ETV Bharat / bharat

ಸೂರತ್ ಮಹಿಳಾ ಸಹಾಯಕ ಪ್ರಾಧ್ಯಾಪಕಿ ಆತ್ಮಹತ್ಯೆ: ಬಂಧಿತ ಮೂವರು ಆರೋಪಿಗಳಿಗೆ ಪಾಕಿಸ್ತಾನದೊಂದಿಗೆ ನಂಟು..! - ಮಹಿಳಾ ಸಹಾಯಕ ಪ್ರಾಧ್ಯಾಪಕಿರೊಬ್ಬರ ಆತ್ಮಹತ್ಯೆ ಪ್ರಕರಣ

ಗುಜರಾತ್​ನ ಸೂರತ್ ಮಹಿಳಾ ಪ್ರೊಫೆಸರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಬಂಧಿಸಲಾಗಿದೆ. ಆರೋಪಿಗೆಳಿಗೆ ಪಾಕಿಸ್ತಾನದ ಸಂಪರ್ಕವಿದೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

Surat police crack woman prof suicide case
ಸೂರತ್ ಮಹಿಳಾ ಸಹಾಯಕ ಪ್ರಾಧ್ಯಾಪಕಿ ಆತ್ಮಹತ್ಯೆ: ಬಂಧಿತ ಮೂವರು ಆರೋಪಿಗಳಿಗೆ ಪಾಕಿಸ್ತಾನದೊಂದಿಗೆ ನಂಟು..!
author img

By

Published : May 18, 2023, 11:00 PM IST

ಸೂರತ್ (ಗುಜರಾತ್‌): ಗುಜರಾತ್‌ನ ಸೂರತ್ ಮಹಿಳಾ ಸಹಾಯಕ ಪ್ರಾಧ್ಯಾಪಕಿರೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪಾಕಿಸ್ತಾನ ಮತ್ತು ಬಿಹಾರದಿಂದ ಕಾರ್ಯಾಚರಣೆ ನಡೆಸುತ್ತಿದ್ದ ಕೆಲವು ಗ್ಯಾಂಗ್‌ಗಳು ಆತ್ಮಹತ್ಯೆಯಲ್ಲಿ ಭಾಗಿಯಾಗಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಸೂರತ್‌ನ ಜಹಾಂಗೀರ್‌ಪುರ ಪ್ರದೇಶದಲ್ಲಿ ವಾಸಿಸುತ್ತಿದ್ದ ಸಹಾಯಕ ಪ್ರಾಧ್ಯಾಪಕಿರೊಬ್ಬರು ಬೆದರಿಕೆ ಮತ್ತು ಹಣದ ಸುಲಿಗೆಯಿಂದ ಬೇಸತ್ತು ಆತ್ಮಹತ್ಯೆ ಶರಣಾಗಿದ್ದಾರೆ. ಅವರ ಫೋಟೋಗಳನ್ನು ತೆಗೆದ ನಂತರ ಅವುಗಳನ್ನು ನಗ್ನ ಚಿತ್ರಗಳಾಗಿ ಮಾರ್ಫಿಂಗ್ ಮಾಡಿದ ಆರೋಪಿಗಳು ಬೆದರಿಕೆ ಹಾಕಿ, ಹಣ ವಸೂಲಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಗೆ ಪಾಕ್ತಿಸ್ತಾನದೊಂದಿಗೆ ಸಂಪರ್ಕ: ಪ್ರಕರಣದ ತನಿಖೆ ನಡೆಸುತ್ತಿರುವ ಸೂರತ್ ಪೊಲೀಸರು ಬಿಹಾರದ ಜಮುಯಿ ಪ್ರದೇಶದ ಮೂವರನ್ನು ಬಂಧಿಸಿದ್ದಾರೆ. ಅಭಿಷೇಕ್ ಸಿಂಗ್, ರೋಷನ್ ಕುಮಾರ್ ಸಿಂಗ್ ಮತ್ತು ಸೌರಭ್ ಬಂಧಿತರು. ಅವರನ್ನು ಟ್ರಾನ್ಸಿಟ್ ರಿಮಾಂಡ್‌ನಲ್ಲಿ ಸೂರತ್‌ಗೆ ಕರೆತರಲಾಯಿತು. ಪೊಲೀಸರು ಮೂವರ ಫೋನ್‌ಗಳಿಂದ 72ಕ್ಕೂ ಹೆಚ್ಚು ವಿಭಿನ್ನ ಯುಪಿಐ ಐಡಿಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ವಿಚಾರಣೆ ವೇಳೆ ಆರೋಪಿಗಳು ಘಟನೆಯ ಹಿಂದಿನ ಪ್ರಮುಖ ಮಾಸ್ಟರ್ ಮೈಂಡ್ ಜೂಹಿ ಎಂಬುವರು ಹೆಸರು ಬಹಿರಂಗವಾಗಿದೆ.

ಹಲವರಿಂದ ಹಣ ವಸೂಲಿ ಮಾಡಲಾಗಿದೆ. ಅದರಲ್ಲಿ ಒಂದು ಭಾಗವನ್ನು ಜೂಹಿ ಪಾಕಿಸ್ತಾನಕ್ಕೆ ಕಳುಹಿಸಿದ್ದಳು. ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳ ಗುರುತು ಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಯ ಮೊಬೈಲ್ ಫೋನ್‌ನಲ್ಲಿ ಪಾಕಿಸ್ತಾನದ ವಿಳಾಸ ಮತ್ತು ಜುಲ್ಫಿಕರ್ ಎಂಬ ಹೆಸರು ಇರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹೆಚ್ಚಿನ ತನಿಖೆಯಿಂದ ಆರೋಪಿಗಳ ಮೊಬೈಲ್ ಫೋನ್‌ಗಳು ಪಾಕಿಸ್ತಾನದಲ್ಲಿರುವ ಇ- ಮೇಲ್ ಐಡಿಗೆ ಲಿಂಕ್ ಆಗಿರುವುದು ಬೆಳಕಿಗೆ ಬಂದಿದೆ. ಗುಜರಾತ್, ಅರುಣಾಚಲ ಪ್ರದೇಶ ಮತ್ತು ಮಹಾರಾಷ್ಟ್ರದ ವಿವಿಧ ನಗರಗಳ ಅನೇಕ ಜನರು ಈ ಗ್ಯಾಂಗ್‌ನ ವಂಚನೆಗೆ ಬಲಿಯಾಗಿದ್ದಾರೆ. ಅವರ ವಂಚನೆಯಲ್ಲಿ ಸಿಲುಕಿರುವವರು ಪುರುಷರು ಮತ್ತು ಮಹಿಳೆಯರು ಕೂಡ ಸೇರಿದ್ದಾರೆ. ನಕಲಿ ಚಿತ್ರಗಳು ಮತ್ತು ವಿಡಿಯೋಗಳನ್ನು ಮಾಡಿ ಹಣಕ್ಕಾಗಿ ಬೆದರಿಕೆ ಹಾಕುವುದು ಅವರ ವಿಧಾನವಾಗಿದೆ.

ಸೈಬರ್ ದಾಳಿಯಿಂದ ಹತಾಶಳಾಗಿ ಯುವತಿ ಆತ್ಮಹತ್ಯೆ: ಸೈಬರ್ ದಾಳಿಯಿಂದ ಹತಾಶಳಾದ ಯುವತಿಯೊಬ್ಬಳು ಮೇ 2 ರಂದು ಕೊಟ್ಟಾಯಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೊಟ್ಟಾಯಂ ಕಟ್ಟುರುತ್ತಿ ಮಂಜೂರು ಮೂಲದ ಅಥಿರಾ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದರು. ಪೊಲೀಸರು ಅಥಿರಾ ಅವರ ಮಾಜಿ ಸ್ನೇಹಿತ ಅರುಣ್ ವಿದ್ಯಾಧರನ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೆ, ಆರೋಪಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ

ಯುವತಿಯ ಸ್ನೇಹಿತನಾಗಿದ್ದ ಅರುಣ್ ಫೇಸ್​ಬುಕ್ ಮೂಲಕ ಯುವತಿಯ ಮೇಲೆ ಸೈಬರ್ ದಾಳಿ ನಡೆಸಿದ್ದ. ಆತಿರಾ ಬಹಳ ಹಿಂದೆಯೇ ಆತನ ಜೊತೆಗಿನ ಗೆಳೆತನವನ್ನು ತೊರೆದಿದ್ದಳು.ಅರುಣ್ ವಿದ್ಯಾಧರನ್ ಫೇಸ್​ಬುಕ್​ನಲ್ಲಿ ನಿಂದನೀಯ ಪೋಸ್ಟ್​ಗಳನ್ನು ಹರಿಬಿಟ್ಟ ನಂತರ ಯುವತಿ ಕತ್ತುರುರ್ತಿ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಬಳಿಕ ಯುವತಿ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾಳೆ.

ಇದನ್ನೂ ಓದಿ: ವರನ ಮುಂದೆ ವಧುವಿಗೆ ಸಿಂಧೂರ ಇಡಿಸಿದ ಹುಚ್ಚು ಪ್ರೇಮಿ.. ಗ್ರಾಮಸ್ಥರಿಂದ ಥಳಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.