ತಷ್ಟು ಬಲಪಡಿಸುವಿರಿ ಎಂಬ ಸಂಪೂರ್ಣ ನಂಬಿಕೆ ಇದೆ ಎಂದು ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರಿಗೆ ಬರೆದ ನೇಮಾಕತಿ ಪತ್ರದಲ್ಲಿ ವೀರೇಂದ್ರ ತಿಳಿಸಿದ್ದಾರೆ. ಈ ಮೂಲಕ ಬಾನ್ಸುರಿ ಸ್ವರಾಜ್ ಸಕ್ರಿಯ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವುದು ಸ್ಪಷ್ಟವಾಗಿದೆ.
-
I am grateful to the Hon'ble PM @narendramodi ji, @AmitShah ji, @JPNadda ji, @blsanthosh ji, @Virend_Sachdeva ji, @BJP4Delhi and @BJP4India for giving me this opportunity to serve the party as the state co-convenor of the Bharatiya Janata Party Delhi State Legal Cell. pic.twitter.com/ItS4to99hn
— Bansuri Swaraj (@BansuriSwaraj) March 26, 2023 " class="align-text-top noRightClick twitterSection" data="
">I am grateful to the Hon'ble PM @narendramodi ji, @AmitShah ji, @JPNadda ji, @blsanthosh ji, @Virend_Sachdeva ji, @BJP4Delhi and @BJP4India for giving me this opportunity to serve the party as the state co-convenor of the Bharatiya Janata Party Delhi State Legal Cell. pic.twitter.com/ItS4to99hn
— Bansuri Swaraj (@BansuriSwaraj) March 26, 2023I am grateful to the Hon'ble PM @narendramodi ji, @AmitShah ji, @JPNadda ji, @blsanthosh ji, @Virend_Sachdeva ji, @BJP4Delhi and @BJP4India for giving me this opportunity to serve the party as the state co-convenor of the Bharatiya Janata Party Delhi State Legal Cell. pic.twitter.com/ItS4to99hn
— Bansuri Swaraj (@BansuriSwaraj) March 26, 2023
ಪ್ರಧಾನಿಗೆ ಧನ್ಯವಾದ ಸಲ್ಲಿಕೆ: ದೆಹಲಿ ಬಿಜೆಪಿಯ ಕಾನೂನು ವಿಭಾಗದ ಸಹ ಸಂಚಾಲಕರಾಗಿ ನೇಮಕವಾದ ಬಗ್ಗೆ ಬಾನ್ಸುರಿ ಸ್ವರಾಜ್ ಟ್ವೀಟ್ ಮಾಡಿದ್ದು, ಪಕ್ಷದ ರಾಜ್ಯ ಸಹ ಸಂಚಾಲಕನಾಗಿ ಪಕ್ಷಕ್ಕೆ ಸೇವೆ ಸಲ್ಲಿಸಲು ನನಗೆ ಈ ಅವಕಾಶ ನೀಡಿದ ಪ್ರಧಾನಿ ಪ್ರಧಾನಿ ಮೋದಿ, ಅಮಿತ್ ಶಾ, ಜೆಪಿ ನಡ್ಡಾ, ಬಿಎಲ್ ಸಂತೋಷ್, ವೀರೇಂದ್ರ ಸಚ್‌ದೇವ್ ಅವರಿಗೆ ನಾನು ಆಭಾರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ವಕೀಲರಾಗಿರುವ ಬಾನ್ಸುರಿ: ಸುಷ್ಮಾ ಸ್ವರಾಜ್ ಅವರ ಏಕೈಕ ಪುತ್ರಿಯಾಗಿರುವ ಬಾನ್ಸುರಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಕಾನೂನು ಪದವಿ ಪಡೆದ ನಂತರ ಅವರು ತಮ್ಮ ಸ್ವರಾಜ್ ಕೌಶಲ್ ತಂದೆಯಂತೆ ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಕ್ರಿಮಿನಲ್ ವಕೀಲರಾಗಿದ್ದಾರೆ. ಈ ಹಿಂದೆ ಐಪಿಎಲ್ ಮಾಜಿ ಕಮಿಷನರ್ ಲಲಿತ್ ಮೋದಿ ಪಾಸ್‌ಪೋರ್ಟ್ ಮರುಸ್ಥಾಪಿಸಲು ಸಹಾಯ ಮಾಡಿದ ವಿಷಯದಲ್ಲಿ ಬಾನ್ಸುರಿ ಸ್ವರಾಜ್ ಹೆಸರು ಬೆಳಕಿಗೆ ಬಂದಿತ್ತು.
2014ರ ಆಗಸ್ಟ್ 27ರಂದು ಹೈಕೋರ್ಟ್ ಲಲಿತ್ ಮೋದಿ ಪಾಸ್ಪೋರ್ಟ್ಅನ್ನು ಮರುಸ್ಥಾಪಿಸಿತ್ತು. ಆಗ ಬಾನ್ಸುರಿ ಸ್ವರಾಜ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪಾಸ್ ಪೋರ್ಟ್ ಪ್ರಕರಣದಲ್ಲಿ ರಿಲೀಫ್ ಸಿಕ್ಕ ಬಳಿಕ ಲಲಿತ್ ಮೋದಿ ತಮ್ಮ ಕಾನೂನು ತಂಡವನ್ನು ಅಭಿನಂದಿಸಿದ್ದಾರೆ. ಇದಾದ ನಂತರ ಲಲಿತ್ ಮೋದಿ ಅವರು ತಮ್ಮ ಟ್ವೀಟ್‌ನಲ್ಲಿ ಕಾನೂನು ತಂಡದ ಸದಸ್ಯರಲ್ಲಿ ಬಾನ್ಸುರಿ ಸೇರಿದಂತೆ ಇತರ ಎಂಟು ವಕೀಲರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ.
ಈ ವಿಷಯವು ಚರ್ಚೆಗೆ ಗ್ರಾಸವಾಗಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಅವರನ್ನು ಸಮರ್ಥಿಸಿಕೊಂಡಿತ್ತು. ಬಾನ್ಸುರಿ ತನ್ನದೇ ಆದ ವೃತ್ತಿಯನ್ನು ಹೊಂದಿದ್ದಾರೆ. ತಮ್ಮ ಕೆಲಸವನ್ನು ಮಾಡಲು ಸ್ವತಂತ್ರರು ಹೇಳಿದ್ದರು. ಇನ್ನು, ಸುಷ್ಮಾ ಸ್ವರಾಜ್ 2019ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇತ್ತೀಚೆಗಷ್ಟೇ ಸುಷ್ಮಾ ಸ್ವರಾಜ್ ಅವರ ಪುಣ್ಯತಿಥಿಯಂದು ಬಾನ್ಸುರಿ ಭಾವುಕರಾಗಿ ಬರೆದುಕೊಂಡಿದ್ದರು. ಇವತ್ತಿಗೂ ನನ್ನ ಶಕ್ತಿಯಾಗಿ ನನ್ನ ಅಮ್ಮ ಇದ್ದಾರೆ. ನನ್ನ ನಿರ್ಧಾರದಲ್ಲಿ ನಿಮ್ಮ ವಿವೇಚನೆ ಇದೆ ಎಂದು ಬಾನ್ಸುರಿ ಸ್ವರಾಜ್ ಹೇಳಿದ್ದರು.
ಇದನ್ನೂ ಓದಿ: ಸುಷ್ಮಾ ಸ್ವರಾಜ್ ಕೊನೆಯ ಆಸೆ ಏನಾಗಿತ್ತು? ಮಗಳು ಈಡೇರಿಸಿದ್ಲು!