ನವದೆಹಲಿ : ಸ್ವತಂತ್ರ ಭಾರತದ ಮೊದಲ ಜಾತಿಗಣತಿ ವರದಿಯನ್ನು ಬಿಹಾರ ಸರ್ಕಾರ ಪ್ರಕಟಿಸಿದ್ದು ವಿವಾದಕ್ಕೆ ಕಾರಣವಾಗಿದೆ. ದೇಶವನ್ನು ಜಾತಿಯ ಆಧಾರದ ಇಬ್ಭಾಗ ಮಾಡಲು ಪ್ರತಿಪಕ್ಷಗಳು ಪ್ರಯತ್ನಿಸುತ್ತಿವೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ. ಕೆಲವು ಸಂಘಟನೆಗಳು ದೇಶದಲ್ಲಿ ಜಾತಿಗಣತಿ ನಡೆಸಬಹುದೇ, ಈ ಪ್ರಕ್ರಿಯೆ ಸಿಂಧುವೇ ಎಂದು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿವೆ. ಈ ಕುರಿತ ಅರ್ಜಿಯನ್ನು ಕೋರ್ಟ್ ಅಕ್ಟೋಬರ್ 6 ರಂದು ವಿಚಾರಣೆ ನಡೆಸಲಿದೆ.
ಏಕ್ ಸೋಚ್ ಏಕ್ ಪ್ರಯಾಸ್ ಮತ್ತು ಯೂತ್ ಫಾರ್ ಈಕ್ವಾಲಿಟಿ ಸೇರಿ ಮುಂತಾದ ಸಂಘಟನೆಗಳು ಜಾತಿ ಆಧಾರಿತ ಸಮೀಕ್ಷೆಯ ಕಾನೂನುಬದ್ಧತೆ ಮತ್ತು ರಾಜ್ಯಗಳ ಅಧಿಕಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. 1948 ರ ಜನಗಣತಿ ಕಾಯ್ದೆಯು ದೇಶದಲ್ಲಿ ಕೇಂದ್ರ ಸರ್ಕಾರವೇ ಜನಗಣತಿ ನಡೆಸಬೇಕು ಎಂಬ ವಿಶೇಷಾಧಿಕಾರ ನೀಡಿದೆ. ಹಾಗಿದ್ದಾಗ ರಾಜ್ಯ ಸರ್ಕಾರಗಳು ಜಾತಿಗಣತಿ ನಡೆಸುವ ಹಕ್ಕು ಹೊಂದಿವೆಯೇ ಎಂದು ಪ್ರಶ್ನಿಸಿವೆ.
-
Caste Census in Bihar | Supreme Court says it will take up the matter on October 6. Petitioner's lawyer mentions before Supreme Court that the Bihar Government has published caste survey data. pic.twitter.com/8MJysRmKSP
— ANI (@ANI) October 3, 2023 " class="align-text-top noRightClick twitterSection" data="
">Caste Census in Bihar | Supreme Court says it will take up the matter on October 6. Petitioner's lawyer mentions before Supreme Court that the Bihar Government has published caste survey data. pic.twitter.com/8MJysRmKSP
— ANI (@ANI) October 3, 2023Caste Census in Bihar | Supreme Court says it will take up the matter on October 6. Petitioner's lawyer mentions before Supreme Court that the Bihar Government has published caste survey data. pic.twitter.com/8MJysRmKSP
— ANI (@ANI) October 3, 2023
ಜಾತಿ ಸಮೀಕ್ಷೆ ವಿರುದ್ಧದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್.ವಿ.ಎನ್.ಭಟ್ಟಿ ಅವರಿದ್ದ ಪೀಠದ ಮುಂದೆ ತರಲಾಯಿತು. ಈ ಕುರಿತ ವಿಚಾರಣೆಯನ್ನು ಅಕ್ಟೋಬರ್ 6 ರಂದು ನಡೆಸಲಾಗುವುದು ಎಂದು ಹೇಳಿತು.
ಸಮೀಕ್ಷೆ ವಿರುದ್ಧ ಕೇಂದ್ರ ಸರ್ಕಾರದ ಅಫಿಡವಿಟ್: ಬಿಹಾರ ಸಿಎಂ ನಿತೀಶ್ ಕುಮಾರ್ ಸರ್ಕಾರ ಜಾತಿಗಣತಿಯನ್ನು ನಡೆಸಿ ವರದಿ ಪ್ರಕಟಿಸಿದ್ದರ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಈ ಮೂಲಕ ಕಾನೂನು ಹೋರಾಟಕ್ಕೆ ಮುಂದಾಗಿದೆ. ಸಾಂವಿಧಾನಿಕ ನಿಬಂಧನೆಗಳು ಮತ್ತು ಕಾನೂನುಗಳ ಪ್ರಕಾರ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು ಮತ್ತು ಇತರ ಹಿಂದುಳಿದ ವರ್ಗಗಳನ್ನು ಮೇಲೆತ್ತಲು ಸರ್ಕಾರ ಬದ್ಧ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಪಾಟ್ನಾ ಹೈಕೋರ್ಟ್ ಆದೇಶದ ವಿರುದ್ಧವೂ ತಕರಾರು: ಈ ಮೊದಲು ಜಾತಿ ಆಧರಿತ ಸಮೀಕ್ಷೆ ನಡೆಸಲು ಬಿಹಾರ ಸರ್ಕಾರ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪಾಟ್ನಾ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ನಡೆಸಿದ್ದ ಕೋರ್ಟ್, ರಾಜ್ಯಗಳ ಅಧಿಕಾರವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಗಳನ್ನು ವಜಾಗೊಳಿಸಿತ್ತು. ಇದೀಗ ಹೈಕೋರ್ಟ್ ಆದೇಶದ ವಿರುದ್ಧವೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ.
ಜಾತಿ ಗಣತಿಯ ಅಂಕಿಅಂಶಗಳು: ಬಿಹಾರದಲ್ಲಿ ಅತ್ಯಂತ ಹಿಂದುಳಿದ ವರ್ಗವು ಶೇಕಡಾ 36.01 ರಷ್ಟಿದೆ. ಹಿಂದುಳಿದ ಜಾತಿಗಳು ಶೇಕಡಾ 27.12, ಸಾಮಾನ್ಯ ಜಾತಿಗಳು ಶೇಕಡಾ 15.52, ಪರಿಶಿಷ್ಟ ಜಾತಿಗಳು ಶೇಕಡಾ 19.65, ಪರಿಶಿಷ್ಟ ಪಂಗಡಗಳು ಶೇಕಡಾ 1.68 ಇದ್ದಾರೆ. ಧರ್ಮಾವಾರು ಪ್ರಕಾರ, ಹಿಂದೂಗಳು 81.99 ಪ್ರತಿಶತ ಇದ್ದರೆ, ಮುಸ್ಲಿಮರು 17.7, ಕ್ರಿಶ್ಚಿಯನ್ನರು 0.05, ಸಿಖ್ಖರು 0.01, ಬೌದ್ಧರು 0.08, ಇತರ ಧರ್ಮಗಳು 0.12 ರಷ್ಟಿದ್ದಾರೆ.
ಒಬಿಸಿ ಗುಂಪಿನಲ್ಲಿ ಬರುವ ಯಾದವರು ಅತಿ ದೊಡ್ಡ ಸಂಖ್ಯೆ ಅಂದರೆ, ರಾಜ್ಯದ ಜನಸಂಖ್ಯೆಯ ಶೇಕಡಾ 14.27 ರಷ್ಟಿದ್ದಾರೆ. ಕುಶ್ವಾಹ ಮತ್ತು ಕುರ್ಮಿ ಸಮುದಾಯಗಳು ಕ್ರಮವಾಗಿ ಶೇಕಡಾ 4.27 ಮತ್ತು ಶೇಕಡಾ 2.87 ರಷ್ಟಿದ್ದಾರೆ ಎಂದು ಜಾತಿ ಸಮೀಕ್ಷೆ ಹೇಳಿದೆ. ಭೂಮಿಹಾರ್‌ಗಳು ಶೇಕಡಾ 2.86, ಬ್ರಾಹ್ಮಣರು ಶೇಕಡಾ 3.66, ಕುರ್ಮಿಗಳು ಶೇಕಡಾ 2.87 ಮತ್ತು ಮುಸಾಹರ್‌ಗಳು ಶೇಕಡಾ 3 ರಷ್ಟಿದ್ದಾರೆ. ಬಿಹಾರದ ಒಟ್ಟು ಜನಸಂಖ್ಯೆ 13 ಕೋಟಿಗೂ ಹೆಚ್ಚಿದೆ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿವೇಕ್ ಕುಮಾರ್ ಸಿಂಗ್ ಮಾಹಿತಿ ನೀಡಿದರು.
ಇದನ್ನೂ ಓದಿ: ವಿರೋಧದ ನಡುವೆ ಬಿಹಾರ ಜಾತಿ ಗಣತಿ ಸಮೀಕ್ಷೆ ಪ್ರಕಟ: ರಾಜ್ಯದಲ್ಲಿ ಶೇ.63 ರಷ್ಟು ಇಬಿಸಿ, ಒಬಿಸಿ ಜನಸಂಖ್ಯೆ