ETV Bharat / bharat

ಯುವತಿ ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿ ವಿಲೇವಾರಿಗೆ ಹೊರಟಾಗ ಸಿಕ್ಕಿಬಿದ್ದ ಭಗ್ನಪ್ರೇಮಿ! - ಸೂಟ್‌ಕೇಸ್​ನಲ್ಲಿ ಹೆಣ ಪತ್ತೆ ಪ್ರಕರಣ

ಗುರುವಾರ ತಡರಾತ್ರಿ ಘೋಷಿಯನ್ ಜ್ವಾಲಾಪುರದ ನಿವಾಸಿ ಸನ್ನವರ್ ಅವರ ಪುತ್ರ ಗುಲ್ಜೆಬ್ ಎಂಬಾತ ರೂರ್ಕಿಯ ಪಿರಾನ್ ಕಲಿಯಾರ್‌ನಲ್ಲಿರುವ ಅತಿಥಿ ಗೃಹದಲ್ಲಿ ಕೊಠಡಿ ತೆಗೆದುಕೊಂಡಿದ್ದ. ಈ ಗೆಸ್ಟ್ ಹೌಸ್‌ಗೆ ತನ್ನ ಗೆಳತಿ ರಂಷಾ ಜೊತೆ ಆತ ಬಂದಿದ್ದ. ಕೆಲವು ಗಂಟೆಗಳ ನಂತರ ಗುಲ್ಜೆಬ್ ಭಾರವಾದ ಸೂಟ್‌ಕೇಸ್‌ನೊಂದಿಗೆ ಹೋಟೆಲ್‌ನಿಂದ ಹೊರಬಂದಿದ್ದಾನೆ.

ಸೂಟ್‌ಕೇಸ್​ನಲ್ಲಿ ಹೆಣ ಪತ್ತೆ ಪ್ರಕರಣ: ಮದುವೆ ನಿರಾಕರಿಸಿದ್ದಕ್ಕೆ ಪ್ಲಾನ್​ ಮಾಡಿ ಕೊಂದಿದ್ದ ಕಿರಾತಕ!

author img

By

Published : Mar 25, 2022, 9:54 PM IST

ರೂರ್ಕಿ (ಹರಿದ್ವಾರ): ಗುರುವಾರ ರಾತ್ರಿ ಪಿರಾನ್ ಕಲಿಯಾರ್‌ನ ಹೊಟೇಲ್‌ನಲ್ಲಿ ಸೂಟ್‌ಕೇಸ್‌ನಲ್ಲಿ ಯುವತಿಯ ಶವ ಪತ್ತೆಯಾಗಿದ್ದು ಬಂಧಿತ ಪ್ರೇಮಿಯ ಆತ್ಮಹತ್ಯೆಯ ಕಥೆಗೆ ತಿರುವು​ ಸಿಕ್ಕಿದೆ. ಘಟನೆಯನ್ನು ಬಹಿರಂಗಪಡಿಸಿದ ಗ್ರಾಮಾಂತರ ಎಸ್‌ಪಿ ಪ್ರಮೇಂದ್ರ ದೋಭಾಲ್, ಯುವತಿಯನ್ನು ಬಂಧಿತ ಆರೋಪಿ ಕೊಂದಿದ್ದಾನೆ ಮತ್ತು ಶವವನ್ನು ಸೂಟ್‌ಕೇಸ್‌ನಲ್ಲಿ ವಿಲೇವಾರಿ ಮಾಡಲು ಕೊಂಡೊಯ್ಯುತ್ತಿದ್ದ ಎಂದು ತಿಳಿಸಿದ್ದಾರೆ.

ಪೊಲೀಸರು ಈ ಸಂಬಂಧ ವಿವರವಾದ ಮಾಹಿತಿ ನೀಡಿದ್ದು, ಯುವತಿಯ ನಕಲಿ ಗುರುತಿನ ಚೀಟಿ ಬಳಸಿ ಹೋಟೆಲ್‌ನಲ್ಲಿ ಕೊಠಡಿ ಪಡೆಯಲಾಗಿತ್ತಂತೆ. ಈ ಯುವತಿ ಮಂಗಳೂರು(ಉತ್ತರಾಖಂಡ) ನಿವಾಸಿಯಾಗಿದ್ದು, ಆರೋಪಿ ಯುವಕನ ದೂರದ ಸಂಬಂಧಿಯೂ ಆಗಿದ್ದಳು ಎಂದು ಹೇಳಿದ್ದಾರೆ.

ಹೆಚ್ಚಿನ ವಿವರ: ಗುರುವಾರ ತಡರಾತ್ರಿ ಘೋಷಿಯನ್ ಜ್ವಾಲಾಪುರದ ನಿವಾಸಿ ಸನ್ನವರ್ ಅವರ ಪುತ್ರ ಗುಲ್ಜೆಬ್ ಎಂಬಾತ ರೂರ್ಕಿಯ ಪಿರಾನ್ ಕಲಿಯಾರ್‌ನಲ್ಲಿರುವ ಅತಿಥಿ ಗೃಹದಲ್ಲಿ ಕೊಠಡಿ ತೆಗೆದುಕೊಂಡಿದ್ದ. ಗೆಸ್ಟ್ ಹೌಸ್ ಗೆ ತನ್ನ ಗೆಳತಿ ರಂಷಾ ಜೊತೆ ಆತ ಬಂದಿದ್ದಾನೆ. ಕೆಲವು ಗಂಟೆಗಳ ನಂತರ ಗುಲ್ಜೆಬ್ ಭಾರವಾದ ಸೂಟ್‌ಕೇಸ್‌ನೊಂದಿಗೆ ಹೋಟೆಲ್‌ನಿಂದ ಹೊರಬಂದಿದ್ದಾನೆ. ಹೋಟೆಲ್ ಸಿಬ್ಬಂದಿ ಅವನ ವರ್ತನೆ ನೋಡಿ ಶಂಕಿಸಿದ್ದಾರೆ. ಬಳಿಕ ಆತನನ್ನು ಹಿಡಿದು ಸೂಟ್‌ಕೇಸ್ ತೆರೆದು ನೋಡಿದಾಗ ಅದರಲ್ಲಿ ಯುವತಿಯ ಶವ ಪತ್ತೆಯಾಗಿದೆ.

ಸೂಟ್‌ಕೇಸ್​ನಲ್ಲಿ ಹೆಣ ಪತ್ತೆ ಪ್ರಕರಣ: ಮದುವೆ ನಿರಾಕರಿಸಿದ್ದಕ್ಕೆ ಪ್ಲಾನ್​ ಮಾಡಿ ಕೊಂದಿದ್ದ ಕಿರಾತಕ!
ಸೂಟ್‌ಕೇಸ್‌ನಲ್ಲಿ ಯುವತಿಯ ಮೃತದೇಹ

ಹೋಟೆಲ್ ಸಿಬ್ಬಂದಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಪೊಲೀಸರು ಆತನನ್ನು ವಶಕ್ಕೆ ಪಡೆದು ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರುದಿನ ಅಂದರೆ ಇಂದು ಶುಕ್ರವಾರ ರೂರ್ಕಿ ಪೊಲೀಸರು ಘಟನೆಯ ಬಗ್ಗೆ ಸತ್ಯಾಂಶ ಕಂಡುಕೊಂಡಿದ್ದಾರೆ. ಆರೋಪಿ ಗುಲ್ಜೆಬ್ ಯುವತಿಯನ್ನು ಕೊಂದಿದ್ದಾನೆ ಎಂದು ಗ್ರಾಮಾಂತರ ಎಸ್ಪಿ ಪ್ರಮೇಂದ್ರ ದೋಭಾಲ್ ತಿಳಿಸಿದ್ದಾರೆ.

ಯುವತಿಯ ಕುಟುಂಬಸ್ಥರು ಆರೋಪಿ ಜೊತೆ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಂತೆ. ಯುವತಿ ಕೂಡ ಆಕೆಯ ಕುಟುಂಬದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಳಂತೆ. ಇದರಿಂದ ಕೋಪಗೊಂಡ ಪ್ರೇಮಿ, ಗೆಳತಿಯನ್ನು ಕೊಲೆ ಮಾಡಿ, ಶವವನ್ನು ಸೂಟ್‌ಕೇಸ್‌ನಲ್ಲಿ ಹಾಕಿ, ವಿಲೇವಾರಿ ಮಾಡಲು ಮುಂದಾದ ವೇಳೆ ಸಿಕ್ಕಿಬಿದ್ದಿದ್ದಾನೆ.

ಆತ್ಮಹತ್ಯೆಯ ಕಥೆ ಸುಳ್ಳಾಯಿತು: ಆರಂಭದಲ್ಲಿ ಆರೋಪಿ ಗುಲ್ಜೇಬ್ ಹೋಟೆಲ್ ಸಿಬ್ಬಂದಿಗೆ ಸಿಕ್ಕಿಬಿದ್ದಾಗ ಆತ ಹೇಳಿದ್ದು ಬೇರೆಯದೇ ಕಥೆ. ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದೇವೆ ಎಂದು ಹೇಳಿದ್ದಾನೆ. ಆದರೆ, ಆಕೆ ಮೊದಲೇ ವಿಷ ಸೇವಿಸಿ ಸಾವನ್ನಪ್ಪಿದ್ದಾಳೆ. ಆಕೆಯ ಶವವನ್ನು ಗಂಗ್ನಾಹರ್‌ನಲ್ಲಿ ವಿಲೇವಾರಿ ಮಾಡಿದ ನಂತರ ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದ. ಇನ್ನು ಗುಲ್ಜೇಬ್ ಸಂಪೂರ್ಣ ಪ್ಲಾನ್ ಮಾಡಿಕೊಂಡೇ ಘಟನೆ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸೂಟ್‌ಕೇಸ್ ಅನ್ನು ಈ ಕಾರಣಕ್ಕಾಗಿಯೇ ರೆಡಿ ಮಾಡಿ ಇಟ್ಟುಕೊಂಡಿದ್ದನಂತೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.