ETV Bharat / bharat

ಆಂಧ್ರ ಸರ್ಕಾರದ ನಿರ್ಣಯಕ್ಕೆ ಸುಪ್ರೀಂ ಅಚ್ಚರಿ: ಅರ್ಜಿ ದೆಹಲಿ ಹೈಕೋರ್ಟ್​ಗೆ ವರ್ಗಾವಣೆಗೆ ಸೂಕ್ತ ಎಂದ ನ್ಯಾಯಾಲಯ

ಎಪಿ ಸರ್ಕಾರವು 'ಸಾಕ್ಷಿ' ಪತ್ರಿಕೆಯನ್ನು ಪ್ರಚಾರ ಮಾಡುತ್ತಿದೆ ಎಂಬ ಆರೋಪ ಪ್ರಕರಣದಲ್ಲಿ ಆಂಧ್ರ ಹೈಕೋರ್ಟ್ ಅನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತು.

supreme-court-slams-andhra-hc-on-plea-alleging-ap-govt-promotes-sakshi-newspaper
ಎಪಿ ಸರ್ಕಾರವು 'ಸಾಕ್ಷಿ' ಪತ್ರಿಕೆಯನ್ನು ಪ್ರಚಾರ ಮಾಡುತ್ತಿದೆ: ಆಂಧ್ರ ಹೈಕೋರ್ಟ್​ಗೆ ಸುಪ್ರೀಂ ಕೋರ್ಟ್ ತರಾಟೆ
author img

By

Published : Apr 10, 2023, 11:10 PM IST

Updated : Apr 11, 2023, 9:06 AM IST

ಹೈದರಾಬಾದ್​ : ಆಂಧ್ರ ಪ್ರದೇಶ ಸರ್ಕಾರವು ಸೆಪ್ಟೆಂಬರ್ 2020ರಲ್ಲಿ ಸರ್ಕಾರಿ ಯೋಜನೆಗಳನ್ನು ಪ್ರಚಾರ ಮಾಡಲು ಮತ್ತು ಸಾರ್ವಜನಿಕರಿಗೆ ಸಹಾಯ ಮಾಡಲು ಸ್ವಯಂಸೇವಕರನ್ನು ನೇಮಿಸಿತ್ತು. ಇಲ್ಲಿನ ಪ್ರತಿ 50 ಮನೆಗಳಿಗೆ ಒಬ್ಬರಂತೆ ಸ್ವಯಂಸೇವಕನಂತೆ ಒಟ್ಟು 2.56 ಲಕ್ಷ ಸ್ವಯಂಸೇವಕರನ್ನು ನೇಮಿಸಿತ್ತು.

ಜೂನ್ 2022ರಲ್ಲಿ ಆಂಧ್ರಪ್ರದೇಶ ಸರ್ಕಾರವು ರೂ. 5000 ಗೌರವಧನದ ಹೊರತಾಗಿ, 2.56 ಲಕ್ಷ ಸ್ವಯಂಸೇವಕರಿಗೆ ವ್ಯಾಪಕವಾಗಿ ಪ್ರಸಾರವಾಗುವ ಪತ್ರಿಕೆಯನ್ನು ಖರೀದಿಸಲು ತಿಂಗಳಿಗೆ ತಲಾ ರೂ.200 ಪಾವತಿಸಲು ಆದೇಶಿಸಿತ್ತು. ಡಿಸೆಂಬರ್ 2022ರಂದು 1.45 ಲಕ್ಷ ಗ್ರಾಮ ಕಾರ್ಯನಿರ್ವಹಣಾಧಿಕಾರಿಗಳಿಗೆ ತಲಾ 200 ರೂ ಆದೇಶವನ್ನು ಹೊರಡಿಸಲಾಗಿತ್ತು.

ಫೆಬ್ರವರಿ 2023 ರಲ್ಲಿ ಈ ಆಂಧ್ರಪ್ರದೇಶ ಸರ್ಕಾರದ ಆದೇಶವನ್ನು ಈನಾಡು ಆಂಧ್ರಪ್ರದೇಶದ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತು. ಇದರಲ್ಲಿ ಸಾಕ್ಷಿ ಹೆಸರನ್ನು ನಿರ್ದಿಷ್ಟವಾಗಿ ಉಲ್ಲೇಖಿಸದಿದ್ದರೂ, ಮುಖ್ಯಮಂತ್ರಿಗಳು ಸೇರಿ, ಇತರ ಸಚಿವರು ಮತ್ತು ಪಕ್ಷದ ಕಾರ್ಯಕರ್ತರು ಈನಾಡು ಮಾಧ್ಯಮವನ್ನು ಹಳದಿ ಮಾಧ್ಯಮ ಎಂದು ಕರೆದರು. ಈನಾಡನ್ನು ಓದಬೇಡಿ ಎಂದು ಸಾರ್ವಜನಿಕರಿಗೆ ಕರೆ ನೀಡಿದರು.

ಈ ಬಗ್ಗೆ ವಿಚಾರಣೆ ನಡೆಸಿದ ಆಂಧ್ರಪ್ರದೇಶ ಹೈಕೋರ್ಟ್‌ನ ವಿಭಾಗೀಯ ಪೀಠವು ಮಧ್ಯಂತರ ಆದೇಶವನ್ನು ನೀಡಲು ನಿರಾಕರಿಸಿತು. 2020ರ ಮತ್ತೊಂದು ಪಿಐಎಲ್​​ ಜೊತೆಗೆ ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಈ ಸಂಬಂಧ ಈನಾಡು ವಿಭಾಗೀಯ ಪೀಠವು ಸುಪ್ರೀಂಕೋರ್ಟ್‌ಗೆ ವಿಶೇಷ ಅರ್ಜಿಯನ್ನು ಸಲ್ಲಿಸಿತ್ತು.

ಮಾರ್ಚ್ 29 ರಂದು ಸುಪ್ರೀಂಕೋರ್ಟ್ ಪ್ರತಿವಾದಿಗಳಿಗೆ ನೋಟಿಸ್ ನೀಡಿತ್ತು. ಈ ಸಂಬಂಧ ಇಂದು ಪ್ರತಿವಾದಿಗಳು ಸುಪ್ರೀಂಕೋರ್ಟ್‌ಗೆ ಹಾಜರಾಗಿದ್ದರು. ಸುಪ್ರೀಂಕೋರ್ಟ್​, ಈ ಸ್ವಯಂಸೇವಕರು ಯಾರು, ಅವರನ್ನು ಹೇಗೆ ನೇಮಿಸಲಾಗಿದೆ ಎಂದು ಪ್ರತಿವಾದಿಗಳಿಗೆ ಕೇಳಿತು. ಇದಕ್ಕೆ ಅರ್ಜಿದಾರರ ಪರ ವಕೀಲರಾದ ಹಿರಿಯ ವಕೀಲ ಮುಕುಲ್ ರೋಹಟಗಿ ಮತ್ತು ದೇವದತ್ ಕಾಮತ್ ಅವರು ರಾಜಕೀಯ ಕಾರ್ಯಸೂಚಿಗಾಗಿ ಕೆಲಸ ಮಾಡುವ ಪಕ್ಷದ ಕಾರ್ಯಕರ್ತರು ಎಂದು ಹೇಳಿದರು.

ಈ ಸಂಬಂಧ ಹೈಕೋರ್ಟ್‌ನಲ್ಲಿ ಈ ವಿಷಯವನ್ನು ಹೇಗೆ ವ್ಯವಹರಿಸಲಾಗಿದೆ ಎಂಬುದು ತುಂಬಾ ಗೊಂದಲದ ಸಂಗತಿಯಾಗಿದೆ. ಆದ್ದರಿಂದ, ರಿಟ್ ಅರ್ಜಿಯನ್ನು ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ವರ್ಗಾಯಿಸಬಹುದು. ಅಲ್ಲಿ ಅವರು ಈ ವಿಷಯವನ್ನು ಅಂತಿಮವಾಗಿ ಪರಿಗಣಿಸುತ್ತಾರೆ ಎಂದು ನ್ಯಾಯಪೀಠ ಹೇಳಿತು.

ರಿಟ್ ಅರ್ಜಿಯನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸುವುದನ್ನು ಪ್ರತಿವಾದಿಗಳ ಪರವಾಗಿ ಹಾಜರಾದ ಸಿ.ಎಸ್. ವೈದ್ಯನಾಥನ್ ಆಕ್ಷೇಪಿಸಿದರು. ಈ ತಿಂಗಳ 21ರಂದು ಈ ಪ್ರಕರಣವು ವಿಚಾರಣೆಗೆ ಬರಲಿದ್ದು, ಈ ಹಂತದಲ್ಲಿ ಪ್ರಕರಣವನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸುವುದರಿಂದ ವಿಷಯವನ್ನು ಅನಗತ್ಯವಾಗಿ ವಿಳಂಬಗೊಳಿಸುತ್ತದೆ. ಉಷೋದಯ ಅವರ ರಿಟ್ ಅರ್ಜಿಯನ್ನು ಪಿಐಎಲ್ ಜೊತೆಗೆ ವಿಚಾರಣೆ ನಡೆಸಲಾಗುವುದಿಲ್ಲ ಮತ್ತು ಈ ವಿಷಯವನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸುವುದು ಸೂಕ್ತ ಎಂದು ಮುಕುಲ್ ರೋಹಟಗಿ ಹೇಳಿದ್ದಾರೆ. ಈ ವೇಳೆ, ಸಿ.ಎಸ್ ವೈದ್ಯನಾಥನ್ ತಮ್ಮ ಕಕ್ಷಿದಾರರಿಂದ ಸೂಚನೆಗಳನ್ನು ಪಡೆಯಲು ಶುಕ್ರವಾರದವರೆಗೆ ಸಮಯ ಕೋರಿದರು. ಈ ವಿಷಯವನ್ನು ಸೋಮವಾರ ಅಂದರೆ 17.04.2023ರಂದು ವಿಚಾರಣೆಗೆ ಮುಂದೂಡಲಾಗಿದೆ.

Last Updated : Apr 11, 2023, 9:06 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.