ETV Bharat / bharat

ಆರೋಪ ತಪ್ಪೆಂದು ಸಾಬೀತುಪಡಿಸಿ ಇಲ್ಲವೇ ರಾಜೀನಾಮೆ ನೀಡಿ: ಸಿಎಂ ಕೇಜ್ರಿವಾಲ್​ಗೆ ಸುಕೇಶ್ ಸವಾಲು - ಲೆಫ್ಟಿನೆಂಟ್ ಗವರ್ನರ್ ಅವರಿಗೆ ಬರೆದ ಪತ್ರ

ಲೆಫ್ಟಿನೆಂಟ್ ಗವರ್ನರ್ ಅವರಿಗೆ ಬರೆದ ಪತ್ರ ತಪ್ಪಾದಲ್ಲಿ ಯಾವುದೇ ಕಾನೂನು ಹೋರಾಟಕ್ಕೂ ಸಿದ್ಧ. ಅದಕ್ಕಾಗಿ ಗಲ್ಲಿಗೇರಲೂ ಸಿದ್ಧ. ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ಮುಖ್ಯಮಂತ್ರಿಗೆ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಅವರು ರಾಜೀನಾಮೆ ನೀಡಬೇಕು. ಇಡೀ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಸುಕೇಶ್ ಆಗ್ರಹ ಮಾಡಿದ್ದಾರೆ.

ಆರೋಪ ತಪ್ಪೆಂದು ಸಾಬೀತುಪಡಿಸಿ, ಇಲ್ಲಾ ರಾಜೀನಾಮೆ ನೀಡಿ: ಸಿಎಂ ಕೇಜ್ರಿವಾಲ್​ಗೆ ಸುಕೇಶ್ ಸವಾಲು
sukeshs-letter-bomb-released-now-demands-resignation-from-kejriwal-after-cbi-probe-into-allegations
author img

By

Published : Nov 8, 2022, 3:55 PM IST

ನವದೆಹಲಿ: ವಂಚನೆಯ ಆರೋಪದಲ್ಲಿ ಜೈಲುಪಾಲಾಗಿರುವ ಸುಕೇಶ ಚಂದ್ರಶೇಖರ್ ಮತ್ತೊಮ್ಮೆ ಪತ್ರವೊಂದನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. ಅಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ತಾವು ಬರೆದ ಪತ್ರಗಳ ಸಮಯವನ್ನು ಈ ಮೂಲಕ ಅವರು ಬಹಿರಂಗಪಡಿಸಿದ್ದಾರೆ. ಕೇಜ್ರಿವಾಲ್ ವಿರುದ್ಧ ತಾವು ಮಾಡಿದ ಆರೋಪಗಳನ್ನು ಒಂದೋ ಅವರು ತಪ್ಪೆಂದು ಸಾಬೀತುಪಡಿಸಲಿ ಅಥವಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದ್ದಾರೆ.

ಜೈಲಿನಿಂದಲೇ ನಾಲ್ಕನೇ ಪತ್ರ ಬರೆದ ಸುಕೇಶ್​; ಜೈಲಿನಿಂದ ಬರೆದ ನಾಲ್ಕನೇ ಪತ್ರದಲ್ಲಿ ಸುಕೇಶ್ ಚಂದ್ರಶೇಖರ್ ಅವರು ಜೈಲು ಆಡಳಿತ ಮತ್ತು ದೆಹಲಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಅವರ ಬೆದರಿಕೆ ಮತ್ತು ಒತ್ತಡದಿಂದಾಗಿ ಕಾನೂನಿನ ಮೊರೆ ಹೋಗುವುದು ಸರಿ ಎನಿಸಿತು ಎಂದಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಅವರಿಗೆ ಪತ್ರ ಬರೆಯುವಂತೆ ಯಾರೊಬ್ಬರೂ ಎಲ್ಲಿಂದಲೂ ಒತ್ತಡ ಹೇರಿಲ್ಲ.

ನಾನು ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಶಿಷ್ಯನಲ್ಲ. ನಾನು ಯಾರಿಗೂ ಹೆದರಲ್ಲ ಎಂದು ಹೇಳಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಅವರಿಗೆ ಬರೆದ ಪತ್ರ ತಪ್ಪಾದಲ್ಲಿ ಯಾವುದೇ ಕಾನೂನು ಹೋರಾಟಕ್ಕೂ ಸಿದ್ಧ. ಅದಕ್ಕಾಗಿ ಗಲ್ಲಿಗೇರಲೂ ಸಿದ್ಧ. ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ಮುಖ್ಯಮಂತ್ರಿಗೆ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಅವರು ರಾಜೀನಾಮೆ ನೀಡಬೇಕು. ಇಡೀ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಸುಕೇಶ್ ಆಗ್ರಹಿಸಿದ್ದಾರೆ.

ಸತ್ಯೇಂದ್ರ ಜೈನ್​​​​​​​​​ ಚುನಾವಣೆಗಾಗಿ ಹಣ ಕೇಳಿದ್ದರು: ಜೈಲು ಆಡಳಿತ ಮತ್ತು ಸಚಿವ ಸತ್ಯೇಂದ್ರ ಜೈನ್ ಬೆದರಿಕೆ ಮತ್ತು ಒತ್ತಡಹೇರುವ ಮೂಲಕ ಪಂಜಾಬ್ ಹಾಗೂ ಗೋವಾ ಚುನಾವಣೆಗಳಿಗಾಗಿ ಹಣ ಕೇಳಿದ್ದರು. ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಇದೆಲ್ಲ ನಡೆದಿದೆ. ಸತತವಾಗಿ ಬೆದರಿಕೆಗಳ ಕಾರಣದಿಂದ ತಾವು ಕಾನೂನಿನ ಮೊರೆ ಹೋಗಬೇಕಾಯಿತು ಮತ್ತು ಉಪರಾಜ್ಯಪಾಲರಿಗೆ ದೂರು ನೀಡಬೇಕಾಯಿತು.

ಸುಕೇಶ ಇದೆಲ್ಲವನ್ನೂ ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾನೆ ಎಂದು ಆಮ್ ಆದ್ಮಿ ಪಕ್ಷದವರು ಹೇಳುತ್ತಿದ್ದಾರೆ. ಆದರೆ ಇವರು ಚುನಾವಣೆಗಳ ಸಮಯದಲ್ಲೇ ಇದೆಲ್ಲ ಆರೋಪ ಮಾಡುತ್ತಿರುವುದೇಕೆ? ಸಿಬಿಐ ಮತ್ತು ಇಡಿ ನನ್ನ ವಿಚಾರಣೆ ನಡೆಸುತ್ತಿದ್ದಾಗ ಇವರೆಲ್ಲಿದ್ದರು ಎಂದು ಸುಕೇಶ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಇದನ್ನುಓದಿ: ರಾಜ್ಯದಲ್ಲಿ ಈ ವರ್ಷ ಹೆಚ್ಚು ಪೊಲೀಸರು ಸಸ್ಪೆಂಡ್: ಕಳೆದ 4 ವರ್ಷಗಳಲ್ಲೇ ಅಧಿಕ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.