ETV Bharat / state

ರೈತರಿಗೆ ವಕ್ಫ್​ ನೋಟಿಸ್​ ವಿವಾದ ಕಾಂಗ್ರೆಸ್​ಗೆ ಹಿನ್ನಡೆಯಾಗಲಿದೆ: ಭರತ್​ ಬೊಮ್ಮಾಯಿ - BHARAT BOMMAI

ತಂದೆಯವರು ಶಿಗ್ಗಾವಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕ್ಷೇತ್ರದಲ್ಲಿ ನನ್ನ ಗೆಲುವು ನಿಶ್ಚಿತ ಎಂದು ಎನ್​ಡಿಎ ಅಭ್ಯರ್ಥಿ ಭರತ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭರತ್​ ಬೊಮ್ಮಾಯಿ
ಭರತ್​ ಬೊಮ್ಮಾಯಿ (ETV Bharat)
author img

By ETV Bharat Karnataka Team

Published : Nov 3, 2024, 6:19 PM IST

Updated : Nov 3, 2024, 7:08 PM IST

ಹಾವೇರಿ: "ರಾಜ್ಯದ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲಿ ಎನ್​ಡಿಎ ಜಯಭೇರಿ ಬಾರಿಸಲಿದೆ" ಎಂದು ಶಿಗ್ಗಾವಿ ವಿಧಾನಸಭೆ ಕ್ಷೇತ್ರದ ಎನ್​ಡಿಎ ಅಭ್ಯರ್ಥಿ ಭರತ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಸವಣೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, "ರೈತರಿಗೆ ವಕ್ಫ್​ ನೋಟಿಸ್​ ವಿವಾದ ಕಾಂಗ್ರೆಸ್​ಗೆ ಹಿನ್ನಡೆಯಾಗಲಿದೆ" ಎಂದು ಹೇಳಿದರು.

"ನಾವು ಟಿ20, ಒನ್ ಡೇ ಆಡಲ್ಲ. ಟೆಸ್ಟ್ ಮ್ಯಾಚ್ ಆಡುತ್ತೇವೆ. ನಮ್ಮದೇನಿದ್ದರೂ ಲಾಂಗ್ ಇನ್ನಿಂಗ್ಸ್, ನಾನು ಪ್ರೊಪೆಷನಲ್ ಬ್ಯಾಟ್ಸಮನ್, ಸೆಂಚುರಿ ಹೊಡೆದೇ ಹೊಡೆಯುತ್ತೇನೆ. ಪ್ರಚಾರಕ್ಕೆ ಹೋದಾಗ ಯುವಕರಿಂದ ಉತ್ತಮ ಬೆಂಬಲ ಸಿಗುತ್ತಿದೆ. ಯುವಕರೆಲ್ಲರೂ ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕಾಂಗ್ರೆಸ್ ನವರು ಈಗ ಪ್ರಚಾರಕ್ಕೆ ಓಡಾಡುತ್ತಿರುವುದು ನಮ್ಮ ತಂದೆ ಮಾಡಿಸಿರುವ ರಸ್ತೆಗಳಲ್ಲಿ. ತಂದೆಯವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನನ್ನ ಗೆಲುವು ನಿಶ್ಚಿತ" ಎಂದರು.

ಇದನ್ನೂ ಓದಿ: ಸಿಎಂಗೆ ರೈತರ ಬಗ್ಗೆ ಕಾಳಜಿ ಇದ್ರೆ ವಕ್ಫ್​ ​ಗೆಜೆಟ್ ನೋಟಿಫಿಕೇಷನ್ ರದ್ದುಪಡಿಸಲಿ: ಬೊಮ್ಮಾಯಿ

Last Updated : Nov 3, 2024, 7:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.