ETV Bharat / bharat

ವಿವಾಹ ವಿಚ್ಚೇದನ: ಸುಪ್ರಿಂ ಕೋರ್ಟ್‌ ಮಹತ್ವದ ಆದೇಶ - verdict of Divorce

ವಿವಾಹ ವಿಚ್ಚೇದನ ಕುರಿತಾಗಿ ಸುಪ್ರೀಂ ಕೋರ್ಟ್​ ಐವರು ನ್ಯಾಯಮೂರ್ತಿಗಳಿದ್ದ ಸಾಂವಿಧಾನಿಕ ಪೀಠ ಮಹತ್ವದ ಆದೇಶ ನೀಡಿದೆ.

ಸುಪ್ರೀಂಕೋರ್ಟ್​
ಸುಪ್ರೀಂಕೋರ್ಟ್​
author img

By

Published : May 1, 2023, 1:18 PM IST

Updated : May 1, 2023, 1:29 PM IST

ನವದೆಹಲಿ: ವಿವಾಹ ವಿಚ್ಚೇದನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ ಇಂದು ಮಹತ್ವದ ಆದೇಶ ಪ್ರಕಟಿಸಿತು. ವಿಚ್ಚೇದನ ಪಡೆಯಲು ದಂಪತಿಗೆ ಪರಸ್ಪರ ಒಪ್ಪಿಗೆ ಇದ್ದಲ್ಲಿ 6 ತಿಂಗಳು ಕಾಯಬೇಕೆಂದಿಲ್ಲ. ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ಇಲ್ಲದೆಯೇ ಸುಪ್ರೀಂ ಕೋರ್ಟ್​ ತನ್ನ ಪರಮಾಧಿಕಾರ ಬಳಸಿ ವಿಚ್ಚೇದನವನ್ನು ಊರ್ಜಿತಗೊಳಿಸಬಹುದು ಎಂದು ತೀರ್ಪು ನೀಡಿದೆ.

ದಂಪತಿ ನಡುವಿನ "ವೈವಾಹಿಕ ಜೀವನವನ್ನು ಮತ್ತೆ ಸರಿಪಡಿಸಲಾಗದ ಸನ್ನಿವೇಶವಿದ್ದರೆ" ಸುಪ್ರೀಂ ಕೋರ್ಟ್​ ಆ ಜೋಡಿಗೆ ವಿಚ್ಚೇದನ ನೀಡಬಹುದು. ಸಂವಿಧಾನದ 143 ನೇ ವಿಧಿಯ ಅಡಿಯಲ್ಲಿ ನೀಡಲಾದ ವಿಶೇಷಾಧಿಕಾರದ ಮೂಲಕ ವಿವಾಹವನ್ನು ಅನೂರ್ಜಿತಗೊಳಿಸುವ ಅವಕಾಶ ಸುಪ್ರೀಂ ಕೋರ್ಟ್‌ಗೆ ಇದೆ. ಇದರಡಿ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನ ಕೋರಿದ ದಂಪತಿಗೆ 6 ತಿಂಗಳ ಒಳಗೇ ಕೆಲವು ಷರತ್ತುಗಳಿಗೆ ಒಳಪಟ್ಟು ವಿಚ್ಚೇದನ ನೀಡಬಹುದು ಎಂದು ಐವರು ಸದಸ್ಯರ ಸಾಂವಿಧಾನಿಕ ಪೀಠ ಆದೇಶಿಸಿತು.

ದಂಪತ ಮಧ್ಯೆ ವಿವಾಹ ವಿಘಟನೆಯನ್ನು ಮರು ಜೋಡಿಸಲಾಗದು ಎಂದಾದಲ್ಲಿ ಸುಪ್ರೀಂ ಕೋರ್ಟ್ 143 ನೇ ವಿಧಿಯಡಿ ನೀಡಲಾದ ವಿವೇಚನಾ ಅಧಿಕಾರವನ್ನು ಬಳಸಿ ವಿವಾಹಗಳನ್ನು ವಿಸರ್ಜಿಸಬಹುದು ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾ.ಸಂಜೀವ್ ಖನ್ನಾ, ನ್ಯಾ.ಎ.ಎಸ್.ಓಕಾ, ನ್ಯಾ.ವಿಕ್ರಮ್ ನಾಥ್ ಮತ್ತು ನ್ಯಾ.ಜೆ.ಕೆ.ಮಹೇಶ್ವರಿ ಅವರಿದ್ದ ಪೀಠ ಸೋಮವಾರ ಆದೇಶ ನೀಡಿದೆ.

ಇದರ ಜೊತೆಗೆ, ವಿಚ್ಚೇದನದ ಬಳಿಕ ಜೀವನ ನಿರ್ವಹಣೆ, ಜೀವನಾಂಶ ಮತ್ತು ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಹೇಗೆ ಸಮತೋಲನ ಸಾಧಿಸಬೇಕು ಎಂಬುದನ್ನೂ ಪೀಠವು ಆದೇಶದಲ್ಲಿ ವಿವರಿಸಿದೆ.

ಪ್ರಕರಣವೇನು?: ಹಿಂದು ವಿವಾಹ ಕಾಯಿದೆಯ ಪ್ರಕಾರ, ವಿವಾಹ ವಿಚ್ಚೇದನ ಪಡೆಯುವ ದಂಪತಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು. ಬಳಿಕ 6 ತಿಂಗಳು ಕಡ್ಡಾಯ ಕಾಯುವಿಕೆ ಬಳಿಕ ವಿಚ್ಚೇದನ ಪಡೆದುಕೊಳ್ಳಬೇಕು. ಇದಕ್ಕೂ ಮೊದಲು ಪಡೆಯುವ ಯಾವುದೇ ವಿಚ್ಚೇದನಕ್ಕೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂಬುದು ಕಾನೂನಿನಲ್ಲಿದೆ.

ಸುಪ್ರೀಂ ಕೋರ್ಟ್​ನ ವಿಭಾಗೀಯ ಪೀಠ ಈ ಕುರಿತು ವಿಚಾರಣೆ ನಡೆಸಿ, "ವಿಚ್ಚೇದನಕ್ಕೆ 6 ತಿಂಗಳ ಕಾಯುವಿಕೆ ಕಡ್ಡಾಯವಲ್ಲ" ಎಂದು ಆದೇಶ ನೀಡಿತ್ತು. ಅಲ್ಲದೇ, ಕೌಟುಂಬಿಕ ನ್ಯಾಯಾಲಯದ ಮಧ್ಯಸ್ತಿಕೆಯ ಹೊರತಾಗಿಯೂ ಸುಪ್ರೀಂಕೋರ್ಟ್​ ವಿಚ್ಚೇದನ ನೀಡಬಹುದು ಎಂದು ಹೇಳಿತ್ತು. ಹೆಚ್ಚಿನ ವಿಚಾರಣೆಗಾಗಿ ಪ್ರಕರಣವನ್ನು 2016 ರ ಜೂನ್ 29 ರಂದು ಐವರು ನ್ಯಾಯಾಧೀಶರ ಪೀಠಕ್ಕೆ ವರ್ಗಾವಣೆ ಮಾಡಿತ್ತು.

ವಿಚ್ಚೇದನ ಪ್ರಕ್ರಿಯೆ ಹೇಗಿದೆ?: ಹಿಂದೂ ವಿವಾಹ ಕಾಯಿದೆ 1955 ರ ಸೆಕ್ಷನ್ 13 ಬಿ ಪ್ರಕಾರ ದಂಪತಿ ವಿಚ್ಛೇದನ ಪಡೆಯಲು ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಬೇಕಾಗುತ್ತದೆ. ವಿಚ್ಛೇದನದ ಪ್ರಕರಣಗಳಲ್ಲಿ ದಂಪತಿ ಪರಸ್ಪರ ಒಪ್ಪಿಗೆ ಸೂಚಿಸಿ, ಅರ್ಜಿ ಸಲ್ಲಿಸಿದ ಬಳಿಕ 6 ತಿಂಗಳು ಕಾಯುವ ಅವಧಿ ಕಾನೂನಿನಲ್ಲಿ ಕಡ್ಡಾಯವಾಗಿದೆ.

ನಂತರ ಮತ್ತೆ ಒಂದಾಗುವ ಯಾವುದೇ ಅವಕಾಶಗಳು ಇಲ್ಲವಾದಲ್ಲಿ, ಅಂತಹ ಜೋಡಿಯ ಮದುವೆಯನ್ನು ವಿಸರ್ಜಿಸಲು ಪರಿಗಣಿಸಬಹುದು. 6 ತಿಂಗಳ ಅವಧಿಗೆ ಮುಂಚಿತವಾಗಿ ವಿಚ್ಛೇದನವನ್ನು ಬಯಸುವ ದಂಪತಿಯ ಮದುವೆಯನ್ನು ಯಾವುದೇ ಕಾರಣಕ್ಕೂ ಅನೂರ್ಜಿತ ಮಾಡಲು ಬರುವುದಿಲ್ಲ. ಅದಕ್ಕೆ ಕಾನೂನು ಮಾನ್ಯತೆಯೂ ಇರುವುದಿಲ್ಲ.

ಇದನ್ನೂ ಓದಿ: ಪಾಕಿಸ್ತಾನಿ ಉಗ್ರರ ಜೊತೆ ನಂಟು: ಭಾರತದಲ್ಲಿ 14 ವಿದೇಶಿ ಆ್ಯಪ್​ಗಳು ಬ್ಯಾನ್​

Last Updated : May 1, 2023, 1:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.