ETV Bharat / bharat

ಶಸ್ತ್ರಚಿಕಿತ್ಸೆ ನಡೆಸಿ ಸ್ಪಂಜು ಹೊಟ್ಟೆಯಲ್ಲೇ ಬಿಟ್ಟ ವೈದ್ಯರು: ಮರು ಶಸ್ತ್ರಚಿಕಿತ್ಸೆ ನಡೆಸಿ ರೋಗಿಗಳ ಪ್ರಾಣ ರಕ್ಷಣೆ - surgical sponges left in abdomen removed successfully at jnmc

ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಎಎಂಯು ಶಸ್ತ್ರಚಿಕಿತ್ಸಾ ವಿಭಾಗದ ವೈದ್ಯರ ತಂಡ, ಮೂವರು ರೋಗಿಗಳ ಹೊಟ್ಟೆಯೊಳಗಿದ್ದ ಸ್ಪಂಜು ಹೊರತೆಗೆದು ಪ್ರಾಣ ಕಾಪಾಡಿದರು.

Surgical sponges
Surgical sponges
author img

By

Published : Nov 28, 2021, 8:00 AM IST

ಅಲಿಗಢ್(ಯುಪಿ): ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು (ಜೆಎನ್‌ಎಂಸಿ), ಅಲಿಗಢ್ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಶಸ್ತ್ರಚಿಕಿತ್ಸಾ ವಿಭಾಗದ ಅಧ್ಯಕ್ಷ ಅಫ್ಜಲ್ ಅನೀಸ್ ನೇತೃತ್ವದ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ, ಮೂವರು ರೋಗಿಗಳ ಹೊಟ್ಟೆಯೊಳಗಿದ್ದ ಸ್ಪಂಜನ್ನು ಹೊರತೆಗೆದಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅನೀಸ್, ಮೂವರು ರೋಗಿಗಳ ಪೈಕಿ ಇಬ್ಬರಿಗೆ ಖಾಸಗಿ ಆಸ್ಪತ್ರೆ ವೈದ್ಯರು ನಡೆಸಿದ ಕೊಲೆಸಿಸ್ಟೆಕ್ಟಮಿ ರಿಸೆಕ್ಷನ್ ನಂತರ ಅವರ ದೇಹದಲ್ಲಿ ಸಮಸ್ಯೆಗಳು ಕಂಡುಬಂದಿವೆ. ಈ ರೋಗಿಗಳು ಜ್ವರ, ವಾಂತಿ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಅವರನ್ನು ಸಿಟಿ ಸ್ಕ್ಯಾನ್‌ಗೆ ಒಳಪಡಿಸಿದಾಗ ಹೊಟ್ಟೆಯೊಳಗೆ ಅಸ್ಪಷ್ಟವಾದ ಸ್ಪಂಜು ಇರುವುದು ತಿಳಿದುಬಂದಿದೆ. ನಂತರ ನಾವು ಶಸ್ತ್ರಚಿಕಿತ್ಸೆ ಮೂಲಕ ಸ್ಪಂಜನ್ನು ಹೊರತೆಗೆದೆವು. ಖಾಸಗಿ ವೈದ್ಯರ ಅಸಡ್ಡೆಯ ಶಸ್ತ್ರಚಿಕಿತ್ಸೆಯಿಂದಾಗಿ ಹೀಗಾಗಿದೆ. ಸದ್ಯಕ್ಕೆ ಇಬ್ಬರೂ ರೋಗಿಗಳ ಆರೋಗ್ಯ ಉತ್ತಮವಾಗಿದ್ದು ಸುಧಾರಿಸಿಕೊಳ್ಳುತ್ತಿದ್ದಾರೆ ಎಂದರು.

ಇದನ್ನೂ ಓದಿ: 6 ಗಂಟೆ ಶಸ್ತ್ರಚಿಕಿತ್ಸೆ, 20 ವರ್ಷದ ಮಹಿಳೆ ಹೊಟ್ಟೆಯಿಂದ 16 ಕೆ.ಜಿ ಗಡ್ಡೆ ಹೊರತೆಗೆದ ವೈದ್ಯರು!

ಇನ್ನು ಮೂರನೇ ರೋಗಿಯ ಸೊಂಟದ ಭಾಗದಲ್ಲಿ ಹತ್ತಿ ಸ್ಪಂಜು ಕಂಡುಬಂದಿದ್ದು, ತಿಂಗಳುಗಟ್ಟಲೆ ಮಲ ವಿಸರ್ಜನೆಯಲ್ಲಿ ತೊಂದರೆ ಅನುಭವಿಸುತ್ತಿದ್ದರು. ಸಿಇಸಿಟಿ ಸ್ಕ್ಯಾನ್ ಮಾಡಿದ ನಂತರ ಸಮಸ್ಯೆ ತಿಳಿದುಬಂದಿದ್ದು, ರೆಕ್ಟೊಸಿಗ್ಮೊಯ್ಡೆಕ್ಟಮಿ (Rectosigmoidectomy) ಕಾರ್ಯವಿಧಾನವನ್ನು ಅನುಸರಿಸಿ ಟೊಳ್ಳಾದ ಒಳಾಂಗಗಳನ್ನು ಸ್ಟೇಪ್ಲಿಂಗ್ ಸಾಧನದೊಂದಿಗೆ ಪುನಃಸ್ಥಾಪಿಸಲಾಗಿದೆ. ರೋಗಿಯು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.