ETV Bharat / bharat

ನಾನು ಸಿಎಂ ಹುದ್ದೆ ರೇಸ್​ನಲ್ಲಿಲ್ಲ: ಪ್ರಬಲ ಆಕಾಂಕ್ಷಿ ಸುಖವಿಂದರ್ ಸಿಂಗ್ ಸುಖು ಹೇಳಿಕೆ - ಹೈಕಮಾಂಡ್​ ಅಂಗಳದಲ್ಲಿ ಹಿಮಾಚಲ ಸಿಎಂ ಆಯ್ಕೆ ಚೆಂಡು

ಹಿಮಾಚಲಪ್ರದೇಶದಲ್ಲಿ ಸಿಎಂ ಆಯ್ಕೆ ಕಗ್ಗಂಟು ಹೈಕಮಾಂಡ್​ ಅಂಗಳದಲ್ಲಿದೆ. ಈ ನಡುವೆಯೇ ಸಿಎಂ ಪ್ರಬಲ ಆಕಾಂಕ್ಷಿ ಸುಖವಿಂದರ್ ಸಿಂಗ್ ಸುಖು ಹೇಳಿಕೆ ಪಕ್ಷದಲ್ಲಿ ಸಂಚಲನ ಉಂಟು ಮಾಡಿದೆ.

sukhwinder-singh-in-himachal-cm-race
ಸುಖವಿಂದರ್ ಸಿಂಗ್ ಸುಖು ಸಂಚಲನ ಹೇಳಿಕೆ
author img

By

Published : Dec 10, 2022, 1:17 PM IST

ಹಮೀರ್‌ಪುರ(ಹಿಮಾಚಲಪ್ರದೇಶ): ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಜೊತೆಗೆ ಗುದ್ದಾಡಿ ಅಧಿಕಾರ ಪಡೆದಿರುವ ಕಾಂಗ್ರೆಸ್​, ಈಗ ಸಿಎಂ ಆಯ್ಕೆಯ ಗೊಂದಲದಲ್ಲಿದೆ. ಮುಖ್ಯಮಂತ್ರಿ ಆಕಾಂಕ್ಷಿಗಳಾಗಿ ಪ್ರತಿಭಾ ಸಿಂಗ್, ಮುಖೇಶ್ ಅಗ್ನಿಹೋತ್ರಿ ಮತ್ತು ಸುಖವಿಂದರ್ ಸಿಂಗ್ ಸುಖು ಅವರು ರೇಸ್​ನಲ್ಲಿದ್ದು, ಆಯ್ಕೆಯ ಚೆಂಡು ಹೈಕಮಾಂಡ್​ ಅಂಗಳದಲ್ಲಿದೆ.

ಈ ಎಲ್ಲಾ ಗೊಂದಲ ನಡುವೆಯೇ ಸುಖ್ವಿಂದರ್ ಸಿಂಗ್ ಸುಖು ಅವರು ನೀಡಿದ ಹೇಳಿಕೆ ಸಂಚಲನ ಉಂಟು ಮಾಡಿದೆ. "ನಾನು ಸಿಎಂ ಆಗುವ ರೇಸ್‌ನಲ್ಲಿ ಇಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಒಪ್ಪಿಕೊಳ್ಳುತ್ತೇನೆ" ಎಂದು ಸಿಂಗ್ ಹೇಳಿದ್ದಾರೆ.

  • Shimla, HP | Congress party is standing shoulder to shoulder with Congress High Command. In the resolution that was passed today, it was said that whatever decision the High Command makes, the party will accept it: Congress leader Sukhvinder Singh Sukhu on CLP meeting pic.twitter.com/vvuxs3Ku5r

    — ANI (@ANI) December 9, 2022 " class="align-text-top noRightClick twitterSection" data=" ">

"ನಾನು ನಿಷ್ಠಾವಂತ ಕಾರ್ಯಕರ್ತ ಮತ್ತು ಯಾವಾಗಲೂ ಕಾರ್ಯಕರ್ತನಾಗಿಯೇ ಕೆಲಸ ಮಾಡಿದ್ದೇನೆ. ಯಾವತ್ತೂ ಹುದ್ದೆಗಾಗಿ ಆಸೆ ಪಟ್ಟವನಲ್ಲ. ಪಕ್ಷ ಈ ಹಿಂದೆ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿತ್ತು. ಹೈಕಮಾಂಡ್​ ಆದೇಶವನ್ನು ಪಾಲಿಸುವುದು ನನ್ನ ಕರ್ತವ್ಯ" ಎಂದು ಸುಖು ಹೇಳಿದರು.

ಬಣ ರಾಜಕೀಯ ಜೋರು: ಶುಕ್ರವಾರ ತಡರಾತ್ರಿ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಿಎಂ ಆಯ್ಕೆಗೆ ಒಮ್ಮತ ಮೂಡಿಬರಲಿಲ್ಲ. ಪ್ರತಿಭಾ ಸಿಂಗ್, ಮುಖೇಶ್ ಅಗ್ನಿಹೋತ್ರಿ ಮತ್ತು ಸುಖವಿಂದರ್ ಸಿಂಗ್ ಸುಖು ಅವರ ಬೆಂಬಲಿಗರು ತಮ್ಮ ನಾಯಕರ ಪರವಾಗಿ ಘೋಷಣೆ ಕೂಗಿದರು. ಇದು ಆಯ್ಕೆಯನ್ನು ಇನ್ನಷ್ಟು ಕಗ್ಗಂಟಾಗಿಸಿತು.

ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಾಜೀವ್ ಶುಕ್ಲಾ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಸೌಹಾರ್ದಯುತ ನಡೆಯಿತು. ಸಿಎಂ ಆಯ್ಕೆ ವಿಚಾರ ಹೈಕಮಾಂಡ್ ಕೈಗೊಳ್ಳಲಿದೆ. ಯಾವುದೇ ನಿರ್ಧಾರ ಬಂದರೂ ಅದನ್ನು ಸಭೆ ಒಪ್ಪುವ ನಿರ್ಧಾರಕ್ಕೆ ಬಂದಿದೆ ಎಂದರು.

ಮುಂಚೂಣಿಯಲ್ಲಿ ಪ್ರತಿಭಾ, ಸುಖು: ಹಿಮಾಚಲದಲ್ಲಿ ಸಿಎಂ ಸ್ಥಾನಕ್ಕೆ ಹಲವು ಮಂದಿ ಆಕಾಂಕ್ಷಿಗಳಿದ್ದರೂ, ಪಕ್ಷದ ರಾಜ್ಯಾಧ್ಯಕ್ಷೆ ಪ್ರತಿಭಾ ಸಿಂಗ್ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ಸುಖವಿಂದರ್ ಸುಖು ಅವರು ಮುಂಚೂಣಿಯಲ್ಲಿದ್ದಾರೆ. ಮುಖೇಶ್ ಅಗ್ನಿಹೋತ್ರಿ, ರಾಜೇಂದ್ರ ರಾಣಾ, ಚಂದ್ರ ಕುಮಾರ್ ಮತ್ತು ಧನಿರಾಮ್ ಶಾಂಡಿಲ್ ಕೂಡ ಸಿಎಂ ಹುದ್ದೆ ರೇಸ್‌ಗೆ ಪ್ರವೇಶಿಸಿದ್ದಾರೆ.

ಪಕ್ಷದಲ್ಲಿ ಮೂರು ಬಣಗಳಿದ್ದು, ಸಭೆಗಳ ಮೇಲೆ ಸಭೆ ನಡೆಸಲಾಗುತ್ತಿದೆ. ಇದು ಉಸ್ತುವಾರಿ ರಾಜೀವ್ ಶುಕ್ಲಾ, ವೀಕ್ಷಕರಾಗಿರುವ ಛತ್ತೀಸ್​ಗಢ ಸಿಎಂ ಭೂಪೇಶ್ ಬಘೇಲ್ ಮತ್ತು ಭೂಪೇಂದ್ರ ಹೂಡಾರಿಗೆ ತಲೆನೋವಾಗಿದೆ.

ಓದಿ: ಹಿಮಾಚಲದಲ್ಲಿ ಸಿಎಂ ಪಟ್ಟಕ್ಕಾಗಿ ಬಡಿದಾಟ.. ಹೈಕಮಾಂಡ್​​ ಅಂಗಳದಲ್ಲಿ ನೂತನ ಸಾರಥಿ ಆಯ್ಕೆ ವಿಚಾರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.