ನಾಗ್ಪುರ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯುತ್ತಿದೆ. ಈ ಪಂದ್ಯಕ್ಕಾಗಿ ಟೀಂ ಇಂಡಿಯಾ ತನ್ನ ಪ್ಲೇಯಿಂಗ್ -11 ರಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಕೆಎಸ್ ಭರತ್ ಅವರನ್ನು ಸೇರಿಸಿದೆ. ಈ ಟೆಸ್ಟ್‌ನಲ್ಲಿ ಈ ಇಬ್ಬರೂ ಆಟಗಾರರನ್ನು ಕಣಕ್ಕಿಳಿಸಲು ತಂಡದ ನಾಯಕ ರೋಹಿತ್ ಶರ್ಮಾ ನಿರ್ಧರಿಸಿದ್ದರು. ಏತನ್ಮಧ್ಯೆ ಪಂದ್ಯ ಆರಂಭದ ಮುನ್ನ ಸೂರ್ಯ ಮತ್ತು ಕೆಎಸ್ ಭರತ್ ಅವರಿಗೆ ಮೈದಾನದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದ ಕ್ಯಾಪ್ ಅನ್ನು ಹಸ್ತಾಂತರಿಸಲಾಯಿತು. ಮಾಜಿ ಕ್ರಿಕೆಟಿಗ ಮತ್ತು ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಸೂರ್ಯಕುಮಾರ್ ಯಾದವ್ ಅವರಿಗೆ ಟೆಸ್ಟ್ ಕ್ಯಾಪ್ ಹಸ್ತಾಂತರಿಸಿದರು.
-
SKY makes his TEST DEBUT as he receives the Test cap from former Head Coach @RaviShastriOfc 👏 👏
— BCCI (@BCCI) February 9, 2023 " class="align-text-top noRightClick twitterSection" data="
Good luck @surya_14kumar 👍 👍#TeamIndia | #INDvAUS | @mastercardindia pic.twitter.com/JVRyK0Vh4u
">SKY makes his TEST DEBUT as he receives the Test cap from former Head Coach @RaviShastriOfc 👏 👏
— BCCI (@BCCI) February 9, 2023
Good luck @surya_14kumar 👍 👍#TeamIndia | #INDvAUS | @mastercardindia pic.twitter.com/JVRyK0Vh4uSKY makes his TEST DEBUT as he receives the Test cap from former Head Coach @RaviShastriOfc 👏 👏
— BCCI (@BCCI) February 9, 2023
Good luck @surya_14kumar 👍 👍#TeamIndia | #INDvAUS | @mastercardindia pic.twitter.com/JVRyK0Vh4u
ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಆಟವಾಡಿದ ನಂತರ ಸೂರ್ಯಕುಮಾರ್ ಯಾದವ್ ಏಕದಿನ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟಿದ್ದರು. ಆದರೆ, ಟೆಸ್ಟ್ ಕ್ರಿಕೆಟ್ ಆಡಬೇಕಾದರೆ ಅವರು ಬಹಳ ಸಮಯ ಕಾಯಬೇಕಾಯಿತು. ಆದರೆ, ಈಗ ಅಂತಿಮವಾಗಿ ಅವರು ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರಿಂದ ಟೆಸ್ಟ್ ಕ್ಯಾಪ್ ಪಡೆದರು. ಈ ಸಂದರ್ಭದಲ್ಲಿ ಸೂರ್ಯಕುಮಾರ್ ಅವರ ಭಾವಾಭಿನಯಗಳು ಗಮನ ಸೆಳೆಯುವಂತಿದ್ದವು.
ಸೂರ್ಯಕುಮಾರ್ ಜೊತೆಗೆ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕೆಎಸ್ ಭರತ್ ಕೂಡ ಟೆಸ್ಟ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. ನಾಗ್ಪುರ ಟೆಸ್ಟ್‌ಗಾಗಿ ಟೀಮ್ ಇಂಡಿಯಾದ ಪ್ಲೇಯಿಂಗ್-11 ರಲ್ಲೂ ಅವರು ಸ್ಥಾನ ಪಡೆದಿದ್ದಾರೆ. ಅದೇ ಸಮಯದಲ್ಲಿ ಚೇತೇಶ್ವರ ಪೂಜಾರ ಅವರು ಟೆಸ್ಟ್ ಚೊಚ್ಚಲ ಪಂದ್ಯಕ್ಕಾಗಿ ಕೆಎಸ್ ಭರತ್ ಅವರಿಗೆ ಕ್ಯಾಪ್ ಅನ್ನು ಹಸ್ತಾಂತರಿಸಿದರು. ಇನ್ನು ಆಸ್ಟ್ರೇಲಿಯ ತಂಡದ ಬಗ್ಗೆ ನೋಡುವುದಾದರೆ ನಾಯಕ ಪ್ಯಾಟ್ ಕಮಿನ್ಸ್ ಅವರು ನಾಗ್ಪುರ ಟೆಸ್ಟ್‌ಗಾಗಿ ಆಫ್ ಸ್ಪಿನ್ನರ್ ಟಾಡ್ ಮರ್ಫಿ ಅವರನ್ನು ಪ್ಲೇಯಿಂಗ್ -11 ನಲ್ಲಿ ಸೇರಿಸಿಕೊಂಡಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲಿ 22ರ ಹರೆಯದ ಟಾಡ್ ಮರ್ಫಿ ಟೆಸ್ಟ್‌ಗೆ ಪದಾರ್ಪಣೆ ಮಾಡುವ ಅವಕಾಶ ಪಡೆದಿದ್ದಾರೆ.
ಸೂರ್ಯಕುಮಾರ್ ಯಾದವ್ 2010ರಲ್ಲಿ ದೇಶಿ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟಿದ್ದರು. ಆ ವರ್ಷ ಟಿ20 ಪ್ರಥಮ ದರ್ಜೆ ಪಂದ್ಯಗಳಲ್ಲಿ ಮುಂಬೈ ಪರ ಪದಾರ್ಪಣೆ ಮಾಡಿದರು. ದೇಶಿಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಸೂರ್ಯ ಐಪಿಎಲ್‌ನಲ್ಲಿ ಅವಕಾಶ ಪಡೆದರು. 2012ರಲ್ಲಿ ಸೂರ್ಯ ಒಂದೇ ಒಂದು ಐಪಿಎಲ್ ಪಂದ್ಯ ಆಡುವ ಅವಕಾಶ ಪಡೆದಿದ್ದರು. ಆದರೆ ಇದರ ನಂತರ ಸೂರ್ಯ ತಾವು ಆಡುವ ಫ್ರಾಂಚೈಸಿಯ ಪ್ರಮುಖ ಆಟಗಾರರಾದರು.
-
Debut in international cricket for @KonaBharat 👍 👍
— BCCI (@BCCI) February 9, 2023 " class="align-text-top noRightClick twitterSection" data="
A special moment for him as he receives his Test cap from @cheteshwar1 👌 👌#TeamIndia | #INDvAUS | @mastercardindia pic.twitter.com/dRxQy8IRvZ
">Debut in international cricket for @KonaBharat 👍 👍
— BCCI (@BCCI) February 9, 2023
A special moment for him as he receives his Test cap from @cheteshwar1 👌 👌#TeamIndia | #INDvAUS | @mastercardindia pic.twitter.com/dRxQy8IRvZDebut in international cricket for @KonaBharat 👍 👍
— BCCI (@BCCI) February 9, 2023
A special moment for him as he receives his Test cap from @cheteshwar1 👌 👌#TeamIndia | #INDvAUS | @mastercardindia pic.twitter.com/dRxQy8IRvZ
ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಅವರಿಗೆ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿತು. 14 ಮಾರ್ಚ್ 2021 ರಂದು ಸೂರ್ಯಕುಮಾರ್ ಇಂಗ್ಲೆಂಡ್ ವಿರುದ್ಧದ T20 ಪಂದ್ಯದಲ್ಲಿ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ಇದಾದ ನಾಲ್ಕು ತಿಂಗಳ ನಂತರ ಸೂರ್ಯಕುಮಾರ್ ಒನ್ಡೇ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶ ಪಡೆದರು.
ಸೂರ್ಯ ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯ ಆಡಿದ್ದಾರೆ. ಇದೀಗ ಒಂದು ವರ್ಷದೊಳಗೆ ಭಾರತದ ಟೆಸ್ಟ್ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಸೂರ್ಯ ಪ್ರಸ್ತುತ T20I ರ್‍ಯಾಂಕಿಂಗ್‌ನಲ್ಲಿ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿರುವುದು ಗಮನಾರ್ಹ. ಇವರು 48 T20 ಪಂದ್ಯಗಳಲ್ಲಿ 46.52 ಸರಾಸರಿ ಮತ್ತು 175 ಸ್ಟ್ರೈಕ್ ರೇಟ್‌ನಲ್ಲಿ 1675 ರನ್ ಗಳಿಸಿದ್ದಾರೆ. ಇದಲ್ಲದೇ ಅವರು ಏಕದಿನ ಮಾದರಿಯಲ್ಲಿ 20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 28.86ರ ಸರಾಸರಿಯಲ್ಲಿ ಮತ್ತು 102 ಸ್ಟ್ರೈಕ್ ರೇಟ್‌ನಲ್ಲಿ 433 ರನ್ ಗಳಿಸಿದ್ದಾರೆ.
ಇದನ್ನೂ ಓದಿ: ಸತತವಾಗಿ ಆಟವಾಡುತ್ತಿರುವುದೇ ಇಂಗ್ಲೆಂಡ್ ತಂಡದ ಯಶಸ್ಸಿನ ಗುಟ್ಟು: ಆರೋನ್ ಫಿಂಚ್