ETV Bharat / bharat

ಮಹಿಳಾ ಹಾಕಿ ತಂಡಕ್ಕೆ ಸೂರತ್‌ ವಜ್ರೋದ್ಯಮಿಯಿಂದ ವಿಶೇಷ ಬಹುಮಾನ ಘೋಷಣೆ - women's hockey team

ಟೋಕಿಯೋ ಒಲಿಂಪಿಕ್​ನಲ್ಲಿ ಮಹಿಳೆಯರ ಹಾಕಿ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. ಈ ತಂಡ ಫೈನಲ್ ಪಂದ್ಯದಲ್ಲಿ ಗೆದ್ದರೆ ತಂಡದ ಸದಸ್ಯರೆಲ್ಲರಿಗೂ ಬಹುಮಾನ ನೀಡುವುದಾಗಿ ಸೂರತ್‌ನ ವಜ್ರ ವ್ಯಾಪಾರಿ ತಿಳಿಸಿದ್ದಾರೆ.

surat-diamond-merchant-savji-dholakia-announced-prize-to-hockey-team
ಮಹಿಳಾ ಹಾಕಿ ತಂಡ ಫೈನಲ್​ನಲ್ಲಿ ಗೆದ್ದರೆ...: ಭರ್ಜರಿ ಬಹುಮಾನ ಘೋಷಿಸಿದ ಡೈಮಂಡ್ ಉದ್ಯಮಿ
author img

By

Published : Aug 4, 2021, 8:02 AM IST

ಸೂರತ್(ಗುಜರಾತ್): ವಜ್ರ ವ್ಯಾಪಾರಿ ಸಾವ್ಜಿ ಧೋಲಾಕಿಯಾ ಅವರು ಟೋಕಿಯೋ ಒಲಿಂಪಿಕ್​ನಲ್ಲಿ ಭಾಗವಹಿಸಿರುವ ಭಾರತೀಯ ಮಹಿಳೆಯರ ಹಾಕಿ ತಂಡವನ್ನು ಹುರಿದುಂಬಿಸುತ್ತಿದ್ದಾರೆ. ಫೈನಲ್​ನಲ್ಲಿ ಗೆಲುವು ಸಾಧಿಸಿದರೆ ತಂಡದ ಪ್ರತಿ ಸದಸ್ಯರಿಗೆ ಮನೆ ಕಟ್ಟಲು 11 ಲಕ್ಷ ರೂಪಾಯಿ ಹಣಕಾಸು ನೆರವು ಅಥವಾ ಕಾರು ನೀಡುವುದಾಗಿ ಅವರು ಘೋಷಿಸಿದ್ದಾರೆ.

​ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಾವ್ಜಿ ಧೋಲಾಕಿಯಾ, ಆಟಗಾರರ ಮನೋಸ್ಥೈರ್ಯ ಹೆಚ್ಚಿಸಲು ಈ ಬಹುಮಾನ ಘೋಷಿಸಿದ್ದಾಗಿ ಹೇಳಿದ್ದಾರೆ.

  • With incredible pride in my heart, I take this opportunity to announce that HK Group has decided to honour our Women hockey team players. For each player who wishes to build her dream home, we will provide assistance of Rs 11 lakh.

    — Savji Dholakia (@SavjiDholakia) August 3, 2021 " class="align-text-top noRightClick twitterSection" data=" ">

ಟೋಕಿಯೋ ಒಲಿಂಪಿಕ್​ನಲ್ಲಿ ಹಾಕಿ ಆಟಗಾರ್ತಿಯರು ಹೊಸ ಇತಿಹಾಸ ಬರೆಯುತ್ತಿದ್ದಾರೆ. ಅವರಿಗೆ ಬಹುಮಾನ ಘೋಷಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಫೈನಲ್​​ನಲ್ಲಿ ಗೆದ್ದರೆ ಹೆಚ್.​​ಕೆ ಗ್ರೂಪ್ (ಹರಿಕೃಷ್ಣ ಗ್ರೂಪ್​) ವತಿಯಿಂದ ಮನೆ ಕಟ್ಟಲು ಹಣಕಾಸು ನೆರವು ಅಥವಾ ಕಾರು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Tokyo Olympics Javelin: ಮೊದಲ ಪ್ರಯತ್ನದಲ್ಲಿ ಫೈನಲ್​​ಗೇರಿದ ನೀರಜ್ ಚೋಪ್ರಾ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.