ETV Bharat / bharat

ಸಹ ಕುಸ್ತಿಪಟು ಹತ್ಯೆ ಪ್ರಕರಣ : ಸುಶೀಲ್ ಕುಮಾರ್ ಶಸ್ತ್ರಾಸ್ತ್ರ ಲೈಸೆನ್ಸ್ ರದ್ದು - ಸಹ ಕುಸ್ತಿಪಟು ಸಾಗರ್ ಧಂಕರ್ ಕೊಲೆ ಪ್ರಕರಣ

ಕೃತ್ಯದ ವೇಳೆ ಸುಶೀಲ್ ಕುಮಾರ್ ಬಳಸಿದ್ದ ಮೊಬೈಲ್ ಫೋನ್ ಹಾಗೂ ಬಟ್ಟೆಯನ್ನ ಪೊಲೀಸರು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ. ಉದ್ದೇಶ ಪೂರ್ವಕವಾಗಿ ಸುಶೀಲ್ ಕುಮಾರ್ ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ..

ಸುಶೀಲ್ ಕುಮಾರ್
ಸುಶೀಲ್ ಕುಮಾರ್
author img

By

Published : Jun 1, 2021, 5:27 PM IST

ನವದೆಹಲಿ : ಸಹ ಕುಸ್ತಿಪಟು ಸಾಗರ್ ಧಂಕರ್ ಹತ್ಯೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಕುಸ್ತಿಪಟು ಸುಶೀಲ್ ಕುಮಾರ್ ಶಸ್ತ್ರಾಸ್ತ್ರ ಪರವಾನಿಗೆ ಅಮಾನತುಗೊಳಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಇಲಾಖೆಯು ಈಗಾಗಲೇ ಲೈಸೆನ್ಸ್ ರದ್ಧತಿ ಪ್ರಕ್ರಿಯೆ ಆರಂಭಿಸಿದೆ ಎಂದು ತಿಳಿಸಿದ್ದಾರೆ.

ಈ ನಡುವೆ ಸುಶೀಲ್ ಕುಮಾರ್ ಅವರನ್ನ ಹರಿದ್ವಾರಕ್ಕೆ ಕರೆದೊಯ್ದಿದ್ದ ಪೊಲೀಸರು ಘಟನೆ ಬಳಿಕ ಅವರು ಅಡಗಿದ್ದ ಸ್ಥಳ ಹಾಗೂ ಅವರಿಗೆ ಸಹಾಯ ಮಾಡಿದ ಜನರ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.

ಇನ್ನು, ಈ ಹತ್ಯೆ ಪ್ರಕರಣದಲ್ಲಿ 13 ಮಂದಿ ಭಾಗಿಯಾಗಿದ್ದಾರೆ. ಅವರಲ್ಲಿ 9 ಆರೋಪಿಗಳ ಬಂಧನವಾಗಿದೆ. ಉಳಿದಂತೆ ನಾಲ್ವರು ಶಂಕಿತರನ್ನು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

38 ವರ್ಷದ ಒಲಿಂಪಿಕ್ ಚಿನ್ನ ವಿಜೇತ ಸುಶೀಲ್ ಕುಮಾರ್ ಪ್ರಮುಖ ಆರೊಪಿಯಾಗಿದ್ದು, ಈತನ ಸಹಚರ ಅಜಯ್ ಬಕ್ಕರ್ ​ವಾಲನನ್ನು ವಿಶೇಷ ತನಿಖಾ ತಂಡ ಹಾಗೂ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ ಸುಶೀಲ್ ಕುಮಾರ್ ಘಟನೆ ನಡೆದ 18 ದಿನದ ಅವಧಿಯಲ್ಲಿ 7 ರಾಜ್ಯಗಳಲ್ಲಿ ಓಡಾಡಿದ್ದಾನೆ. ಜೊತೆಗೆ ಹಲವು ಬಾರಿ ತನ್ನ ಸಿಮ್ ಕಾರ್ಡ್​ಗಳನ್ನ ಬಳಸಿ ತನಿಖೆಯ ದಾರಿ ತಪ್ಪಿಸಿದ್ದಾನೆ.

ಆದರೆ, ಕೃತ್ಯದ ವೇಳೆ ಸುಶೀಲ್ ಕುಮಾರ್ ಬಳಸಿದ್ದ ಮೊಬೈಲ್ ಫೋನ್ ಹಾಗೂ ಬಟ್ಟೆಯನ್ನ ಪೊಲೀಸರು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ. ಉದ್ದೇಶ ಪೂರ್ವಕವಾಗಿ ಸುಶೀಲ್ ಕುಮಾರ್ ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಓದಿ: ಶೀಘ್ರದಲ್ಲೇ ತರಬೇತಿಗಾಗಿ ಒಲಿಂಪಿಕ್​ ಬಾಕ್ಸರ್​ಗಳ ತಂಡ ವಿದೇಶ ಪ್ರವಾಸ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.