ಚೆನ್ನೈ: ತಮಿಳು ಚಿತ್ರರಂಗದ ನಟ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಯೋಗೋದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಏರ್ಪಡಿಸಿದ್ದ ಕ್ರಿಯಾ ಯೋಗದ ಮೂಲಕ ಯಶಸ್ವಿ ಜೀವನ ಎಂಬ ಕಾರ್ಯಕ್ರಮದಲ್ಲಿ ಕ್ರಿಯಾ ಯೋಗ ಮತ್ತು ಚಕ್ರಧ್ಯಾನದ ಬಗ್ಗೆ ತಮಗಿರುವ ಜ್ಞಾನವನ್ನು ಪ್ರೇಕ್ಷಕರ ಜೊತೆ ಹಂಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಇನ್ನೂ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾವು ನಟಿಸಿರುವ ಹಲವಾರು ಚಿತ್ರಗಳ ಪೈಕಿ ಕೇವಲ ಎರಡು ಸಿನಿಮಾಗಳು ಮಾತ್ರ ತಮಗೆ ತೃಪ್ತಿ ನೀಡಿದ್ದು, ಅವುಗಳೆಂದರೆ ಶ್ರೀ ರಾಘವೇಂದ್ರ ಮತ್ತು ಬಾಬಾ ಎಂದು ಹೇಳಿದರು. (ಈ ಎರಡು ಚಿತ್ರಗಳು ಆದ್ಯಾತ್ಮಿಕಥೆಯಿಂದ ಕೂಡಿರುವಂತಹ ಚಿತ್ರಗಳಾಗಿವೆ) ಇನ್ನು ಈ ಚಿತ್ರಗಳನ್ನು ವೀಕ್ಷಿಸಿದ ಅನೇಕ ಜನರು ಯೋಗ ಮತ್ತು ಧ್ಯಾನ ಮಾಡುವಂತಹ ಅಭ್ಯಾಸಗಳನ್ನು ಬೆಳೆಸಿಕೊಂಡರು ಎಂದು ಇದೇ ವೇಳೆ ಸೂಪರ್ ಸ್ಟಾರ್ ನೆನಪಿಸಿಕೊಂಡರು.
ಇನ್ನೂ ಕೆಲವರು ಹಿಮಾಲಯಕ್ಕೆ ಹೋಗಿ ಅನಿಕೇತ್ ಎಂಬ ಗುಹೆಗೆ ಭೇಟಿ ನೀಡಿ ಧ್ಯಾನ ಮಾಡಿ ಬರುತ್ತಿದ್ದರು. ಸದ್ಯ ಅದನ್ನು ಮುಚ್ಚಲಾಗಿದೆ ಎಂದು ನಟ ರಜಿನಿಕಾಂತ್ ಹೇಳಿದರು.
ಇದನ್ನೂ ಓದಿ: ದೇಶಾದ್ಯಂತ ಸುದ್ದಿಯಾಗುತ್ತಿರುವ ಈ ಅರ್ಪಿತಾ ಮುಖರ್ಜಿ ಯಾರು? ಇವರ ಹಿನ್ನೆಲೆ ಹೀಗಿದೆ