ಪಾಟ್ನಾ: ಬಿಹಾರದಲ್ಲಿ ಜಾತಿ ಗಣತಿ ನಡೆಸುವ ಸರ್ಕಾರದ ನಿರ್ಧಾರದ ವಿರುದ್ಧದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಇಂದು ಸಮ್ಮತಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರಿದ್ದ ಪೀಠವು ಅರ್ಜಿಯನ್ನು ಏಪ್ರಿಲ್ 28 ರಂದು ವಿಚಾರಣೆಗೆ ಒಳಪಡಿಸಲಿದೆ. ಈ ವಿಷಯ ತುರ್ತು ವಿಚಾರಣೆಗೆ ಅರ್ಹವಾಗಿದೆ. ವಾಸ್ತವವಾಗಿ ಮೇ 15 ರಂದು ಜಾತಿ ಆಧಾರಿತ ಜನಗಣತಿ ಕೊನೆಗೊಳ್ಳಲಿದೆ. ಹಾಗಾಗಿ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಸುಪ್ರೀಂ ಕೋರ್ಟ್ ಏಪ್ರಿಲ್ 28ರಂದು ವಿಚಾರಣೆ ನಡೆಸಲು ಒಪ್ಪಿತು.
ಬಿಹಾರದಲ್ಲಿ 215 ಜಾತಿಗಳ ಕೋಡ್ ನಿರ್ಧರಿಸುವ ಮೂಲಕ ಜಾತಿ ಗಣತಿ ಕಾರ್ಯವನ್ನು ಎರಡು ಹಂತಗಳಲ್ಲಿ ಪೂರ್ಣಗೊಳಿಸಬೇಕಿತ್ತು. ಇದು ಏಪ್ರಿಲ್ 15 ರಿಂದ ಪ್ರಾರಂಭವಾಗಿದ್ದು, ಮೇ 15 ರವರೆಗೆ ಇರುತ್ತದೆ. ಇದಕ್ಕೂ ಮೊದಲು ಜನವರಿ 20 ರಂದು ಬಿಹಾರದಲ್ಲಿ ಜಾತಿ ಗಣತಿ ನಡೆಸುವ ಬಿಹಾರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ನಂತರ ನ್ಯಾಯಾಲಯವು ಆ ಅರ್ಜಿಯನ್ನು ತಿರಸ್ಕರಿಸಿತು. ಅದನ್ನು ಅರ್ಹವೆಂದು ಪರಿಗಣಿಸಲಿಲ್ಲ. ಅರ್ಜಿದಾರರು ಬಯಸಿದರೆ ಅವರು ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನೂ ಓದಿ : ಮೀಸಲಾತಿ ವಿಚಾರ ಬಿಜೆಪಿ ಷಡ್ಯಂತ್ರ ಸುಪ್ರೀಂ ಮೂಲಕ ಬಹಿರಂಗವಾಗಿದೆ: ಗೌರವ್ ವಲ್ಲಭ್
ಮೇ 4ರಂದು ಹೈಕೋರ್ಟ್‌ನಲ್ಲೂ ವಿಚಾರಣೆ: ಪಾಟ್ನಾ ಹೈಕೋರ್ಟ್‌ನಲ್ಲೂ ಈ ಕುರಿತು ಅರ್ಜಿ ಸಲ್ಲಿಸಲಾಗಿದೆ. ಮೇ 4ರಂದು ಹೈಕೋರ್ಟ್ ವಿಚಾರಣೆ ನಡೆಸಲಿದೆ. ಈ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ದೂರು ತಿಳಿಸಿದ್ದರು. ನಿಬಂಧನೆಗಳ ಅಡಿಯಲ್ಲಿ, ಕೇಂದ್ರ ಸರ್ಕಾರ ಮಾತ್ರ ಅಂತಹ ಸಮೀಕ್ಷೆಯನ್ನು ನಡೆಸಬಹುದು. ಈ ಸಮೀಕ್ಷೆಗೆ ರಾಜ್ಯ ಸರ್ಕಾರ 500 ಕೋಟಿ ರೂಪಾಯಿ ಬಿಡುಗಡೆ ಮಾಡಿರುವುದು ಗಮನಾರ್ಹ. ಅಖಿಲೇಶ್ ಕುಮಾರ್ ಅವರು ಪಾಟ್ನಾ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಕೆ.ವಿ.ಚಂದ್ರನ್ ಅವರ ವಿಭಾಗೀಯ ಪೀಠವು ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ : ಕಾಂಗ್ರೆಸ್ಗೆ ತಲೆನೋವಾಗಿದ್ದ ರಾಬರ್ಟ್ ವಾದ್ರಾ ಪ್ರಕರಣ: ಹರಿಯಾಣ ಬಿಜೆಪಿ ಸರ್ಕಾರದಿಂದ ಕ್ಲೀನ್ ಚಿಟ್!