ನವದೆಹಲಿ: ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್‌ಗೆ ಜಾಮೀನು ಮಂಜೂರು ಮಾಡಿದ ಜಾರ್ಖಂಡ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ. ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರರಾವ್ ಮತ್ತು ಬಿ.ಆರ್.ಗವಾಯಿ ಅವರಿದ್ದ ಪೀಠವು ಅರ್ಜಿ ವಿಚಾರಣೆಗೆ ಒಪ್ಪಿಕೊಂಡು, ಈ ಬಗ್ಗೆ ಪ್ರಕ್ರಿಯೆ ನೀಡುವಂತೆ ಲಾಲೂ ಪ್ರಸಾದ್ಗೆ ಸೂಚಿಸಲಾಗಿದೆ.
ಐದು ಮೇವು ಹಗರಣದಲ್ಲಿ ದೋಷಿಯಾಗಿರುವ ಲಾಲೂ ಪ್ರಸಾದ್ಗೆ ಎರಡು ಪ್ರಕರಣಗಳಲ್ಲಿ ಜಾರ್ಖಂಡ್ ಹೈಕೋರ್ಟ್‌ನ ಜಾಮೀನು ಮಂಜೂರು ಮಾಡಿದೆ. ದುಮ್ಕಾ ಖಜಾನೆ ವಿಷಯಕ್ಕೆ ಸಂಬಂಧಿಸಿದಂತೆ 2021ರ ಏಪ್ರಿಲ್ನಲ್ಲಿ ಮತ್ತು ಚೈಬಾಸಾ ಖಜಾನೆ ವಿಷಯಕ್ಕೆ ಸಂಬಂಧಿಸಿದಂತೆ 2020ರ ಅಕ್ಟೋಬರ್ನಲ್ಲಿ ಜಾಮೀನು ನೀಡಲಾಗಿದೆ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಇನ್ನು, ಚೈಬಾಸಾ ಮತ್ತು ದಿಯೋಘರ್ ಖಜಾನೆ ವಿಷಯದಲ್ಲೂ ಲಾಲು ದೋಷಿಯಾಗಿದ್ದು, ಈ ಎರಡೂ ಪ್ರಕರಣಗಳು ಜಾಮೀನು ಮಂಜೂರಾಗಿದೆ. ಐದನೇ ಡೊರಾಂಡಾ ಖಜಾನೆ ವಿಷಯದಲ್ಲೂ ಐದು ವರ್ಷ ಜೈಲು ಶಿಕ್ಷೆ ಮತ್ತು 60 ಲಕ್ಷ ರೂ. ದಂಡವನ್ನು ಆರ್‌ಜೆಡಿ ವರಿಷ್ಠನಿಗೆ ವಿಧಿಸಲಾಗಿದೆ. ಸದ್ಯ ಲಾಲೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಇದನ್ನೂ ಓದಿ: ಗುರುದಾಸ್‌ಪುರ : ವಿಕೋಪಕ್ಕೆ ತಿರುಗಿದ ಭೂ ವಿವಾದ : ಗುಂಡಿಕ್ಕಿ ನಾಲ್ವರ ಹತ್ಯೆ