ETV Bharat / bharat

ಅಥಿಯಾ-ರಾಹುಲ್ ಮದುವೆ ವದಂತಿ.. ನಿರ್ಧಾರಕ್ಕೆ ನನ್ನ ಆಶೀರ್ವಾದವಿದೆ ಎಂದ ಸುನೀಲ್ ಶೆಟ್ಟಿ - Suniel Shetty on Athiya Shetty-KL Rahul wedding rumours: For them to decide

ಹಲವಾರು ಕಡೆ ಕ್ರಿಕೆಟಿಗ ಕೆ.ಎಲ್​.ರಾಹುಲ್​ ಹಾಗೂ ನಟಿ ಅಥಿಯಾ ಶೆಟ್ಟಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಇಬ್ಬರೂ ಡೇಟಿಂಗ್​ ಮಾಡುತ್ತಿದ್ದಾರೆ ಎಂದೇ ಅಭಿಮಾನಿಗಳು ನಂಬಿದ್ದಾರೆ. ಇಬ್ಬರು ಮದುವೆ ಗುಸು ಗುಸು ಬಗ್ಗೆ ಸುನೀಲ್​ ಶೆಟ್ಟಿ ಹೇಳಿಕೆಯೊಂದನ್ನು ನೀಡಿದ್ದಾರೆ.

suniel-shetty-on-athiya-shetty-kl-rahul-wedding-rumours-for-them-to-decide-theyve-my-blessings
ಅಥಿಯಾ ಶೆಟ್ಟಿ-ಕೆ.ಎಲ್.ರಾಹುಲ್ ಮದುವೆ ವದಂತಿ: ಅವರ ನಿರ್ಧಾರಕ್ಕೆ ನನ್ನ ಆಶೀರ್ವಾದವಿದೆ ಎಂದ ಸುನೀಲ್ ಶೆಟ್ಟಿ
author img

By

Published : May 12, 2022, 9:45 PM IST

ಮುಂಬೈ: ನಟ ಸುನೀಲ್ ಶೆಟ್ಟಿ ಅವರು ತಮ್ಮ ಮಗಳು ಅಥಿಯಾ ಮತ್ತು ಕ್ರಿಕೆಟಿಗ ಗೆಳೆಯ ಕೆ.ಎಲ್. ರಾಹುಲ್ ಅವರು ಅವರ ಜೀವನದ ಬಗ್ಗೆ ಯಾವ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನನ್ನ ಆಶೀರ್ವಾದವಿದೆ. ಅವರು ಯಾವಾಗ ಮದುವೆಯಾಗುತ್ತಾರೋ ಅದು ಅವರಿಗೆ ಬಿಟ್ಟದ್ದು ಎಂದು ಹೇಳಿದ್ದಾರೆ. ಮೆರಾಕಿ ರಿಯಲ್ ಎಸ್ಟೇಟ್ ಬ್ರಾಂಡ್‌ನ ಸಮಾರಂಭವೊಂದರಲ್ಲಿ ಅವರು ಮಾಧ್ಯಮದೊಂದಿಗೆ ಮಾತನಾಡಿ, ಅಭಿಪ್ರಾಯ ಹಂಚಿಕೊಂಡರು.

ಅಥಿಯಾ ಶೆಟ್ಟಿ ಹಾಗೂ ಕೆಎಲ್​ ರಾಹುಲ್​ ಜೋಡಿ ತಾವು ಡೇಟಿಂಗ್​ ಮಾಡುತ್ತಿರುವುದರ ಬಗ್ಗೆ ಅಧಿಕೃತವಾಗಿ ದೃಢಪಡಿಸದಿದ್ದರೂ, ಈ ವರ್ಷದ ಕೊನೆಯಲ್ಲಿ ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ವರದಿಗಳಿವೆ. ಬುಧವಾರ ಸಂಜೆ ನಡೆದ ಕಾರ್ಯಕ್ರಮವೊಂದರಲ್ಲಿ, ಸುನೀಲ್ ಶೆಟ್ಟಿ ಅವರು ರಾಹುಲ್ ಅವರು ನನಗೆ ಇಷ್ಟ ಎಂದ ಅವರು ಮದುವೆಯ ವದಂತಿಗಳು ನಿಜವೋ ಸುಳ್ಳೋ ಎಂಬುದನ್ನು ಹೇಳಲು ನಿರಾಕರಿಸಿದರು.

ಅವಳು ನನ್ನ ಮಗಳು, ಅವಳು ಯಾವಾಗ ಬೇಕಾದರೂ ಮದುವೆಯಾಗುತ್ತಾಳೆ. ನನ್ನ ಮಗನಿಗೂ ಮದುವೆ ಆಗಬೇಕೆಂದು ನಾನು ಬಯಸುತ್ತೇನೆ. ಎಷ್ಟು ಬೇಗ ಆಗುತ್ತದೆಯೋ ಅಷ್ಟು ಒಳ್ಳೆಯದು! ಆದರೆ ಅದು ಅವರ ಆಯ್ಕೆಯಾಗಿದೆ. ರಾಹುಲ್‌ ಒಳ್ಳೆಯ ಹುಡುಗ, ಇಷ್ಟವಾಗಿದ್ದಾನೆ. ಅವರಿಗೆ ಬೇಕಾದನ್ನು ನಿರ್ಧರಿಸುವ ಸ್ವಾತಂತ್ರ್ಯ ಅವರಿಗಿದೆ. ಏಕೆಂದರೆ ಕಾಲ ಬದಲಾಗಿದೆ. ಅವರ ಜೀವನದ ಬಗ್ಗೆ ಅವರೇ ನಿರ್ಧಾರ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅವರ ನಿರ್ಧಾರಕ್ಕೆ ನನ್ನ ಆಶೀರ್ವಾದ ಯಾವಾಗಲೂ ಇರುತ್ತದೆ ಎಂದು ನಟ ಸುದ್ದಿಗಾರರಿಗೆ ತಿಳಿಸಿದರು.

ಅಥಿಯಾ ಮತ್ತು ರಾಹುಲ್ ಇಬ್ಬರೂ ತಮ್ಮ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ನಟಿ ಅಥಿಯಾ ಶೆಟ್ಟಿ ಕೊನೆಯದಾಗಿ ಮೋತಿಚೂರ್ ಚಕ್ನಾಚೂರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ರಾಮ ರಾಮ ರೇ ಎಂದ ಖೈದಿ 'ಮ್ಯಾನ್ ಆಫ್ ದಿ ಮ್ಯಾಚ್'ನಲ್ಲಿ ನಿರ್ದೇಶಕನಾದ ಕಥೆ..

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.