ETV Bharat / bharat

ಯುಪಿ ಚುನಾವಣೆ: ಬಿಜೆಪಿಗಾಗಿ ವಿಶೇಷ ಸೀರೆಗಳನ್ನು ತಯಾರು ಮಾಡಿದ ಸೂರತ್ ಉದ್ಯಮಿಗಳು - ಬಿಜೆಪಿಗಾಗಿ ವಿಶೇಷ ಸೀರೆಗಳನ್ನು ತಯಾರು ಮಾಡಿದ ಸೂರತ್ ಉದ್ಯಮಿಗಳು

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ರಾಮಮಂದಿರ ಪ್ರಮುಖ ವಿಷಯವಾಗಲಿದೆ. ಸೂರತ್‌ನ ಜವಳಿ ಮಾರುಕಟ್ಟೆಯಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇಲ್ಲಿನ ಹಲವು ಉದ್ಯಮಿಗಳು ವಿಶೇಷ ಅಭಿಯಾನ ಆರಂಭಿಸಿದ್ದು, ಅದರ ಮೂಲಕ ಯುಪಿಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಬಹುದು. ಸೀರೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರಗಳಿವೆ.

ಬಿಜೆಪಿಗಾಗಿ ವಿಶೇಷ ಸೀರೆಗಳನ್ನು ತಯಾರು ಮಾಡಿದ ಸೂರತ್ ಉದ್ಯಮಿಗಳು

author img

By

Published : Jan 18, 2022, 12:06 AM IST

ಸೂರತ್‌ : ಒಂದು ಕಾಲದಲ್ಲಿ ಜಿಎಸ್‌ಟಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸೂರತ್‌ನ ಬಟ್ಟೆ ವ್ಯಾಪಾರಿಗಳು ಈಗ ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಚಾರಕ್ಕಾಗಿ ವಿಶೇಷ ಸೀರೆಗಳನ್ನು ತಯಾರಿಸಿದ್ದಾರೆ.

ಈ ಸೀರೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರವಿದ್ದು, ಲಕ್ಷಗಟ್ಟಲೆ ಸೀರೆಗಳ ಜೊತೆಗೆ ವಿಶೇಷ ಸಂದೇಶಗಳಿರುವ ಕ್ಯಾಟಲಾಗ್‌ಗಳನ್ನು ಯುಪಿಗೆ ಇಲ್ಲಿಂದ ಕಳುಹಿಸಲಾಗುತ್ತಿದೆ.

ಬಿಜೆಪಿಗಾಗಿ ವಿಶೇಷ ಸೀರೆಗಳನ್ನು ತಯಾರು ಮಾಡಿದ ಸೂರತ್ ಉದ್ಯಮಿಗಳು
ಬಿಜೆಪಿಗಾಗಿ ವಿಶೇಷ ಸೀರೆಗಳನ್ನು ತಯಾರು ಮಾಡಿದ ಸೂರತ್ ಉದ್ಯಮಿಗಳು

ಸೂರತ್‌ನಲ್ಲಿ ಯುಪಿ ಚುನಾವಣಾ ಬಿಸಿ:

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ರಾಮಮಂದಿರ ಪ್ರಮುಖ ವಿಷಯವಾಗಲಿದೆ. ಸೂರತ್‌ನ ಜವಳಿ ಮಾರುಕಟ್ಟೆಯಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇಲ್ಲಿನ ಹಲವು ಉದ್ಯಮಿಗಳು ವಿಶೇಷ ಅಭಿಯಾನ ಆರಂಭಿಸಿದ್ದು, ಅದರ ಮೂಲಕ ಯುಪಿಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಬಹುದು. ಸೀರೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರವಿದ್ದು, ಸೀರೆಯಲ್ಲಿ ಕೇಸರಿ ಬಣ್ಣ ಮತ್ತು ಕಮಲದ ವಿಶೇಷ ಘೋಷಣೆಯನ್ನೂ ಬಟ್ಟೆ ವ್ಯಾಪಾರಿಗಳು ಬರೆದಿದ್ದಾರೆ.

ಸೀರೆಗಳು ಮಾತ್ರವಲ್ಲದೆ ಸೀರೆಗಳ ಸೆರಗಲ್ಲೂ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಯೋಗಿ ಆದಿತ್ಯನಾಥ್ ಅವರ ಚಿತ್ರವಿದೆ. ಯುಪಿ ಚುನಾವಣಾ ಪ್ರಚಾರಕ್ಕೆ ಈ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಯುಪಿಯಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಸೂರತ್‌ನ ಜವಳಿ ವ್ಯಾಪಾರಿ ಯುಪಿಯಲ್ಲಿ ಬಿಜೆಪಿ ಗೆಲುವಿಗಾಗಿ ವಿಶೇಷ ಅಭಿಯಾನವನ್ನು ಆರಂಭಿಸಿದ್ದಾರೆ.

ಸೂರತ್‌ನಿಂದ ಯುಪಿಗೆ ಸೀರೆ ಕಳುಹಿಸಲಾಗುವುದು:

ಜವಳಿ ವ್ಯಾಪಾರಿ ಲಲಿತ್ ಶರ್ಮಾ ಈ ಸಂಬಂಧ ಮಾತನಾಡಿ, ಈ ಡಿಜಿಟಲ್ ಸೀರೆಗಳನ್ನು ಯುಪಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ಈ ಸೀರೆಗಳನ್ನು ಸಮಾಜದ ಹಿಂದುಳಿದ ಮತ್ತು ತುಳಿತಕ್ಕೊಳಗಾದ ಮಹಿಳೆಯರಿಗೆ ನೀಡಲಾಗುವುದು. ನಾವು ರಾಮಮಂದಿರಕ್ಕಾಗಿ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ. ಇದುಇವರ ಅಧಿಕಾರಾವಧಿಯಲ್ಲಿ ಪ್ರಾರಂಭವಾಯಿತು. ಸಿಎಂ ಯೋಗಿ ಆದಿತ್ಯನಾಥ್ ಅವರ ಅಧಿಕಾರಾವಧಿಯಲ್ಲಿ ದೇವಾಲಯ ಸಿದ್ಧವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ರಾಮನ ಬಗ್ಗೆ ಮಾತನಾಡಿದವರೇ ಯುಪಿಯಲ್ಲಿ ಅಧಿಕಾರಕ್ಕೆ ಬರುವಂತೆ ಸೂರತ್‌ನಿಂದ ಯುಪಿಗೆ ಈ ವಿಶೇಷ ಸೀರೆಗಳನ್ನು ಕಳುಹಿಸಲಾಗುವುದು. ನಮ್ಮ ಪ್ರಚಾರದಲ್ಲಿ ಯುಪಿ ವ್ಯಾಪಾರಿಗಳು ಕೂಡ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಐದು ಲಕ್ಷ ಸೀರೆಗಳು:

ಮತ್ತೊಬ್ಬ ಸೀರೆ ವ್ಯಾಪಾರಿ ರಾಜೀವ್‌ಭಾಯ್ ಮಾತನಾಡಿ, ಯುಪಿಯಿಂದ ಹೆಚ್ಚಿನ ಸಂಖ್ಯೆಯ ವ್ಯಾಪಾರಿಗಳು ನಮ್ಮೊಂದಿಗೆ ಸೇರಬೇಕೆಂದು ನಾವು ಬಯಸುತ್ತೇವೆ. ನಾವು ಈ ಸೀರೆಗಳನ್ನು ಅಲ್ಲಿಗೆ ಕಳುಹಿಸುತ್ತೇವೆ. ವಿಶೇಷ ಕ್ಯಾಟಲಾಗ್ ಅನ್ನು ಸಹ ಸಿದ್ಧಪಡಿಸಲಾಗಿದೆ. ನಾವು ಚುನಾವಣೆಯ ಉದ್ದೇಶದಿಂದ ಅಲ್ಲಿಗೆ 5 ಲಕ್ಷ ಸೀರೆಗಳನ್ನು ಕಳುಹಿಸಿಕೊಡುತ್ತೇವೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.